Dailyhunt
Bengaluru Today's Gold Price: ಮತ್ತೆ ಏರಿಕೆ ಕಂಡ ಚಿನ್ನ, ಆಭರಣ ಪ್ರಿಯರಿಗೆ ಭಾರೀ ನಿರಾಶೆ,  ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 300 ರೂಪಾಯಿ ಏರಿಕೆ

Bengaluru Today's Gold Price: ಮತ್ತೆ ಏರಿಕೆ ಕಂಡ ಚಿನ್ನ, ಆಭರಣ ಪ್ರಿಯರಿಗೆ ಭಾರೀ ನಿರಾಶೆ, ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 300 ರೂಪಾಯಿ ಏರಿಕೆ

TimesNowSuddi 1 week ago

Today's Gold Price: ಮದ್ಯಪ್ರಾಚ್ಯದಲ್ಲಿ ನಡೆದ ಸಂಘರ್ಷ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ಚಿನ್ನಾಭರಣಗಳ ಬೆಲೆ ಪ್ರತಿ ನಿತ್ಯ ಏರಿಳಿತ ಕಾಣುತ್ತಿವೆ. ಮೇ 6 ರಂದು ಏರಿಕೆ ಕಂಡಿದ್ದ ಚಿನ್ನ, ಇಂದು ಮತ್ತೆ ಏರಿಕೆ(Gold Price Increased) ಯಾಗಿದೆ.

ಇದರಿಂದ ಆಭರಣ ಪ್ರಿಯರಲ್ಲಿ ಸಾಕಷ್ಟು ನಿರಾಶೆ ಮೂಡಿಸಿದೆ.

ಇಂದು ಎಂಸಿಎಕ್ಸ್ ಮಾರುಕಟ್ಟೆ ಆರಂಭದ ಸಂದರ್ಭದಲ್ಲಿಯೇ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆ ಕಂಡಿವೆ. ಇದರಿಂದ ಶುಭ ಕಾರ್ಯಗಳಿಗೆ ಚಿನ್ನ ಖರೀದಿದಾರರು ಮತ್ತು ಹೂಡಿಕೆದಾರಿರಲ್ಲೂ ತೀವ್ರ ನಿರಾಶೆ ಮೂಡಿಸಿದೆ.

ಬೆಂಗಳೂರಿನಲ್ಲಿ ಮೇ 06 ರಂದು 24 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 295 ರೂಪಾಯಿ ಏರಿಕೆಯಾಗಿತ್ತು. ಅದೇ ರೀತಿಯಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 270 ರೂಪಾಯಿ ಏರಿಕೆಯಾಗಿತ್ತು.

ಅದೇ ರೀತಿಯಲ್ಲಿ ಇಂದು ಏಪ್ರಿಲ್ 07 ರಂದು 24 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 33 ರೂಪಾಯಿ ಏರಿಕೆಯಾದರೆ, 22 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂಪಾಯಿ ಏರಿಕೆ ಕಂಡಿದೆ. ಈ ಏರಿಕೆಯಿಂದಾಗಿ ಆಭರಣ ಖರೀದಿಗೆ ಸಾಕಷ್ಟು ನಿರಾಶೆ ಮೂಡಿಸಿದೆ.

24 ಕ್ಯಾರೆಟ್ ಚಿನ್ನದ ಬೆಲೆ

24 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 33 ರೂಪಾಯಿ ಏರಿಕೆಯಾಗಿದ್ದು, ಇಂದು 15,246 ರೂಪಾಯಿ ದಾಖಲಾಗಿದೆ. ಅದೇ ರೀತಿಯಲ್ಲಿ ನಿನ್ನೆ 15,213 ರೂಪಾಯಿ ದಾಖಲಾಗಿತ್ತು.
Gold Rate Today: ಇಂದಿನ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ, ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 1,950 ರೂ ಏರಿಕೆ, ಆಭರಣ ಪ್ರಿಯರಲ್ಲಿ ತೀವ್ರ ನಿರಾಶೆ
24 ಕ್ಯಾರೆಟ್ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂಪಾಯಿ ಏರಿಕೆಯಾಗಿದ್ದು, ಇಂದು 1,52,460 ರೂಪಾಯಿ ದಾಖಲಾಗಿದೆ. ಅದೇ ರೀತಿಯಲ್ಲಿ ನಿನ್ನೆ 1,52,130 ರೂಪಾಯಿ ದಾಖಲಾಗಿತ್ತು.

22 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂಪಾಯಿ ಏರಿಕೆಯಾಗಿದ್ದು, ಇಂದು 13,975 ರೂಪಾಯಿ ದಾಖಲಾಗಿದೆ. ಅದೇ ರೀತಿಯಲ್ಲಿ ನಿನ್ನೆ 13,945 ರೂಪಾಯಿ ದಾಖಲಾಗಿತ್ತು.

22 ಕ್ಯಾರೆಟ್ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂಪಾಯಿ ಏರಿಕೆಯಾಗಿದ್ದು, ಇಂದು 1,39,750 ರೂಪಾಯಿ ದಾಖಲಾಗಿದೆ. ಅದೇ ರೀತಿಯಲ್ಲಿ ನಿನ್ನೆ 1,39,450 ರೂಪಾಯಿ ದಾಖಲಾಗಿತ್ತು.

18 ಕ್ಯಾರೆಟ್ ಚಿನ್ನದ ಬೆಲೆ

18 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂಪಾಯಿ ಏರಿಕೆಯಾಗಿದ್ದು, ಇಂದು 11,434 ರೂಪಾಯಿ ದಾಖಲಾಗಿದೆ. ಅದೇ ರೀತಿಯಲ್ಲಿ ನಿನ್ನೆ 11,414 ರೂಪಾಯಿ ದಾಖಲಾಗಿತ್ತು.

18 ಕ್ಯಾರೆಟ್ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಏರಿಕೆಯಾಗಿದ್ದು, ಇಂದು 1,14,340 ರೂಪಾಯಿ ದಾಖಲಾಗಿದೆ. ಅದೇ ರೀತಿಯಲ್ಲಿ ನಿನ್ನೆ 1,14,140 ರೂಪಾಯಿ ದಾಖಲಾಗಿತ್ತು.

ಮುಂಬರುವ ಕೆಲವು ದಿನಗಳಲ್ಲಿ ಇದೇ ರೀತಿಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಂಡು ಬರಲಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಇದು ಶುಭ ಕಾರ್ಯ ಮಾಡುವವರು ಮತ್ತು ಅತೀ ಹೆಚ್ಚು ಖರೀದಿ ಮಾಡುವ ಮಹಿಳೆಯರಿಗೆ ತೀವ್ರ ನಿರಾಶೆಯಾಗಿದೆ.

ಇಂದಿನ ಬೆಳ್ಳಿ ಬೆಲೆ

ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆಯಲ್ಲಿಯೂ ಏರಿಕೆ ಕಂಡಿದೆ. ಬೆಳ್ಳಿ ಪ್ರತಿ ಗ್ರಾಂ ಬೆಲೆಯಲ್ಲಿ 5 ರೂಪಾಯಿ ಏರಿಕೆಯಾಗಿದ್ದು, 270 ರೂಪಾಯಿ ದಾಖಲಾಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 5ಸಾವಿರ ರೂಪಾಯಿ ಏರಿಕೆಯಾಗಿದ್ದು, 2,70,000 ರೂಪಾಯಿ ದಾಖಲಾಗಿದೆ. ಮುಂಬರುವ ದಿನಗಳಲ್ಲಿಯೂ ಸಹ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.

Read more news like this on kannada.timesnownews.com

Dailyhunt
Disclaimer: This content has not been generated, created or edited by Dailyhunt. Publisher: TimesNowSuddi