ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದಾರೆ ಮತ್ತು ಅವರೊಂದು ಹೊಸ ಪಕ್ಷ ಕಟ್ಟುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ 2020ರಲ್ಲಿ ಬಿಜೆಪಿ ಸೇರ್ಪಡೆ ಆದರು.
ಆಮೇಲೆ ಅವರು ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆದರೆ AIADMK ಜೊತೆಗಿನ ಮೈತ್ರಿ ವಿಷಯದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರದಿಂದ ಬೇಸರಗೊಂಡೇ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದಿದ್ದರು..ಹಾಗಿದ್ದಾಗ್ಯೂ ಅವರದನ್ನ ಸೂಕ್ಷ್ಮವಾಗಿಯೇ ನಿಭಾಯಿಸಿಕೊಂಡಿದ್ದರು. ಪಕ್ಷದ ವರಿಷ್ಠರ ಜೊತೆ ಭಿನ್ನಾಭಿಪ್ರಾಯವಂತೂ ಇರಲಿಲ್ಲ.
ಅಣ್ಣಾಮಲೈ ಅವರು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ತಮಿಳುನಾಡಿನಾದ್ಯಂತ ಪಕ್ಷ ಸಂಘಟನೆಯಲ್ಲಿ ತಮ್ಮನ್ನ ತೊಡಗಿಸಿಕೊಂಡರು. ಅವರು ಈಗಾಗಲೇ ಅನೇಕರ ಪ್ರೀತಿಗೆ ಭಾಜನರಾಗಿದ್ದಾರೆ. ಅವರೊಬ್ಬ ಸಮರ್ಥ ನಾಯಕ ಎಂದು ಅವರ ಬೆಂಬಲಿಗರು ಒಪ್ಪಿಕೊಂಡಿದ್ದಾರೆ. ಅಣ್ಣಾಮಲೈ ರಾಜಕೀಯ ಜೀವನ ಉಜ್ವಲವಾಗಿರಲಿ, ಅವರು ಮುಂದೊಂದು ದಿನ ತಮಿಳುನಾಡಿನ ಮುಖ್ಯಮಂತ್ರಿಯಾಗಬೇಕು..ದೇಶ ಪ್ರಧಾನಿಯಾಗಬೇಕು ಎಂಬಿತ್ಯಾದಿ ಆಶಯಗಳನ್ನ ಸಾವಿರಾರು ಜನರು ಹೊರಹಾಕುತ್ತಿದ್ದಾರೆ.
ಆದರೂ..ಅಣ್ಣಾಮಲೈ ಅವರಿಗೆ ರಾಜಕೀಯವಾಗಿ, ಬಿಜೆಪಿ ಪಕ್ಷದಲ್ಲಿ ಇದ್ದುಕೊಂಡು ನಿರೀಕ್ಷಿತ ಯಶಸ್ಸನ್ನ ಗಳಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತಮಿಳುನಾಡಲ್ಲಿ ಬಿಜೆಪಿ ಸ್ವತಂತ್ರ್ಯವಾಗಿರಬೇಕು..ಯಾವುದೇ ದ್ರಾವಿಡ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಬಾರದು ಎಂಬ ಅವರ ಸಿದ್ಧಾಂತವನ್ನ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಇನ್ನು ಈ ಬಾರಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಅವರು ಟಿಕೆಟ್ ಪಡೆಯಲಿಲ್ಲ...ಬದಲಿಗೆ ಪ್ರಚಾರಕ್ಕೆ ನಿಂತರು. ಇಡೀ ರಾಜ್ಯದಲ್ಲಿ ಬಿಜೆಪಿ ಒಂದು ಸೀಟ್ ಮಾತ್ರ ಗೆದ್ದಿತ್ತು..
ಅಣ್ಣಾಮಲೈ ಏನಂದ್ರು..?
ಅಣ್ಣಾಮಲೈ ಅವರು ಬಿಜೆಪಿ ಪಕ್ಷ ಬಿಡುತ್ತಿದ್ದಾರೆ, ಹೊಸ ಪಕ್ಷ ಕಟ್ಟುತ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಹರಡುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅವರ ಬೆಂಬಲಿಗರು ದೊಡ್ಡದೊಡ್ಡ ಬ್ಯಾನರ್‌ಗಳನ್ನ ಹಾಕುತ್ತಿದ್ದಾರೆ. ಅದರಲ್ಲೂ ಅವರು ಇಂದು ದೆಹಲಿಗೆ ಹೊರಟ ಮೇಲೆ ಇದು ನಿಜವೇ ಎಂದು ಭಾವಿಸಲಾಗುತ್ತಿದೆ. ಇಂದು ಅವರು ದೆಹಲಿಗೆ ತೆರಳಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಮಾಧ್ಯಮಗಳು ಈ ಪ್ರಶ್ನೆಯನ್ನ ಕೇಳಿವೆ. ಅದಕ್ಕೆ ಉತ್ತರಿಸಿದ ಅಣ್ಣಾಮಲೈ ʼಸ್ವಲ್ಪ ದಿನ ಕಾಯಿರಿ. ನಾವು ಇನ್ನೆರಡು ದಿನಗಳಲ್ಲಿ ಕುಳಿತು ಮಾತನಾಡುತ್ತೇವೆʼ ಎಂದಷ್ಟೇ ಹೇಳಿದ್ದಾರೆ. ತಮ್ಮ ರಾಜೀನಾಮೆ, ಹೊಸ ಪಕ್ಷ ಕಟ್ಟುವ ವಿಷಯವನ್ನ ಅವರು ನಿರಾಕರಿಸುತ್ತಲೂ ಇಲ್ಲ, ಒಪ್ಪಿಕೊಳ್ಳುತ್ತಲೂ ಇಲ್ಲ.
ಅವರ ಹುಟ್ಟುಹಬ್ಬಕ್ಕೂ ಮುನ್ನ ಕೊಯಮತ್ತೂರಿನಾದ್ಯಂತ ಅವರ ಬೆಂಬಲಿಗರು ಹಾಕಿರುವ ದೈತ್ಯ ಪೋಸ್ಟರ್‌ಗಳು ಈ ಊಹಾಪೋಹಕ್ಕೆ ಮತ್ತಷ್ಟು ಪುಷ್ಟಿ ನೀಡಿವೆ. "ನಮ್ಮ ನಾಯಕ, ಬನ್ನಿ ಮತ್ತು ನಮ್ಮನ್ನು ಮುನ್ನಡೆಸಿ" ಎಂಬ ಘೋಷಣೆಗಳನ್ನು ಹೊಂದಿರುವ ಪೋಸ್ಟರ್‌ಗಳು ನಗರದ ಪ್ರಮುಖ ಸ್ಥಳಗಳಲ್ಲಿ ಕಾಣಿಸಿಕೊಂಡಿವೆ. ಇದು ಅಣ್ಣಾಮಲೈ ಬೆಂಬಲಿಗರು ನಡೆಸುತ್ತಿರುವ ಶಕ್ತಿಪ್ರದರ್ಶನ ಎಂದೂ ವಿಶ್ಲೇಷಿಸಲಾಗುತ್ತಿದೆ.
ವೈರಲ್ ಆಡಿಯೋದಿಂದ ಸಚಿವ ಸ್ಥಾನಕ್ಕೆ ಆಪತ್ತು?; ಜಮೀರ್ ಅಹ್ಮದ್ ಖಾನ್ ಕೊಟ್ಟ ಸ್ಪಷ್ಟನೆ ಹೀಗಿದೆ..
ಅಣ್ಣಾಮಲೈ ವಿಚಾರದಲ್ಲಿ ಇನ್ನೊಂದು ಊಹಾಪೋಹ ಕೂಡ ಎದ್ದಿದೆ. ಈಗಾಗಲೇ ಪೆರುಂದುರೈ ವಿಧಾನಸಭಾ ಕ್ಷೇತ್ರದ ಹಾಲಿ ಎಐಎಡಿಎಂಕೆ ಶಾಸಕ ಎಸ್.ಜಯಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ, ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅಣ್ಣಾಮಲೈ ಅವರು ಬಿಜೆಪಿಯನ್ನ ತೊರೆದು, ಈ ಕ್ಷೇತ್ರದಲ್ಲಿ ಸ್ವತಂತ್ರ್ಯವಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರ್ತಿವೆ. ಆದರೆ ಅಣ್ಣಾಮಲೈ ರಾಜೀನಾಮೆ ವಿಷಯವಾಗಿ ರಾಜಕೀಯ ವಿಶ್ಲೇಷಣೆಗಳು ಹೆಚ್ಚುತ್ತಿವೆ. ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಲು ಬಿಡಬಾರದು. ಅವರಿಗೆ ಪಕ್ಷದಲ್ಲಿ ಒಂದು ಪ್ರಮುಖ ಹುದ್ದೆಯನ್ನ ನೀಡಬೇಕು ಎಂದೂ ಹೇಳಲಾಗುತ್ತಿದೆ.
Read more news like this on kannada.timesnownews.com

