Dailyhunt
Happy Ugadi Wishes in Kannada: ಯುಗಾದಿ ಹಬ್ಬಕ್ಕೆ ನಿಮ್ಮ ಸ್ನೇಹಿತರು, ಆಪ್ತರಿಗೆ ಶುಭಾಶಯ ಕೋರಲು ಇಲ್ಲಿವೆ ಸುಂದರ ಸಂದೇಶಗಳು..!

Happy Ugadi Wishes in Kannada: ಯುಗಾದಿ ಹಬ್ಬಕ್ಕೆ ನಿಮ್ಮ ಸ್ನೇಹಿತರು, ಆಪ್ತರಿಗೆ ಶುಭಾಶಯ ಕೋರಲು ಇಲ್ಲಿವೆ ಸುಂದರ ಸಂದೇಶಗಳು..!

TimesNowSuddi 2 weeks ago

ಮಾ.19ರಂದು ಯುಗಾದಿ ಹಬ್ಬ. ಈ ಹಬ್ಬದಂದು ಪರಸ್ಪರ ಪ್ರೀತಿಪಾತ್ರರಿಗೆ ಶುಭಾಶಯ ಕೋರುವುದೇ ವಿಶೇಷ. ಯುಗಾದಿ ಶುಭಾಶಯದ ಜೊತೆ, ಬೇವು-ಬೆಲ್ಲ, ಪಚಡಿಗಳನ್ನ ಹಂಚಲಾಗುತ್ತದೆ. ಯುಗಾದಿ ಹಬ್ಬವು ಹಿಂದುಗಳ ಪಾಲಿಗೆ ಹೊಸವರ್ಷವಾಗಿದೆ. ಹೊಸ ಸಂವತ್ಸರದ ಆರಂಭವಾಗಿದೆ. ಈ ಯುಗಾದಿಯಿಂದ ಪರಾಭವ ನಾಮ ಸಂವತ್ಸರ ಶುರುವಾಗುತ್ತಿದೆ.

ಹೊಸ ವರ್ಷದ ಪ್ರಾರಂಭವಾಗಿರುವ ಯುಗಾದಿ ಹಬ್ಬದಂದು ನಿಮ್ಮ ಸ್ನೇಹಿತರು, ಆಪ್ತರು, ಕುಟುಂಬದವರಿಗೆ ಶುಭಾಶಯ ಕೋರಲು, ವಾಟ್ಸ್‌ಆಪ್‌ ಸ್ಟೇಟಸ್‌, ಸ್ಟೋರಿಗಳನ್ನ ಹಾಕಿಕೊಳ್ಳಲು ಇಲ್ಲಿವೆ ನೋಡಿ ಸಂದೇಶಗಳು..
ಸ್ನೇಹಿತರಿಗೆ, ಆಪ್ತರಿಗೆ, ಕುಟುಂಬದವರಿಗೆ ಕಳಿಸಲು ಸಂದೇಶಗಳು..

1. ಈ ಯುಗಾದಿ ಹಬ್ಬವು ನಿಮ್ಮ ಮನೆ ಮತ್ತು ಮನಸಿಗೆ ಎನರ್ಜಿ ತುಂಬಲಿ. ಎಲ್ಲರಿಗೂ ಸಮೃದ್ಧಿಯನ್ನ ಕೊಡಲಿ
2. ಪ್ರೀತಿಯ ಅಪ್ಪ, ಅಮ್ಮ..ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ವರ್ಷ ಜೀವನವು ಯಾವುದೇ ಸವಾಲುಗಳನ್ನ ನೀಡಿದರೂ, ಅದನ್ನ ನೀವು ನಿಭಾಯಿಸುತ್ತೀರಿ ಎಂದು ಭಾವಿಸುತ್ತೇನೆ, ಯುಗಾದಿ ಶುಭಾಶಯಗಳು.
3. ಯುಗಾದಿ ಶುಭಾಶಯಗಳು, ಈ ವರ್ಷವೆಲ್ಲ ನಿಮ್ಮ ಜೀವನದಲ್ಲಿ ನಗು, ಖುಷಿ ತುಂಬಿರಲಿ.
4. ಮನೆಯಲ್ಲಿ ಎಲ್ಲರಿಗೂ ಆಯುಷ್ಯ, ಆರೋಗ್ಯ ಲಭಿಸಲಿ, ಸಮೃದ್ಧಿ ತುಂಬಲಿ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು..
5. ಹಳೆಯದನ್ನೆಲ್ಲ ಬಿಡಿ, ಈ ಯುಗಾದಿಯಿಂದ ಹೊಸದನ್ನ ಅಪ್ಪಿಕೊಳ್ಳಿ. ನಿಮಗೂ, ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
6. ಪರಭವ ನಾಮ ಸಂವತ್ಸರವು ನಿಮಗೆ ದೀರ್ಘಾಯುಷ್ಯ, ಆರೋಗ್ಯ, ಸಮೃದ್ಧಿ ಮತ್ತು ಸಂಪತ್ತನ್ನು ದಯಪಾಲಿಸಲಿ. ಯುಗಾದಿ ಹಬ್ಬದ ಶುಭಾಶಯಗಳು.
7. ಈ ಯುಗಾದಿ ಹಬ್ಬವು ಸದಾ ಸಿಹಿ ನೆನಪಾಗಿ ಉಳಿಯುವಂತಾಗಲಿ. Happy Ugadi..
8. ಕಾಲದ ಓಟದಲ್ಲಿ ಮತ್ತೊಂದು ಮೈಲಿಗಲ್ಲು, ಈ ಹೊಸ ವರ್ಷವು ನಿಮಗೆ ಪ್ರತಿ ಹಂತದಲ್ಲೂ ಯಶಸ್ಸನ್ನು ತರಲಿ. ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
9. ಈ ವರ್ಷ ಯಶಸ್ಸು ಮತ್ತು ಅದೃಷ್ಟ ನಿಮ್ಮೊಂದಿಗಿರಲಿ.ಯುಗಾದಿ ಹಬ್ಬದ ಶುಭಾಶಯಗಳು, ಪರಾಭವ ನಾಮ ಸಂವತ್ಸರವು ನಿಮ್ಮನ್ನ ಆಶೀರ್ವದಿಸಲಿ..
11. ಜೀವನವು ಎಲ್ಲ ಭಾವನೆಗಳ ಮಿಶ್ರಣವಾಗಿದೆ ಎಂಬ ಸಂದೇಶವನ್ನ ಯುಗಾದಿ ಹಬ್ಬವು ಸಾರುತ್ತದೆ. ನಾವೂ ಎಲ್ಲ ಭಾವನೆಗಳನ್ನೂ ಸಮತೋಲನ ಮಾಡುವುದನ್ನ ಕಲಿಯೋಣ. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಯುಗಾದಿ ಶುಭಾಶಯಗಳು.
12. 2026ನೇ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಶೇ.90ರಷ್ಟು ಸಿಹಿಯೇ ತುಂಬಿರಲಿ, ಇನ್ನು 10 ಪರ್ಸಂಟ್‌ ಅಷ್ಟು ಮಾತ್ರ ಕಹಿ ಇರಲಿ. ಯುಗಾದಿ ಶುಭಾಶಯಗಳು
13. ಈ ಯುಗಾದಿ ಹಬ್ಬವು ನಿಮಗೆ ನಿಮ್ಮ ಗುರಿಯನ್ನ ತಲುಪುವ ಶಕ್ತಿ, ತಾಳ್ಮೆ ಕೊಡಲಿ ಜೀವನ ಕೊಡುವ ಸವಾಲುಗಳನ್ನ ಧೈರ್ಯವಾಗಿ ಎದುರಿಸುವಂತಾಗಲಿ.
14. ಹೊಸ ವರ್ಷ ಆರಂಭವಾಗಿದೆ. ನಿಮ್ಮ ಎಲ್ಲ ಕನಸುಗಳೂ ನನಸಾಲಿ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು..
15. ಹೊಸ ಆರಂಭ ಮತ್ತು ಹೊಸ ಅಧ್ಯಾಯ ಇಲ್ಲಿದೆ. ಈ ವರ್ಷ ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಎಲ್ಲವೂ ಒಳಿತೇ ಸಿಗಲಿ, ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು..

ಯುಗಾದಿ ಹಬ್ಬ ಆಚರಣೆ ಮಾಡಿದರೆ ಸಾಲದು, ಅದು ಕಲಿಸುವ ಈ ಪಾಠಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು..!

ವಾಟ್ಸ್‌ಆಪ್‌, ಇನ್‌ಸ್ಟಾಗ್ರಾಂಗಾಗಿ ಶಾರ್ಟ್‌ ಕೋಟ್‌ಗಳು..

  • ನಾವೆಲ್ಲರೂ ಕಷ್ಟ-ಸುಖಗಳನ್ನ ಸಮಾನವಾಗಿ ಹಂಚಿಕೊಳ್ಳೋಣ, ಐುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
  • ಹಳೇ ಸಂಪ್ರದಾಯಗಳೊಂದಿಗೆ ಹೊಸ ಆರಂಭ..ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು..
  • ಜೀವನ ಎನ್ನುವುದು ಸುಂದರ ಅನುಭವಗಳ ಮಿಶ್ರಣ. ಪ್ರತಿ ಕ್ಷಣದ ಸವಿಯನ್ನೂ ಸವಿಯೋಣ, Happy Ugadi
  • ಯುಗಾದಿ ಹಬ್ಬವು ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನ ನೀಡಲಿ, ಶುಭಾಶಯಗಳು..
  • ಯುಗಾದಿಯಂದು ಕಟ್ಟುವ ಮಾವಿನ ತೋರಣವು ನಿಮ್ಮಲ್ಲಿನ ಎಲ್ಲ ನೆಗೆಟಿವ್‌ ಎನರ್ಜಿಯನ್ನೂ ಹೊಡೆದೋಡಿಸಲಿ. ನಾವೆಲ್ಲರೂ ಖುಷಿಯಿಂದ ಯುಗಾದಿ ಆಚರಿಸೋಣ
  • ಸಂಸ್ಕೃತಿಯನ್ನ ಸಂಭ್ರಮಿಸೋಣ, ನಮ್ಮ ಪರಂಪರೆಯನ್ನ ಗೌರವಿಸೋಣ..ತನ್ಮೂಲಕ 2026ನ್ನ ಸ್ವಾಗತಿಸೋಣ. ಹ್ಯಾಪಿ ಯುಗಾದಿ..

Read more news like this on kannada.timesnownews.com

Dailyhunt
Disclaimer: This content has not been generated, created or edited by Dailyhunt. Publisher: TimesNowSuddi