ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada Season 12) ಗಿಲ್ಲಿ ನಟ ವಿನ್ ಆಗಿದ್ದಾರೆ. ಗಿಲ್ಲಿಯೇ ವಿನ್ ಆಗಬೇಕು ಎಂಬುದು ಲಕ್ಷಾಂತರ ಅಭಿಮಾನಿಗಳ ಆಸೆಯಾಗಿತ್ತು. ಗಿಲ್ಲಿಯನ್ನ ಗೆಲ್ಲಿಸಲೇಬೇಕು ಎಂದು ಅವರ ಫ್ಯಾನ್ಸ್ ಅಂತೂ ಫಣತೊಟ್ಟು ನಿಂತಿದ್ದರು.
ಗಿಲ್ಲಿ ಪ್ರತಿಭಾವಂತ, ಗಿಲ್ಲಿ ರೈತನ ಮಗ..ಗಿಲ್ಲಿ ನಟನದ್ದು ನಿಷ್ಕಲ್ಮಶ ಮನಸು ಎಂಬಿತ್ಯಾದಿ ಕಾರಣಕ್ಕೆ ಅವರಿಗೆ ಅನೇಕರು ಮತ ಹಾಕಿದ್ದಾರೆ.
ಅದೆಲ್ಲ ಬಿಡಿ..ನಿನ್ನೆ ಫಿನಾಲೆ ದಿನ ಬೆಳಗ್ಗೆಯಿಂದಲೇ ಜಾಲಿವುಡ್‌ನಲ್ಲಿ, ಬಿಗ್‌ಬಾಸ್ ಮನೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಗಿಲ್ಲಿ ಅಭಿಮಾನಿಗಳು ಸೇರಿದ್ದರು..ಸಂಜೆ ಹೊತ್ತಿಗೆ ಅಲ್ಲಿ ಜನದಟ್ಟಣೆ ಜಾಸ್ತಿಯಾಗಿ, ಪೊಲೀಸರು ಕೂಡ ಬರಬೇಕಾಯ್ತು. ಲಾಠಿ ಚಾರ್ಜ್ ಮಾಡಲಾಯಿತು. ಎಲ್ಲಿ ನೋಡಿದ್ರೂ ಗಿಲ್ಲಿ ನಟನ ಕಟೌಟ್‌ಗಳು, ಗಿಲ್ಲಿ ಪರ ಘೋಷಣೆಗಳು. ಕಳೆದ ಒಂದು ತಿಂಗಳಿಂದಲೂ ಮನೆಯ ಹೊರಗಡೆ ಗಿಲ್ಲಿ ಅಭಿಮಾನಿಗಳ ಕ್ರೇಜ್ ಜೋರಾಗಿಯೇ ಇತ್ತು. ಬಹುತೇಕ ಪ್ರತಿ ಮನೆಯಲ್ಲೂ ಗಿಲ್ಲಿ ಅಭಿಮಾನಿಗಳು ಒಬ್ಬರಾದ್ರೂ ಇದ್ದರು..ಒಟ್ನಲ್ಲಿ ಇಷ್ಟು ಸೀಸನ್‌ನಲ್ಲಿ ಯಾವ ಸ್ಪರ್ಧಿಗೂ ಸಿಗದಷ್ಟು ಜನಪ್ರಿಯತೆ ಗಿಲ್ಲಿ ನಟನಿಗೆ ಸಿಕ್ಕಿದೆ..
Explained: ಪ್ರತಿ ಮನೆಯ ನೆಚ್ಚಿನ ಮಗನಾದ 'ಗಿಲ್ಲಿ'! ಖ್ಯಾತ ನಟರಿಗಿಂತ ಹೆಚ್ಚು ಅಭಿಮಾನಿಗಳು, ಇಲ್ಲಿಯವರೆಗೆ ಬಿಗ್ ಬಾಸ್‌ನಲ್ಲಿ ಟ್ರೋಫಿ ಗೆದ್ದವರ ವಿವರ
ಕಂಗಾಲಾಗಿರುವ ಗಿಲ್ಲಿ
ಮನೆಯ ಹೊರಗೆ ತಮ್ಮ ಬಗ್ಗೆ ಇಷ್ಟು ಕ್ರೇಜ್ ಇದೆ ಎನ್ನುವ ಬಗ್ಗೆ ಕಿಂಚಿತ್ತೂ ಗೊತ್ತಿರಲಿಲ್ಲ. ಹಲವು ರಿಯಾಲಿಟಿ ಶೋಗಳನ್ನ ಮಾಡಿದ್ದರೂ ಯಾವುದರಲ್ಲೂ ಗೆದ್ದಿರಲಿಲ್ಲ. ಹೀಗಾಗಿ ಅವರಿಗೆ ತಾನು ಬಿಗ್‌ಬಾಸ್ ರಿಯಾಲಿಟಿ ಶೋ ಗೆಲ್ಲುವ ಬಗ್ಗೆಯೂ ಯಾವುದೇ ನಂಬಿಕೆ ಇರಲಿಲ್ಲ. ತನಗಾಗಿ ಹೊರಗೆ ಇಷ್ಟು ಜನ ಕಾಯುತ್ತಿದ್ದಾರೆ. ತನ್ನ ಗೆಲುವಿಗಾಗಿ ಜನಸಾಗರವೇ ಕಾಯುತ್ತ ನಿಂತಿದೆ ಎಂಬ ವಿಷಯವೇ ಗೊತ್ತಿರಲಿಲ್ಲ.
ನಿನ್ನೆ ಬಿಗ್‌ಬಾಸ್ ಗೆದ್ದು, ಟ್ರೋಫಿ ಗೆದ್ದ ತಕ್ಷಣ ಅವರು ಮೊಬೈಲ್‌ನಲ್ಲಿ ತನ್ನ ವಿಡಿಯೋಗಳನ್ನ ನೋಡಿದ್ದಾರೆ. ಅಭಿಮಾನಿಗಳ ಕ್ರೇಜ್ ನೋಡಿ ಗಿಲ್ಲಿಯೇ ಕಂಗಾಲಾಗಿದ್ದಾರೆ. ಮನೆಯಿಂದ ಹೊರಬಂದ ಬಳಿಕವೂ ಗಿಲ್ಲಿ ನಟ ನರ್ವಸ್ ಆಗಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಗಿಲ್ಲಿ ನಟ ʼನನಗೆ ಇಷ್ಟೊಂದು ಜನರ ಪ್ರೀತಿ ಸಿಕ್ಕಿದ್ದು ಖುಷಿ ಆಗ್ತಿದೆ. ಅದಕ್ಕಿಂತ ಹೆಚ್ಚಾಗಿ ಭಯ ಆಗುತ್ತಿದೆ. ಈ ಪ್ರೀತಿಯನ್ನ ಹೇಗೆ ಹ್ಯಾಂಡಲ್ ಮಾಡಬೇಕು ಗೊತ್ತಾಗುತ್ತಿಲ್ಲ. ನಾನು ಯಾವುದೋ ಜನ್ಮದಲ್ಲಿ ಪುಣ್ಯ ಮಾಡಿದ್ದೆʼ ಎಂದು ಹೇಳಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿ ಹವಾ ಜೋರಾಗಿದೆ. ಅವರ ಊರಲ್ಲಿ ವಿಜಯತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
Read more news like this on kannada.timesnownews.com

