Walking Reduce traffic and Pollution: ಬೆಂಗಳೂರು ನಗರದಲ್ಲಿನ ವಾಯು ಮಾಲೀನ್ಯ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ 1 ಕಿಮೀ ನಡಿಗೆಯ ಚಾಲೆಂಜ್ (1 KM Walk Challenge)ಅನ್ನು ಪ್ರಾರಂಭಿಸಿದೆ.
ಬೆಂಗಳೂರು ನಾಗರಿಕರು ಒಂದು ಕಿಲೋಮೀಟರ್ ದೂರದ ಪ್ರಯಾಣಕ್ಕೂ ಸ್ವಂತ ವಾಹನ ಇಲ್ಲವೆ ಸಾರಿಗೆಯನ್ನು ಅತೀ ಹೆಚ್ಚಾಗಿ ಅವಲಂಬಿಸುವ ಬದಲು, ನಡೆದುಕೊಂಡು ಹೋಗುವಂತೆ ಬೆಂಗಳೂರು ನಾಗರೀಕರಲ್ಲಿ ಮನವಿ ಮಾಡಿದೆ. ಅಟೋ ಅಥವಾ ಇನ್ನಿತರ ಯಾವುದೇ ಸಾರಿಗೆಯನ್ನು ಬಳಸುವ ಬದಲು ಉತ್ತಮ ಆರೋಗ್ಯಕ್ಕಾಗಿ ನಡಿಗೆ ಮೂಲಕ ತೆರಳಲು ಮನವಿ ಮಾಡಿದೆ.
ಈ ಸಣ್ಣ ಪ್ರಮಾಣದ ದೂರವನ್ನು ಕಾಲ್ನಡಿಗೆಯಲ್ಲಿ ತೆರಳಿದರೆ, ಸಂಚಾರ ದಟ್ಟಣೆ, ವಾಹನಗಳಿಂದ ಉಂಟಾಗುವ ಹೊಗೆ ಉಂಟಾಗುತ್ತದೆ ಮತ್ತು ದೈಹಿಕ ಚಟುವಟಿಕೆಗಳು ಕಡಿಮೆಯಾಗಲಿವೆ ಈ ಹಿನ್ನೆಲೆಯಲ್ಲಿ ಈ ಕಡಿಮೆ ದೂರದ ಪ್ರಯಾಣವನ್ನು ಕಾಲ್ನಡಿಗೆಯಲ್ಲಿ ತೆರಳುವುದು ಸೂಕ್ತ ಎಂದು ಹೇಳಿದೆ.
ಜಿಬಿಎ ಅಧಿಕಾರಿಗಳ ಪ್ರಕಾರ, 10 ನಿಮಿಷಗಳ ನಡಿಗೆಯು ವ್ಯಕ್ತಿಯ ದೈಹಿಕ ಆರೋಗ್ಯವನ್ನು ಸುಧಾರಿಸುವ ಕ್ರಮವಾಗಿದೆ. ಅಷ್ಟು ದೂರದ ಪ್ರಯಾಣದಿಂದ ಉಂಟಾಗುವ ಹೊಗೆಯ ಪ್ರಮಾಣವನ್ನು ಕಡಿಮೆ ಮಾಡಿದಂತೆ, ಅಲ್ಲದೆ, ಬೆಂಗಳೂರಿನ ರಸ್ತೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ನಗರವನ್ನು ಹೆಚ್ಚು ಪಾದಚಾರಿ ಸ್ನೇಹಿಯನ್ನಾಗಿ ಮಾಡಲು ಸಹಾಯ ಮಾಡುತ್ತದೆ ಎಂದು ವಿವರಿಸಿದ್ದಾರೆ.
Zero Traffic: "ನನ್ನ ಹೆಂಡತಿ ಪ್ರೆಗ್ನೆಂಟ್, ದಾರಿ ಬಿಡಿ!".. ಬೆಂಗಳೂರಲ್ಲಿ ಝೀರೋ ಟ್ರಾಫಿಕ್‌ಗೆ ಬೇಸತ್ತು ರಸ್ತೆ ಮಧ್ಯೆ ಕುಳಿತ ವ್ಯಕ್ತಿ!
ಈ ಸಣ್ಣ ಬದಲಾವಣೆಯು ಬೆಂಗಳೂರಿನ ಪರಿಸರ ರಕ್ಷಣೆಗೆ ಗಮನಾರ್ಹ ಪರಿಣಾಮ ಬೀರಲಿದೆ ಎಂದು ಹೇಳಿದೆ. ಇದಕ್ಕೆ ಬೆಂಗಳೂರು ನಗರ ನಿವಾಸಿಗಳಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರು ನಗರದಲ್ಲಿ ಫುಟ್ ಪಾತ್ ಗಳೇ ಮಾಯವಾಗಿರುವಾಗ ಎಲ್ಲಿಯ ನಡಿಗೆ ಎಂದು ಪ್ರಶ್ನಿಸಿದ್ದಾರೆ.
ಬಳಕೆದಾರರೊಬ್ಬರು, ಜಿಬಿಎ ಇಡೀ ಪೂರ್ವ ಬೆಂಗಳೂರನ್ನು ಅಗೆದು ಹಾಕಿದೆ. ನಾವು ಎಲ್ಲಿ ನಡೆಯುವುದು, ಫುಟ್ ಪಾತ್ ಕಾಣಿಸದೇ ಇದ್ದಾಗ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ದುರ್ವಾಸನೆ ಬೀರುವ ಕಸ, ದೈತ್ಯ ಗುಂಡಿಗಳು, ಕುಣಿದಾಡಿಕೊಂಡು ಹೋಗಬೇಕಾದ ಕಷ್ಟಕ್ಕೆ ನಾವು ಸಿಲುಕಬೇಕಾ ಎಂದು ಪ್ರಶ್ನಿಸಿದ್ದಾರೆ.
ಇನ್ನೊಬ್ಬರು, ಫುಟ್ ಪಾತ್ ಗಳು ಬೀದಿ ವ್ಯಾಪಾರಿಗಳು, ವಾಹನಗಳ ನಿಲುಗಡೆಗಾಗಿ ಉಪಯೋಗಿಸಲಾಗುತ್ತಿದೆ. ಇಲ್ಲವೆ, ಒಡೆದು ಹಾಳಾಗಿರುವ ಪುಟ್ ಪಾತ್ ಗಳಲ್ಲಿ ಫುಟ್ ಪಾತ್ ಎಲ್ಲಿದೆ ಎಂದು ಹುಡುಕುವುದೇ ಒಂದು ದೊಡ್ಡ ಕೆಲಸವಾಗಿದೆ, ನಿಮ್ಮ ಸಲಹೆ ಅತ್ಯಗತ್ಯ ಎಂದಿದ್ದಾರೆ.
ನಮಗೆ ಸರಿಯಾದ ಪಾದಚಾರಿ ಮಾರ್ಗಗಳು ಮತ್ತು ಕಸ ಹಾಕದೆ ನಡೆಯಲು ಜಾಗ ನೀಡಿ, ನಾವು ನಡೆಯುತ್ತೇವೆ. ಆದರೆ ಇಲ್ಲ, ನೀವು ನಮಗೆ ಜ್ಞಾನ ಮಾತ್ರ ನೀಡುತ್ತೀರಿ. ಅದಕ್ಕಾಗಿ, ನೀವು ಹಣವನ್ನು ಖರ್ಚು ಮಾಡಬೇಕಾಗಿಲ್ಲ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಮಾತ್ರ ಹಣ ಖರ್ಚು ಮಾಡಬೇಕಾಗಿದೆ ಎಂದು ಮತ್ತೊಬ್ಬ ಬಳಕೆದಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಮತ್ತೊಬ್ಬ ಬಳಕೆದಾರರು, ದಯವಿಟ್ಟು ಮೊದಲು 1 ಕಿ.ಮೀ. ಪಾದಚಾರಿ ಮಾರ್ಗವನ್ನು ನಿರ್ಮಿಸಿ, ನಂತರ ನಾವು ನಡೆಯಬಹುದು. ಸೈಕಲ್ ಲೇನ್‌ಗಳನ್ನು ನಿರ್ಮಿಸಿ, ನಾವು ಸೈಕಲ್ ತುಳಿಯಬಹುದು. ನಾವು ಆ ಎರಡೂ ಕೆಲಸಗಳನ್ನು ಮಾಡಲು ಸಾಧ್ಯವಾಗದಿದ್ದರೆ 1 ಕಿ.ಮೀ. ಸವಾಲು ಒಳ್ಳೆಯದಲ್ಲ ಎಂದಿದ್ದಾರೆ.
ಈ ಚಾಲೆಂಜ್ ಗೆ ಅನೇಕರು ಬೆಂಬಲ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ನೀಡಿರುವ ಈ 1 ಕಿಮೀ ನಡಿಗೆ ಚಾಲೆಂಜ್ ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ನಗರದಲ್ಲಿ ಕೆಲವೆಡೆ ಒಳ್ಳೆಯ ಫುಟ್ ಪಾತ್ ಗಳಿವೆ, ಆದರೆ, ನಾಗರೀಕರು ಅವುಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು ಮತ್ತು ಅಲ್ಲಿ ಆರಾಮವಾಗಿ ನಡೆಯಬಹುದಾಗಿದೆ ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ.
ಇನ್ನು ಅನೇಕರು ನಗರದ ಬಹುತೇಕ ಫುಟ್‌ಪಾತ್‌ಗಳ ಕಿತ್ತು ಹೋಗಿವೆ, ನಡೆಯಲು ಯೋಗ್ಯವಾಗಿಲ್ಲ. ಬಹುತೇಕ ಫುಟ್‌ಪಾತ್ ಅನ್ನು ವ್ಯಾಪಾರಿಗಳು ಆಕ್ರಮಿಸಿರುತ್ತಾರೆ. ವಾಹನಗಳು ನಿಂತಿರುತ್ತವೆ. ಫುಟ್‌ಪಾತ್ ಸ್ಲ್ಯಾಬ್‌ಗಳು ಮುರಿದು ಹೋಗಿರುತ್ತವೆ. ಗುಂಡಿ, ತಗ್ಗು, ದಿಣ್ಣೆಗಳಿರುತ್ತವೆ. ಕಟ್ಟಡ ಕಟ್ಟುವವರು ತಮ್ಮ ಸಾಮಗ್ರಿ ಸುರಿದಿರುತ್ತಾರೆ. ತ್ಯಾಜ್ಯ ಬಿದ್ದಿರುವುದಂತು ಸರ್ವೇ ಸಾಮಾನ್ಯ. ಅನೇಕ ಸ್ಥಳಗಳಲ್ಲಿ ಮಲ, ಮೂತ್ರ, ಗಲೀಜು ಇರುತ್ತದೆ. ದನಗಳನ್ನು ಕಟ್ಟಿರುತ್ತಾರೆ. ಹೀಗಾಗಿ, ನಗರದ ಫುಟ್‌ಪಾತ್‌ಗಳು ನಡೆಯಲು ಯೋಗ್ಯವಿಲ್ಲ ಎಂದು ನಾಗರಿಕರು ಜಿಬಿಎಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
Read more news like this on kannada.timesnownews.com

