ನಮ್ಮಲ್ಲಿ ಅದೆಷ್ಟೋ ಜನರಿಗೆ ಹಣ ಒಂಥರ ಮರೀಚಿಕೆ. ಸಿಕ್ಕರೂ..ಸಿಗದಂತೆ ಇರುತ್ತದೆ. ಇನ್ನೇನು ಜೇಬಲ್ಲಿ ಸ್ವಲ್ಪ ದುಡ್ಡು ಆಯಿತು ಎನ್ನುವಷ್ಟರಲ್ಲಿ, ಯಾವುದೋ ಕಾರಣಕ್ಕೆ ಪೂರ್ತಿ ಖಾಲಿಯಾಗಿರುತ್ತದೆ. ಹಣವಿಲ್ಲದೆ..ಏನನ್ನೂ ಪಡೆಯಲು ಸಾಧ್ಯವಿಲ್ಲ ಎಂಬ ಈ ಕಾಲದಲ್ಲಿ ಹಣವೇ ನಮ್ಮೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತದೆ.
ನಾವು ಹಣದ ಹಿಂದೆ ಎಷ್ಟೇ ಓಡಿದರೂ, ಅದು ನಮ್ಮಿಂದ ದೂರದೂರ ಸಾಗುತ್ತದೆ. ಉಳಿತಾಯ ಮಾಡಿದ್ರೂ ಕೊನೆಗೊಂದು ದಿನ ಎಲ್ಲವೂ ಖಾಲಿಯಾಗಿಬಿಡುತ್ತದೆ. ಕೆಲವೊಮ್ಮೆ, ತಿಂಗಳ ಅಂತ್ಯದ ವೇಳೆಗೆ, ನಾವು ಹಣವನ್ನು ಎರವಲು ಪಡೆಯಬೇಕಾಗುತ್ತದೆ. ಆದರೆ ಚೀನಾದ ಪ್ರಸಿದ್ಧ ವಾಸ್ತು ನಿಯಮಗಳ ಉಲ್ಲೇಖವಾದ ಫೆಂಗ್‌ಶುಯಿ ಪ್ರಕಾರ, ನೀವು ನಿಮ್ಮ ಜೇಬಲ್ಲಿ ಹಣ ಉಳಿಸಲು ಒಂದಷ್ಟು ವಸ್ತುಗಳನ್ನ ಜೇಬಲ್ಲಿ ಇರಿಸಿಕೊಳ್ಳಬೇಕು. ಈ ಕೆಳಗಿನ ವಸ್ತುಗಳನ್ನ ಸದಾ ನಿಮ್ಮ ಜೇಬ್ ಅಥವಾ ಪರ್ಸ್‌ನಲ್ಲಿ ಇಟ್ಟುಕೊಂಡರೆ, ಹಣ ಎಂದಿಗೂ ಖಾಲಿಯಾಗೋದಿಲ್ಲ. ನಿಮ್ಮ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ.
ಕೆಂಪು ದಾರದಿಂದ ಕಟ್ಟಿದ ಆರು ನಾಣ್ಯಗಳು
ಕೆಂಪು ಅಥವಾ ಚಿನ್ನದ ಬಣ್ಣದ ದಾರದಿಂದ ಕಟ್ಟಿದ ಆರು ನಾಣ್ಯಗಳನ್ನ ನೀವು ಜೇಬಿನ್ನಲ್ಲಿ ಇಟ್ಟುಕೊಳ್ಳಬೇಕು. ನಾಣ್ಯಗಳು ಲೋಹದ ಅಂಶವನ್ನು ಪ್ರತಿನಿಧಿಸುತ್ತವೆ, ಇದು ಸಮೃದ್ಧಿ ಮತ್ತು ಸಂಪತ್ತಿನ ಹರಿವಿನ ಪ್ರತೀಕವಾಗಿದೆ. 6 ನೇ ಸಂಖ್ಯೆಯನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ, ಇದು ವ್ಯವಹಾರದಲ್ಲಿ ಯಶಸ್ಸು ಮತ್ತು ಅದೃಷ್ಟಕ್ಕೆ ದಾರಿ ಆಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ, ಸಂಖ್ಯೆ 6 ಶುಕ್ರ ಗ್ರಹದೊಂದಿಗೆ ಸಂಬಂಧಿಸಿದೆ, ಇದು ಸಂಪತ್ತು, ಸಮೃದ್ಧಿ ಮತ್ತು ವೈಭವಕ್ಕೆ ಕಾರಣವಾದ ಗ್ರಹವೂ ಆಗಿದೆ.
ಬೇ ಎಲೆ
ಅಡುಗೆ ಮನೆಯಲ್ಲಿ ಬೇ ಎಲೆ ಇದ್ದೇ ಇರುತ್ತದೆ. ನಿಮ್ಮ ಹಣಕಾಸಿನ ಲಾಭದ ಆಶಯವನ್ನು ಬೇ ಎಲೆಯ ಮೇಲೆ ಪೆನ್ಸಿಲ್‌ನಿಂದ ಬರೆಯಿರಿ, ನಂತರ ಅದನ್ನು ಮಡಿಸಿ ಮತ್ತು ನಿಮ್ಮ ಜೇಬ್‌ನಲ್ಲಿ ಇಟ್ಟುಕೊಳ್ಳಿ. ಹೀಗೆ ಇವುಗಳ ಜೊತೆ ನಾಣ್ಯಗಳೂ ಇರಲಿ. ಎಲೆಯನ್ನ ವಾರಕ್ಕೊಮ್ಮೆ ಬದಲಾಯಿಸಿ ಮತ್ತು ಹಳೆಯ ಎಲೆಯನ್ನು ಸುಟ್ಟು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ.
ಹಸಿರು ಅವೆಂಚುರಿನ್
ಹಸಿರು ಅವೆಂಚುರಿನ್ ಅಥವಾ ಸಂಪತ್ತಿನ ಹರಳು. ಇದು ನಿಮ್ಮಲ್ಲಿ ಆಶಾವಾದವನ್ನ ಹೆಚ್ಚಿಸಿ ಆರ್ಥಿಕ ಬೆಳವಣಿಗೆಯ ಅವಕಾಶಗಳನ್ನ ಕಲ್ಪಿಸಿಕೊಡುತ್ತದೆ. ನಿಮ್ಮ ಹಣ ಅಥವಾ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಹಸಿರು ಅವೆಂಚುರಿನ್ ಇರಿಸಿಕೊಳ್ಳಿ. ನೀವು ಅದನ್ನು ಸ್ಪರ್ಶಿಸುವ ಪ್ರತಿ ಬಾರಿಯೂ, ದೊಡ್ಡ ಮತ್ತು ಸಣ್ಣ ಎರಡೂ ಆರ್ಥಿಕ ಅವಕಾಶಗಳನ್ನು ಗುರುತಿಸಲು ಮತ್ತು ಲಾಭ ಪಡೆಯಲು ನಿಮ್ಮ ಇಚ್ಛೆ ಬಲಗೊಳ್ಳುತ್ತದೆ. ಫೆಂಗ್ ಶೂಯಿ ಪ್ರಕಾರ ಇದು ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸುತ್ತದೆ.
ಸಿಟ್ರಿನ್ ಸ್ಫಟಿಕ
ಸಿಟ್ರಿನ್ ಸ್ಫಟಿಕ ಎಂಬುದು ಹಳದಿ ರತ್ನವಾಘಿದೆ. ಸಿಟ್ರಿನ್ ಸಮೃದ್ಧಿಯ ಶಕ್ತಿಯನ್ನು ಹೊಂದಿದೆ. ಸಭೆಗೆ ಹಾಜರಾಗುವಾಗ, ಸಂಬಳ ಹೆಚ್ಚಳದ ಬಗ್ಗೆ ಮಾತುಕತೆ ನಡೆಸುವಾಗ ಅಥವಾ ದೈನಂದಿನ ಕೆಲಸಗಳನ್ನು ನಿರ್ವಹಿಸುವಾಗ, ನಿಮ್ಮ ಜೇಬಿನಲ್ಲಿ ಒಂದು ಸಣ್ಣ ತುಂಡನ್ನು ಇಟ್ಟುಕೊಳ್ಳಿ. ಫೆಂಗ್ ಶೂಯಿ ಪ್ರಕಾರ, ಅದರ ಶಕ್ತಿಯು ಹಣದ ಹರಿವನ್ನ ಹೆಚ್ಚಿಸುತ್ತದೆ. ಹೆಚ್ಚಿಸುತ್ತದೆ.
Vastu Shastra: ಸೆಕೆಂಡ್‌ಹ್ಯಾಂಡ್ ವಾಹನಗಳು, ಇನ್ನಿತರ ವಸ್ತುಗಳನ್ನ ಖರೀದಿಸಿ ಮನೆಗೆ ತಂದ ತಕ್ಷಣ ಹೀಗೆ ಮಾಡಲೇಬೇಕು..!
ಅಕ್ಕಿ ಕಾಳುಗಳು
ಜೇಬ್ ಅಥವಾ ಪರ್ಸ್‌ನಲ್ಲಿ ಅಕ್ಕಿಕಾಳುಗಳನ್ನ ಇಟ್ಟುಕೊಳ್ಳಿ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ಉಪಯುಕ್ತವಾಗಿದೆ. ನಿಮ್ಮ ವೆಚ್ಚಗಳು ನಿರಂತರವಾಗಿ ಹೆಚ್ಚುತ್ತಿದ್ದರೆ ಅಥವಾ ನೀವು ಕ್ಷುಲ್ಲಕ ವಿಷಯಗಳಿಗೆ ಹಣವನ್ನು ಖರ್ಚು ಮಾಡುತ್ತಿದ್ದರೆ, ನಿಮ್ಮ ಪರ್ಸ್ ಅಥವಾ ಜೇಬಿನಲ್ಲಿ 5 ಅಥವಾ 7 ಅಕ್ಕಿ ಕಾಳುಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಇಟ್ಟುಕೊಳ್ಳಿ. ಹಾಗೆ ಮಾಡುವುದರಿಂದ ಆರ್ಥಿಕ ಲಾಭದ ಸಾಧ್ಯತೆ ಸೃಷ್ಟಿಯಾಗುತ್ತದೆ.
Read more news like this on kannada.timesnownews.com

