Dailyhunt
Daali Dhananjaya and Dhanyatha: ಗಂಡು ಮಗುವಿನ ಪಾಲಕರಾದ ನಟ ಡಾಲಿ ಧನಂಜಯ್‌ ಮತ್ತು ಧನ್ಯತಾ ದಂಪತಿ

Daali Dhananjaya and Dhanyatha: ಗಂಡು ಮಗುವಿನ ಪಾಲಕರಾದ ನಟ ಡಾಲಿ ಧನಂಜಯ್‌ ಮತ್ತು ಧನ್ಯತಾ ದಂಪತಿ

TimesNowSuddi 1 week ago

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ (Daali Dhananjaya) ಮತ್ತು ಧನ್ಯತಾ ಇಂದು ಗಂಡುಮಗುವಿನ ಪಾಲಕರಾಗಿದ್ದಾರೆ. ಧನ್ಯತಾ ಅವರು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಕೆಲವೇ ಹೊತ್ತುಗಳ ಮೊದಲು ಈ ವಿಷಯವನ್ನ ಡಾಲಿ ಧನಂಜಯ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

2 ದಿನಗಳ ಹಿಂದಷ್ಟೇ ಡಾಲಿ ಧನಂಜಯ್‌ ಮತ್ತು ಧನ್ಯತಾ ಅವರು ತಮ್ಮ ಫೋಟೋಗಳನ್ನ ಶೇರ್‌ ಮಾಡಿಕೊಂಡಿದ್ದರು. ʼನಮ್ಮ ಜಗತ್ತು ವಿಸ್ತರಿಸುತ್ತಿದೆʼ ಎಂದು ಹೇಳಿದ್ದರು. ಇದೀಗ ಡಾಲಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಧನ್ಯತಾ ಅವರು ಗರ್ಭಿಣಿ ಎಂಬ ವಿಷಯ ಅಭಿಮಾನಿಗಳಿಗೆ ಮೊದಲೇ ಗೊತ್ತಾಗಿತ್ತು. ಹಾಗಿದ್ದಾಗ್ಯೂ ಇತ್ತೀಚೆಗೆ ಡಾಲಿ ಫೋಟೋವನ್ನ ಹಂಚಿಕೊಂಡಿದ್ದರು. ಅಭಿಮಾನಿಗಳು ಖುಷಿಯಿಂದ ವಿಶ್‌ ಮಾಡಿದ್ದರು. ಇದೀಗ ಅವರು ನವಜಾತ ಶಿಶುವಿನ ಪುಟ್ಟ ಕೈಗಳ ಫೋಟೋವನ್ನ ಕೂಡ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಾವು ಗಂಡುಮಗುವಿನ ಪಾಲಕರಾದ ವಿಷಯವನ್ನ ಹಂಚಿಕೊಂಡಿದ್ದಾರೆ. ಅಪ್ಪ-ಅಮ್ಮನಾದ ಡಾಲಿ ಧನಂಜಯ್‌ ಮತ್ತು ಧನ್ಯತಾರಿಗೆ ಅನೇಕರು ವಿಶ್‌ ಮಾಡಿದ್ದಾರೆ. ಚಿತ್ರರಂಗದ ಗಣ್ಯರು ಶುಭ ಹಾರೈಸಿದ್ದಾರೆ. ಸದ್ಯಕ್ಕೆ ಇವರು ಮಗುವಿನ ಮುಖ ತೋರಿಸಿಲ್ಲ. ಮುಂದಿನ ದಿನಗಳಲ್ಲಿ ಮಗುವಿನ ಮುಖ ಪರಿಚಯಿಸುವ ಸಾಧ್ಯತೆ ಇದೆ. ತಾವು ಕಾಯುತ್ತಿರುವುದಾಗಿ ಅಭಿಮಾನಿಗಳು ಹೇಳಿಕೊಂಡಿದ್ದಾರೆ.

ಅಯ್ಯೋ ..ಇದು ಅಂತಿಂಥ ಸಿನಿಮಾವಲ್ಲ !; 40 ಜನರ ಆತ್ಮಹತ್ಯೆಗೆ ಕಾರಣವಾಗಿದ್ದ ಸಿನಿಮಾ, ನಿರ್ದೇಶಕರಿಗೆ ಆಘಾತವಾಗಿತ್ತು..

ನಟ ಡಾಲಿ ಧನಂಜಯ್‌ ಮತ್ತು ಡಾ. ಧನ್ಯತಾ ಅವರು 2025ರ ಫೆಬ್ರವರಿ 15 ಮತ್ತು 16ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು. ಡಾಲಿ ಹುಟ್ಟೂರಾದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿಯಲ್ಲಿ ಶಾಸ್ತ್ರ-ಸಂಪ್ರದಾಯಗಳು ನೆರವೇರಿದ್ದವು. ನಂತರ ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಡಾಲಿ ಧನಂಜಯ್‌ ಮದುವೆ ಬಹಳ ಅದ್ಧೂರಿಯಾಗಿ ನೆರವೇರಿತ್ತು. ಅವರ ತಮ್ಮ ಅಭಿಮಾನಿಗಳನ್ನೂ ಮದುವೆಗೆ ಆಹ್ವಾನಿಸಿದ್ದರು. ಹಾಗಾಗಿ, ಸಾಕಷ್ಟು ನೂಕುನುಗ್ಗಲು ಕೂಡ ಆಗಿತ್ತು. ಅಂದಹಾಗೇ, ಡಾಲಿ ಧನಂಜಯ್‌ ಮತ್ತು ಧನ್ಯತಾ ಪ್ರೀತಿಸಿ ಮದುವೆಯಾಗಿದ್ದಾರೆ. ಇವರು ಹಲವು ವರ್ಷಗಳ ಕಾಲ ಸ್ನೇಹಿತರಾಗಿದ್ದವರು. ಇಬ್ಬರ ಮನೆಯವರೂ ಒಪ್ಪಿ, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ಜೋಡಿಯನ್ನ ಅನೇಕರು ಮೆಚ್ಚಿಕೊಂಡಿದ್ದರು. ಧನ್ಯತಾ ಅವರು ಪ್ರಸೂತಿ ತಜ್ಞೆಯಾಗಿದ್ದಾರೆ.

ಡಾಲಿ ಧನಂಜಯ್‌ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಕೈಯಲ್ಲಿ ಒಂದಷ್ಟು ಪ್ರಾಜೆಕ್ಟ್‌ಗಳಿವೆ. ಮದರ್‌ ಪ್ರಾಮಿಸ್‌, ಪರಶಕ್ತಿ ಮತ್ತಿತರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಡಾಲಿ ಧನಂಜಯ್‌ ಅವರು ಬಹುಭಾಷಾ ನಟ. ಈಗಾಗಲೇ ಜೆರಾಕ್ಸ್‌ ಎಂಬ ಸರಣಿಯೊಂದಿಗೆ ಒಟಿಟಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿದ್ದು, ಈ ಸರಣಿ ZEE5 ಕನ್ನಡದಲ್ಲಿ ಸ್ಟ್ರೀಮ್ ಆಗಲಿದೆ. ತಮ್ಮ ಬ್ಯಾನರ್ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ವೆಬ್ ಸರಣಿಯನ್ನು ನಿರ್ಮಿಸುವ ಮತ್ತು ನಟಿಸುವ ಮೂಲಕ ಅವರು ತಮ್ಮ ವೃತ್ತಿಜೀವನವನ್ನು ಚಲನಚಿತ್ರಗಳನ್ನು ಮೀರಿ ವಿಸ್ತರಿಸುತ್ತಿದ್ದಾರೆ. ಈ ಸರಣಿ ಫ್ಯಾಂಟಸಿ, ಕಾಮಿಡಿ ಮತ್ತು ಥ್ರಿಲ್ಲರ್ ಅಂಶಗಳನ್ನ ಒಳಗೊಂಡಿದೆ.
ಶ್ರೀನಿಧಿ ಬೆಂಗಳೂರು ಅವರು ಜೆರಾಕ್ಸ್ ಮೂಲಕ ಬರಹಗಾರ ಮತ್ತು ನಿರ್ದೇಶಕರಾಗಿ ಒಟಿಟಿ ಸ್ವರೂಪದಲ್ಲಿ ತಮ್ಮ ಚೊಚ್ಚಲ ನಿರ್ದೇಶನ ಮಾಡಲಿದ್ದಾರೆ. ಚೊಚ್ಚಲ 'ಬ್ಲಿಂಕ್' ಚಿತ್ರದ ಮೂಲಕ ಗಮನ ಸೆಳೆದ ನಂತರ ಶ್ರೀನಿಧಿ, ಕನ್ನಡದ ವಿಶಿಷ್ಟ ಸನ್ನಿವೇಶದಲ್ಲಿ ಬೇರೂರಿರುವ ಗಾಢ ಹಾಸ್ಯ, ಫ್ಯಾಂಟಸಿ ಮತ್ತು ಸಸ್ಪೆನ್ಸ್ ಒಳಗೊಂಡಿರುವ ಸರಣಿಯನ್ನು ನಿರ್ದೇಶಿಸಲಿದ್ದಾರೆ.

Read more news like this on kannada.timesnownews.com

Dailyhunt
Disclaimer: This content has not been generated, created or edited by Dailyhunt. Publisher: TimesNowSuddi