ಚಾಮರಾಜನಗರ: ರಾಜ್ಯದಲ್ಲಿ ಆಗಾಗ್ಗೆ ಕೆಲವು ವಿಕೃತ ಕಾಮಿಗಳ ಬಗ್ಗೆ ಸುದ್ದಿ ಆಗುತ್ತಲೇ ಇರುತ್ತದೆ. ಅದರಲ್ಲೂ ಈ ರೀತಿಯ ವರದಿಗಳು ಹೆಚ್ಚಾಗಿ ಬೆಂಗಳೂರಿಂದ ಆಗುತ್ತವೆ. ಆದರೆ ಈಗ ಚಾಮರಾಜನಗರದಲ್ಲೂ ಓರ್ವ ಕಾಮುಕ ಸೇರಿಕೊಂಡಿದ್ದಾನೆ. ಈತನಿಗೆ ಕತ್ತಲೆ ಆದರೆ ಸಾಕು ಮಹಿಳೆಯರ ಒಳುಉಡುಪು ಕದಿಯಲು (Underwear Theft) ಮುಂದಾಗುತ್ತಾನೆ.
ಹೌದು,ಈ ರೀತಿಯ ಪ್ರಕರಣಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಈ ಮೂಲಕ ನಾಗರಿಕ ಸಮಾಜ ಒಮ್ಮೆ ಶಾಕ್‌ಗೆ ಒಳಗಾಗುವಂತೆ ಆಗುತ್ತದೆ. ಇನ್ನು ತಡರಾತ್ರಿ ಈ ಸೈಕೋಪಾತ್ ತನ್ನ ವಿಕೃತ ಕೆಲಸ ತೋರಿಸಲು ಬಂದು ಸಿಟಿಟಿವಿ ಕಣ್ಣಿಗೆ ಬಿದ್ದಿದ್ದಾನೆ. ಗಮನಿಸಬೇಕಾದ ವಿಷಯ ಏನೆಂದರೆ ಈತ ಮಹಿಳೆಯರ ವಸ್ತ್ರ ಧರಿಸಿ ಬಂದಿದ್ದಾನೆ.
ನಗರದ ಪಿಡಬ್ಲ್ಯೂಡಿ ಕಾಲೊನಿಯಲ್ಲಿ ಈ ಘಟನೆ ನಡೆದಿದೆ. ತೊಳೆದು ಒಣಹಾಕಿದ್ದ ಒಳಉಡುಪುಗಳನ್ನು ಕದ್ದು ಪರಾರಿ ಆಗುತ್ತಲೇ ಇದ್ದ. ಬೆಳಗ್ಗೆ ಎದ್ದು ನೋಡಿದ್ರೆ ಎಲ್ಲವೂ ಮಾಯವಾಗಿರೋದನ್ನು ನೋಡಿ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದರು. ನಂತರ ಇದನ್ನು ಯಾರು ಮಾಡುತ್ತಿರಬಹುದು ಎಂದು ತಿಳಿಯಲು ಪಿಡಬ್ಲ್ಯೂಡಿ ನಿವಾಸಿ ಗಣೇಶ್ ಪ್ರಸಾದ್ ಅನ್ನೋರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಆತ ನೈಟಿ ಧರಿಸಿ, ಮುಖ ಮುಚ್ಚಿಕೊಂಡು ಬಂದಿದ್ದಾನೆ. ಜೊತೆಗೆ ಒಣಗಲು ಹಾಕಿದ್ದ ಒಳ ಉಡುಪುಗಳನ್ನುಎತ್ತಿಕೊಂಡು ಅಲ್ಲೇ ಹಾಕಿಕೊಂಡಿದ್ದಾನೆ. ಈ ಮೂಲಕ ವಿಕೃತಿ ಮೆರೆದಿದ್ದಾನೆ. ಇದೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯಕ್ಕೆ ಈತನ ವಿರುದ್ಧ ದೂರು ದಾಖಲಾಗಿದೆ.
ಕೆಲವು ಕಡೆ ಮನೆಗಳಲ್ಲಿ ಮಹಿಳೆರು ಒಬ್ಬೊಬ್ಬರೇ ಇರುತ್ತಾರೆ. ಇದು ಗಂಭಿರ ವಿಷಯ. ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಅಲ್ಲದೆ ಪೊಲೀಸರು ಬೀಟ್ ವ್ಯವಸ್ಥೆ ಹೆಚ್ಚು ಮಾಡಬೇಕು ಎಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ.
ಈತನ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಜನರು ಚಿತ್ರ ವಿಚಿತ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಹಾಗೆಯೇ ಕೂಡಲೇ ಆತನನ್ನು ಬಂಧನ ಮಾಡಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ. ಈ ರೀತಿಯ ಘಟನೆಯಿಂದ ನಮಗೆ ರಾತ್ರಿ ಸಮಯದಲ್ಲಿ ತುಂಬಾ ಭಯ ಆಗುತ್ತಿದೆ, ಮಲಗಲು ಹೋದರೆ ನಿದ್ದೆ ಬರುವುದಿಲ್ಲ ಎಂದು ಇಲ್ಲಿನ ಮಹಿಳೆಯರು ನೋವು ತೋಡಿಕೊಂಡಿದ್ದಾರೆ.
ಈ ಭಾಗದಲ್ಲಿ ಜನಸಂಚಾರ ಕಡಿಮೆ, ಈಗ ಬೇಸಿಗೆ ರಜೆ ಇರುವ ಕಾರಣಕ್ಕೆ ಮಕ್ಕಳು ಮನೆಯಲ್ಲಿ ಇರುತ್ತಾರೆ. ಈ ರೀತಿಯ ಸೈಕೋ ಮಕ್ಕಳ ಮೇಲೆ ದಾಳಿ ಮಾಡಬಹುದು ಅಥವಾ ಮನೆಗೆ ನುಗ್ಗಿಚಿನ್ನ ಅಥವಾ ಇನ್ನಿತರೆ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಬಹುದು. ಇದರಿಂದ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಮಾಧ್ಯಮಗಳೊಂದಿಗೆ ತಮ್ಮ ನೋವು ತೋಡಿಕೊಂಡಿದ್ದಾರೆ.
Second Puc Result 2026: ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಪ್ರಕಟ! ಚೆಕ್ ಮಾಡಲು ಈ ಒಂದು ಲಿಂಕ್ ಕ್ಲಿಕ್ ಮಾಡಿ ಸಾಕು
ಬೆಂಗಳೂರಲ್ಲಿನ ಕಾಮುಕ ಅಂದರ್
ಈ ವರ್ಷದ ಆರಂಭದಲ್ಲಿ ವಿದ್ಯಾ ನಗರದ ನಿವಾಸಿಗಳ ದೂರಿನ ಆಧಾರದ ಮೇಲೆ ಕಾಮುಕನನ್ನು ಬಂಧನ ಮಾಡಿದ್ದರು. ಈಗ ಮನೆಯ ಮೇಲ್ಛಾವಣಿ ಮತ್ತು ಅಂಗಳದಲ್ಲಿ ಒಣಗಲು ಬಿಟ್ಟಿರುವ ಒಳ ಉಡುಪುಗಳನ್ನು ಕದಿಯುತ್ತಿದ್ದ. 23 ವರ್ಷದ ವಿಕೃತಕಾಮಿಯನ್ನು ಬಂಧನ ಮಾಡಲಾಗಿದೆ.
ಈತನ ಕೃತ್ಯದ ಬಗ್ಗೆ ತಕ್ಷಣವೇ ಸ್ಥಳೀಯರು ಮಾಹಿತಿ ನೀಡಿದ್ದರು. ಹೊಯ್ಸಳ ಗಸ್ತು ತಂಡ ಆರೋಪಿಯನ್ನು ಆತ ಕೃತ್ಯ ನಡೆಸುವಾಗಲೇ ಬಂಧಿಸಿದೆ. ಆತನನ್ನು ಹೆಬ್ಬಗೋಡಿಯ ಗಣೇಶ ದೇವಸ್ಥಾನದ ಬಳಿಯ ಸೋಮರಾಜ್ ಕಟ್ಟಡದ ನಿವಾಸಿ ಅಮಲ್ ಎನ್ ಅಲಿಯಾಸ್ ಅಜಿತ್ ಕುಮಾರ್ (23) ಎಂದು ಗುರುತಿಸಲಾಗಿದೆ.
'ಗುಜರಾತಿಗಳು ಅನಕ್ಷರಸ್ಥರು' ಎಂಬರ್ಥದಲ್ಲಿ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ವಿಷಾದ ವ್ಯಕ್ತಪಡಿಸಿದ AICC ಅಧ್ಯಕ್ಷ
ನಿವಾಸಿಗಳು ಸಿಸಿಟಿವಿ ದೃಶ್ಯಗಳನ್ನು ಏಕೆ ಪರಿಶೀಲಿಸಿದರು?
ಮಹಿಳೆಯರ ಒಳ ಉಡುಪುಗಳು ಪದೇ ಪದೇ ಕಾಣೆಯಾಗುತ್ತಿರುವುದನ್ನು ನಿವಾಸಿಗಳು ಗಮನಿಸಿದರು. ಇದು ಅವರು ತಮ್ಮ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲು ಕಾರಣವಾಯಿತು.
ಪೊಲೀಸರು ಕ್ರಮ ಕೈಗೊಂಡಿದ್ದಾರೆಯೇ?
ಹೌದು. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಮತ್ತು ಶಂಕಿತನನ್ನು ಗುರುತಿಸಲು ಮತ್ತು ಬಂಧಿಸಲು ತನಿಖೆ ನಡೆಯುತ್ತಿದೆ.
ಕರ್ನಾಟಕದಲ್ಲಿ ಇದೇ ಮೊದಲ ಪ್ರಕರಣವೇ?
ಇಲ್ಲ. ಕರ್ನಾಟಕ ಮತ್ತು ಭಾರತದ ವಿವಿಧ ಭಾಗಗಳಲ್ಲಿ ಮಹಿಳೆಯರ ಉಡುಪುಗಳ ಕಳ್ಳತನಕ್ಕೆ ಸಂಬಂಧಿಸಿದ ಇದೇ ರೀತಿಯ ಘಟನೆಗಳು ವರದಿಯಾಗಿವೆ, ಆದರೂ ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ಮಾಡಲಾಗುತ್ತದೆ.
ತಮ್ಮ ಪ್ರದೇಶದಲ್ಲಿ ಇದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ ಜನರು ಏನು ಮಾಡಬೇಕು?
ತಮ್ಮ ಆವರಣವನ್ನು ಸುರಕ್ಷಿತಗೊಳಿಸಬೇಕು, ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಬೇಕು, ಪುರಾವೆಗಳನ್ನು ಸಂಗ್ರಹಿಸಬೇಕು ಮತ್ತು ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಸಮಸ್ಯೆಯನ್ನು ವರದಿ ಮಾಡಬೇಕು.
Read more news like this on kannada.timesnownews.com

