Dailyhunt Logo
  • Light mode
    Follow system
    Dark mode
    • Play Story
    • App Story
DK Shivakumar CM: ರಾಜೀನಾಮೆ ಘೋಷಿಸಿ ಭಾವುಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮುಂದಿನ  ಸಿಎಂ ಎಂದ ಸಿದ್ದು

DK Shivakumar CM: ರಾಜೀನಾಮೆ ಘೋಷಿಸಿ ಭಾವುಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದ ಸಿದ್ದು

TimesNowSuddi 2 weeks ago

ಬೆಂಗಳೂರು : ನಾನು ಎರಡು ವರ್ಷ ಶಾಸಕನಾಗಿ ನಿಮ್ಮ ಜೊತೆಗೇ ಇರುತ್ತೇನೆ, ಡಿಕೆ ಮುಂದಿನ ಸಿಎಂ ಎಂದು ಹೈಕಮಾಂಡ್ ನನಗೆ ಹೇಳಿ ಕಳುಹಿಸಿದೆ, ಅದನ್ನ ನಿಮ್ಮ ಮುಂದೆ ಹೇಳುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಉಪಹಾರಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಬೆಂಗಳೂರಿನ ಸಿಎಂ ನಿವಾಸದಲ್ಲಿ ಇಂದು ಸಚಿವರಿಗೆ ಉಪಹಾರ ಕೂಟ ಏರ್ಪಡಿಸಿದ್ದ ಸಂದರ್ಭದಲ್ಲಿ ಭಾವುಕರಾಗಿ ಸಿಎಂ ಸಿದ್ದರಾಮಯ್ಯ ಈ ವಿಚಾರವನ್ನು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಕೆಲವು ಶಾಸಕರು ಹಾಗೂ ಸಿಎಂ ಸಿದ್ಧರಾಮಯ್ಯ ಸಹ ಕಣ್ಣೀರು ಹಾಕಿದರು ಎಂದು ತಿಳಿದುಬಂದಿದೆ.

ರಾಜಕೀಯದಲ್ಲಿ ಸಕ್ರಿಯವಾಗಿಯೇ ಇರುತ್ತೇನೆ:

ಮುಂದುವರೆದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಇನ್ನೂ ರಾಜಕೀಯದಲ್ಲಿ ಸಕ್ರಿಯವಾಗಿಯೇ ಇರುತ್ತೇನೆ, 2028ರಲ್ಲೂ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರೋಣ, ನಾವೆಲ್ಲರೂ ಸೇರಿ ಈ ಕೆಲಸ ಮಾಡೋಣ ಎಂದು ಸಚಿವರಿಗೆ ಮನವಿ ಮಾಡಿದರು. ನಾನು ರಾಜಕಾರಣದಲ್ಲಿ ಇರೋದಿಲ್ಲ ಎಂದು ಭಾವಿಸಬೇಡಿ, ನಾನು ನಿಮ್ಮೊಂದಿಗೆ ಸಕ್ರೀಯವಾಗಿ ರಾಜಕೀಯದಲ್ಲಿ ಇರುತ್ತೇನೆ, ಒಟ್ಟಾಗಿ ಹೋಗೋಣವೆಂದು ಎಲ್ಲಾ ಸಚಿವರುಗಳಿಗೆ ಮುಖ್ಯಮಂತ್ತರಿ ಸಿದ್ದರಾಮಯ್ಯ ಹೇಳಿದ್ದಾರೆ.


ಸಚಿವರ ಉಪಹಾರ ಕೂಟದಲ್ಲಿ ಸಿಎಂ ಓಪನ್ ಟಾಕ್

ಉಪಹಾರಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮತ್ತು ನಾನು ರಾಜೀನಾಮೆಯನ್ನ ಕೊಡುತ್ತಿದ್ದೇನೆ ಎಂದು ಅನೌನ್ಸ್ ಮಾಡಿದ್ದಾರೆ. ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂದು ಹೈಕಮಾಂಡ್ ಹೇಳಿ ಕಳುಹಿಸಿರುವುದನ್ನು ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಡಿಕೆಶಿಗೆ ಸಹಕಾರ ನೀಡಿ ಎಂದು ಮುಖ್ಯಮಂತ್ರಿ ಅವರು ಎಲ್ಲಾ ಸಚಿವರಲ್ಲಿ ಮನವಿ ಮಾಡಿದರು. ಇನ್ನೂ ಎರಡು ವರ್ಷ ಸರ್ಕಾರ ಇರಲಿದೆ, ಎಲ್ಲರ ಸಹಕಾರದಿಂದ ಮತ್ತೆ ಅಧಿಕಾರಕ್ಕೆ ತರೋಣ, ಯಾರೂ ಅನ್ಯತಾ ಭಾವಿಸಬೇಡಿ, ನಾನು ನನ್ನ ನಿರ್ಧಾರವನ್ನ ತಿಳಿಸಿದ್ದೇನೆ ಎಂದು ವಿವರಿಸಿದರು.
DK Shivakumar CM: ಸಿದ್ದು ಕಾಲಿಗೆ ಬಿದ್ದ ಡಿಕೆಶಿ, ಬಂಡೆಯನ್ನ ತಬ್ಬಿಕೊಂಡ ಸಿದ್ದರಾಮಯ್ಯ, ಇಂದೇ ಸಿಎಂ ಆಗ್ತಾರಾ ಡಿಕೆ ಶಿವಕುಮಾರ್?

ಹೈಕಮಾಂಡ್ ಹೇಳಿದಕ್ಕೆ ನಾನು ಬದ್ಧನಾಗಿದ್ದೇನೆ, ಅವರ ಸೂಚನೆ ಮೇರೆಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ, ಯಾರು ಬೇರೆ ರೀತಿ ಅಪಾರ್ಥ ಮಾಡುವುದು ಬೇಡ ಎಂದು ಮನವಿ ಮಾಡಿದರು. ಪಕ್ಷಕ್ಕಾಗಿ ಎಲ್ಲರ ಸಹಕಾರ ಇರಲಿ ಎಂದು ಸಚಿವರಿಗೆ ಸಿಎಂ ಮುಕ್ತ ಮನಸ್ಸಿನಿಂದ ಮನವಿ ಮಾಡಿದರು. ನನಗೆ ನೀಡಿದ ಸಹಕಾರದಂತೆ ಡಿಕೆಶಿವಕುಮಾರ್ ಅವರಿಗೆ ಸಂಪೂರ್ಣ ಸಹಕರಿಸುವಂತೆ ಸಿಎಂ ಮನವಿಮಾಡಿದರು. ಈ ಘೋಷಣೆಯಿಂದ ಯಾವುದೇ ಗೊಂದಲವಿಲ್ಲದೆ ಸಮಾಜವಾದಿ ಮುಖಂಡನೊಬ್ಬರ ಅಧ್ಯಾಯ ಮುಗಿದಂತಾಗಿದೆ.

ಮಧ್ಯಾಹ್ನ 3 ಗಂಟೆಗೆ ಸಿಎಂ ರಾಜೀನಾಮೆ

ಉಪಹಾರ ಕೂಟದ ನಂತರ ಹಲವು ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಮಾತುಕತೆ ನಡೆಸಿದರು. ಕೆಲವು ಶಾಸಕರು ಕಣ್ಣೀರು ಹಾಕುತ್ತಾ ತೆರಳಿದರು. ಮತ್ತೆ ಕೆಲವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೆಚ್ ಕೆ ಪಾಟೀಲ್, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಮುಂದಿನ ಸಿಎಂ ಎಂದು ಮುಖ್ಯಮಂತ್ರಿ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಇದನ್ನು ಸಭೆಯಲ್ಲಿದ್ದ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಇಂದುಮದ್ಯಾಹ್ನ ಮೂರು ಗಂಟೆಗೆ ರಾಜ್ಯಪಾಲರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಯಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ರಾಜ್ಯಪಾಲರು ನಗರದಲ್ಲಿ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ರಾಜ್ಯಪಾಲರ ಕಾರ್ಯದರ್ಶಿ ಅವರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ನಂತರ ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆಗಳಿವೆ. ಮೇ 31 ಕ್ಕೆ ಡಿಕೆ ಶಿವಕುಮಾರ್ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ.

Read more news like this on kannada.timesnownews.com

Dailyhunt
Disclaimer: This content has not been generated, created or edited by Dailyhunt. Publisher: TimesNowSuddi