ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರೀ ಮಳೆ ನಗರದಲ್ಲಿ ಅಲ್ಲೋಲ, ಕಲ್ಲೋಲ ಉಂಟು ಮಾಡಿದೆ. ಹಲವು ಜನರ ಸಾವು, ರಸ್ತೆಗೆ ಬಿದ್ದ ಮರ ಸೇರಿದಂತೆ ಸಾಕಷ್ಟು ವಾಹನಗಳು ಜಖಂ ಆಗಿವೆ. ಘಟನೆ ಹಿನ್ನೆಲೆ ಸಿಎಂ, ಡಿಸಿಎಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ ಸರ್ಕಾರಕ್ಕೆ ಇದರಿಂದ ಭಾರೀ ನಷ್ಟ ಸಹ ಆಗಿದೆ.
ಹೌದು, ಬೆಂಗಳೂರಿಗೆ ಬಿದ್ದ ಮಳೆ ವಿವಿಧ ಕಡೆ ತೊಂದರೆಗಳನ್ನು ಉಂಟು ಮಾಡಿದೆ. ಅಲ್ಲದೆ ನಿನ್ನೆ ರಾತ್ರಿ ಸಹ ಭಾರೀ ಮಳೆ ಆಗಿದೆ. ಇದರೊಂದಿಗೆ ಇನ್ನೂ ಒಂದುವಾರಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಮೊನ್ನೆ ಬಿದ್ದ ಭಾರೀ ಮಳೆಯಿಂದ ಬೆಸ್ಕಾಂಗೆ ಲಕ್ಷಾಂತರ ಹಣ ಖರ್ಚು (BESCOM Loss Report) ಆಗಿದೆ.
ಮೊನ್ನೆ ಬಿದ್ದ ಮಳೆ 25 ವರ್ಷಗಳ ದಾಖಲೆ ಮುರಿದಿದೆ. 2001ರ ಏಪ್ರಿಲ್ 19ರಂದು ನಗರದಲ್ಲಿ 108.6 ಮಿಲಿ ಮೀಟರ್ ಮಳೆಯಾಗಿತ್ತು. 2026ರ ಏಪ್ರಿಲ್ 29ರಂದು ಬುಧವಾರ ಸುರಿದ ಮಳೆಯು 111.5 ಮಿಲಿ ಮೀಟರ್ ಆಗಿದೆ. ಈ ಮೂಲಕ 25 ವರ್ಷಗಳ ಬಳಿಕ ಈ ದಾಖಲೆ ಬ್ರೇಕ್ ಆಗಿದೆ. ಮಳೆ ಬಿದ್ದಿದ್ದು ಸಂತಸದ ವಿಚಾರವೇ ಆದರೂ ಈ ಭಾರೀ ಮಳೆ ಸಮಸ್ಯೆಗಳನ್ನು ತಂದೊಡ್ಡಿದೆ. ಇದರಿಂದ ಬೆಸ್ಕಾಂಗೆ 87.32 ಲಕ್ಷ ರೂ. ಹಾನಿಯಾಗಿದೆ.
ಎಷ್ಟು ಕಂಬ ನೆಲಕ್ಕುರುಳಿವೆ?
ಮರ, ಕೊಂಬೆಗಳು ವಿದ್ಯುತ್ ತಂತಿ ಮೇಲೆ ಬಿದ್ದಿವೆ. ಹಲವು ಕಡೆ ವಿದ್ಯುತ್ ಕಂಬಗಳೇ ಮುರಿದಿವೆ. ಇದಕ್ಕಾಗಿ 87.32 ಲಕ್ಷ ರೂಪಾಯಿನಷ್ಟು ಹಾನಿಯಾಗಿದೆ. 186 ವಿದ್ಯುತ್ ಕಂಬಗಳು, 38 ಟ್ರಾನ್ಸ್ ಫಾರ್ಮರ್ಸ್, 0.9 ಕಿಮೀ ಉದ್ದದ ವಿದ್ಯುತ್ ತಂತಿಗಳು ಹಾನಿಯಾಗಿದೆ. ಈ ಮೂಲಕ ನಗರ ವ್ಯಾಪ್ತಿಯಲ್ಲಿ ಸರಿ ಸುಮಾರು 50.52 ಲಕ್ಷ ನಷ್ಟವಾಗಿದೆ.
ಇದರೊಂದಿಗೆ 226 ಮರಗಳು ನೆಲಕ್ಕುರುಳಿದ್ದು, 623 ಮರದ ಕೊಂಬೆಗಳು ಉರುಳಿ ಬಿದ್ದಿವೆ. ಇದರಿಂದ ಮರದ ಕೆಳಗೆ ನಿಲ್ಲಿಸಲಾಗಿದ್ದ ಸಾಕಷ್ಟು ವಾಹನಗಳು ಜಖಂ ಆಗಿವೆ. ಹಾಗೆಯೇ 68 ಕರೆಗಳು ಜಲಾವೃತವಾಗಿವೆ ಎಂಬ ಮಾಹಿತಿ ಇದೆ.
ಬೆಂಗಳೂರು ನಗರವು ಮತ್ತೊಂದು ಸಣ್ಣ ಆದರೆ ಬಿಡುವಿಲ್ಲದ ಪೂರ್ವ ಮಾನ್ಸೂನ್ ಹವಾಮಾನವನ್ನು ಅನುಭವಿಸಲಿದೆ, ಮುಂದಿನ ಕೆಲವು ದಿನಗಳಲ್ಲಿ ಮಳೆ, ಗುಡುಗು ಸಹಿತ ಮಳೆ ಮತ್ತು ಆಲಿಕಲ್ಲು ಮಳೆಯಾಗುವ ನಿರೀಕ್ಷೆಯಿದೆ. ಭಾರತ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಇತ್ತೀಚಿನ ಬುಲೆಟಿನ್ ಪ್ರಕಾರ, ನಗರ ಮತ್ತು ದಕ್ಷಿಣ ಒಳನಾಡಿನ ನೆರೆಯ ಭಾಗಗಳಲ್ಲಿ ಚಾಲ್ತಿಯಲ್ಲಿರುವ ಬಿರುಗಾಳಿ ಮತ್ತು ಮಳೆಯ ಪರಿಸ್ಥಿತಿ ಮೇ 2 ರಿಂದ ಸುಧಾರಿಸಲು ಪ್ರಾರಂಭವಾಗುತ್ತದೆ.
Bengaluru Power Cut: ಬೆಂಗಳೂರು ವಿದ್ಯುತ್ ವ್ಯತ್ಯಯ, WhatsApp ಸಂಖ್ಯೆ ಬಿಡುಗಡೆ; ನಂಬರ್ ಸೇವ್ ಮಾಡಿಟ್ಕೊಳಿ
ಮುನ್ಸೂಚನೆಯ ಪ್ರಕಾರ, ನಗರದಲ್ಲಿ ವ್ಯಾಪಕ ಮಳೆಯಾಗಲಿದ್ದು, ಹಗುರದಿಂದ ಮಧ್ಯಮ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿದ್ದು, ಇದರೊಂದಿಗೆ ಆಲಿಕಲ್ಲು ಮಳೆ ಹಾಗೂ ಗಂಟೆಗೆ 40-60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಗಳಿವೆ. ಇದು ಹಠಾತ್ ಮಳೆ, ಮಿಂಚು ಮತ್ತು ಬಿರುಗಾಳಿಯಿಂದಾಗಿ ಕೆಲವು ಸಣ್ಣಪುಟ್ಟ ಅಡಚಣೆಗಳಿಗೆ ಕಾರಣವಾಗಬಹುದು, ಇದು ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲಲು ಕಾರಣವಾಗಬಹುದು, ಇದರಿಂದಾಗಿ ಜನರು ಗರಿಷ್ಠ ಪ್ರಯಾಣದ ಸಮಯದಲ್ಲಿ ತಿರುಗಾಡಲು ಕಷ್ಟವಾಗುತ್ತದೆ.
ಬುಲೆಟಿನ್ ಪ್ರಕಾರ, ಮೇ 2 ರಿಂದ ಬೆಂಗಳೂರಿನಲ್ಲಿ ಮಳೆಯ ಚಟುವಟಿಕೆ ಗಮನಾರ್ಹವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ, ಇದರ ಪರಿಣಾಮವಾಗಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಪ್ರತ್ಯೇಕ ಮಳೆ ಪ್ರಾರಂಭವಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಇನ್ನೂ ಮಧ್ಯಂತರ ಮಳೆಯಾಗಬಹುದಾದರೂ, ಈ ಬಾರಿ ಅದು ಅಷ್ಟೊಂದು ಗಮನಾರ್ಹ ಪ್ರಮಾಣದಲ್ಲಿ ಇರುವುದಿಲ್ಲ ಎಂದು ಇದು ಸೂಚಿಸುತ್ತದೆ.
Read more news like this on kannada.timesnownews.com

