ಚೆನ್ನೈನ ಚೆಪಾಕ್ ಮೈದಾನದಲ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 18 ವರ್ಷದ ಆಯುಷ್ ಮ್ಹಾತ್ರೆ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದರು. ಚೆನ್ನೈ ಪರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಯುಷ್ ಮ್ಹಾತ್ರೆ 43 ಎಸೆತಗಳಲ್ಲಿ 73 ರನ್ ಗಳಿಸಿದರು. ಈ ವೇಳೆ 169.77 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದ ಮ್ಹಾತ್ರೆ 5 ಸಿಕ್ಸರ್‌ಗಳು ಮತ್ತು 6 ಬೌಂಡರಿಗಳನ್ನು ಬಾರಿಸಿದರು.
ಆಯುಷ್ ಮ್ಹಾತ್ರೆ ಮತ್ತು ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಎರಡನೇ ವಿಕೆಟ್‌ಗೆ 96 ರನ್ ಜೊತೆಯಾಟವಾಡಿದರು.
ಆಯುಷ್ ಮ್ಹಾತ್ರೆ ಇತಿಹಾಸ ಸೃಷ್ಟಿ
ಚೆಪಾಕ್‌ನಲ್ಲಿ CSK ಪರ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಆಯುಷ್ ಮ್ಹಾತ್ರೆ ಪಾತ್ರರಾದರು. ಈ ಹಿಂದೆ ಈ ದಾಖಲೆ ಸುರೇಶ್ ರೈನಾ ಅವರ ಹೆಸರಲ್ಲಿತ್ತು. ಅವರು 21 ವರ್ಷ 148 ದಿನಗಳಲ್ಲಿ 50 ರನ್ ಗಳಿಸಿದ್ದರು. ಮ್ಹಾತ್ರೆ 18 ವರ್ಷ 261 ದಿನಗಳಲ್ಲಿ ಈ ಮೈದಾನದಲ್ಲಿ ತಮ್ಮ ಐಪಿಎಲ್ ಅರ್ಧಶತಕ ಗಳಿಸಿದರು.
ಮ್ಹಾತ್ರೆ ಈಗಾಗಲೇ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ಅವರು ಐಪಿಎಲ್ 2025ರ ಸಮಯದಲ್ಲಿ ಈ ಮೈಲಿಗಲ್ಲು ಸಾಧಿಸಿದ್ದರು. ಐಪಿಎಲ್ 2025ರ ಸಮಯದಲ್ಲಿ ಅವರನ್ನು ಬದಲಿ ಆಟಗಾರನಾಗಿ ಸಹಿ ಮಾಡಲಾಯಿತು ಮತ್ತು ಐಪಿಎಲ್ 2026 ರ ಮಿನಿ-ಹರಾಜಿನ ಮೊದಲು ಅವರನ್ನು ಉಳಿಸಿಕೊಳ್ಳಲಾಯಿತು.
19 ವರ್ಷ ತುಂಬುವ ಮೊದಲು ಅವರ 73 ರನ್‌ಗಳು ಐಪಿಎಲ್‌ನಲ್ಲಿ ಮೂರನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದ್ದು, ಕಳೆದ ಋತುವಿನಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 94 ರನ್ ಗಳಿಸಿದ್ದು ಅವರ ಎರಡನೇ ಅತ್ಯಧಿಕ ಸ್ಕೋರ್ ಆಗಿದೆ. 19 ವರ್ಷ ತುಂಬುವ ಮೊದಲು ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಪೈಕಿ ಅತ್ಯುತ್ತಮ ಸ್ಕೋರ್ ವೈಭವ್ ಸೂರ್ಯವಂಶಿ (ಕಳೆದ ಋತುವಿನಲ್ಲಿ 14 ನೇ ವಯಸ್ಸಿನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 101) ಅವರದ್ದಾಗಿದೆ.
ಬೆಂಗಳೂರಿಗರೇ ನಾಡಿದ್ದು ಮನೆಯಿಂದ ಹೊರಬರುವ ಮುನ್ನ ಎಚ್ಚರ! ಮಧ್ಯಾಹ್ನದ ನಂತರ ಬಹುತೇಕ ಎಲ್ಲಡೆ ಬಂದ್..ಬಂದ್
ಆಯುಷ್ ಬ್ಯಾಟ್ ಗೊಂದಲ:
ಪಂದ್ಯದ ಆರಂಭದಲ್ಲಿ ಆಯುಷ್ ಮ್ಹಾತ್ರೆ ಅವರ ಬ್ಯಾಟ್‌ನ ಅಗಲವನ್ನು ಪರಿಶೀಲಿಸಲು ಅಂಪೈರ್ ಬ್ಯಾಟ್ ಗೇಜ್‌ಗೆ ಸಾಕಷ್ಟು ಸಮಸ್ಯೆ ನೀಡಿತು. ಅವರ ಬ್ಯಾಟ್ ಗೇಜ್ ಮೂಲಕ ಹಾದುಹೋಗಲು ವಿಫಲವಾಯಿತು. ಮ್ಹಾತ್ರೆ ತಕ್ಷಣ ಎರಡನೇ ಬ್ಯಾಟ್‌ಗೆ ಪರೀಶಿಲಸಿದರು ಅದೂ ಸಹ ವಿಫಲವಾಯಿತು. ನಂತರ ಮೂರನೇ ಬ್ಯಾಟ್ ಸಹ ಬ್ಯಾಟ್ ಗೇಜ್‌ನಲ್ಲಿ ಸಿಲುಕಿಕೊಂಡಿತು. ಇದರಿಂದ ಮ್ಹಾತ್ರೆ, ಕ್ರೀಸ್‌ನಲ್ಲಿ ಸಂಪೂರ್ಣವಾಗಿ ಆತಂಕ ಮತ್ತು ಗೊಂದಲದಲ್ಲಿ ಕಾಣುತ್ತಿದ್ದರು.
ಅಂಪೈರ್ ಗೇಜ್ ಅನ್ನು ಹತ್ತಿರದಿಂದ ಪರೀಕ್ಷಿಸಿದಾಗ ಅದು ತಲೆಕೆಳಗಾಗಿದೆ ಎಂದು ಕಂಡುಕೊಂಡರು. ಗೇಜ್ ನೇರಗೊಳಿಸಿದ ತಕ್ಷಣ, ಮ್ಹಾತ್ರೆ ಅವರ ನಿಜವಾದ ಬ್ಯಾಟ್ ಯಾವುದೇ ಅಡಚಣೆಯಿಲ್ಲದೆ ಹಾದುಹೋಯಿತು. ಬದಲಿಗೆ ಅಂಪೈರ್ ಗೇಜ್ ಅನ್ನು ತಲೆಕೆಳಗಾಗಿ ಹಿಡಿದಿದ್ದರಿಂದ. ಈ ಸಂಪೂರ್ಣ ಪ್ರಕ್ರಿಯೆಯ ಸಮಯದಲ್ಲಿ, ಬದಲಿ ಆಟಗಾರರು ಎರಡು ಬಾರಿ ಮೈದಾನಕ್ಕೆ ಬರಬೇಕಾಯಿತು.
CSK vs PBKS ಪ್ಲೇಯಿಂಗ್ 11
ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್ಕುಮಾರ್ ವೈಶಾಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್(ನಾಯಕ), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಆಯುಷ್ ಮ್ಹಾತ್ರೆ, ಸರ್ಫರಾಜ್ ಖಾನ್, ಶಿವಂ ದುಬೆ, ಕಾರ್ತಿಕ್ ಶರ್ಮಾ, ಪ್ರಶಾಂತ್ ವೀರ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಮ್ಯಾಟ್ ಹೆನ್ರಿ, ಖಲೀಲ್ ಅಹ್ಮದ್.
Read more news like this on kannada.timesnownews.com

