ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈ ಬಾರಿ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದರೆ, ಇತ್ತ 5 ಬಾರಿಯ ಪ್ರಶಸ್ತಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಸತತ 2 ಪಂದ್ಯವನ್ನು ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇದೀಗ ಈ ಎರಡೂ ತಂಡಗಳು ಏಪ್ರಿಲ್ 5ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಸೆಣಸಾಡಲಿದ್ದು, ಐಪಿಎಲ್‌ನ ಅತ್ಯಂತ ಹೈವೋಲ್ಟೇಜ್ ಕದನಕ್ಕೆ ಆರ್‌ಸಿಬಿ ಮತ್ತು ಚೆನ್ನೈ (RCB vs CSK) ಅಭಿಮಾನಿಗಳು ಕಾತುರರಾಗಿದ್ದಾರೆ. ಈಗಾಗಲೇ ಟಿಕೆಟ್ ಎಲ್ಲವೂ ಸೋಲ್ಡ್ ಔಟ್ ಆಗಿದ್ದು, ಇದೀಗ ಪಂದ್ಯದ ಪ್ಲೇಯಿಂಗ್ 11 ಬಗ್ಗೆ ಸಾಕಷ್ಟು ಚರ್ಚೆ ಆರಂಭವಾಗಿದೆ.
ಚೆನ್ನೈ ತಂಡಕ್ಕೆ ಮೇಜರ್ ಸರ್ಜರಿ:
ಚೆನ್ನೈ ತಂವು ಇದೀಗ RCB ಯನ್ನು ಸೋಲಿಸಿ IPL 2026 ರಲ್ಲಿ ತಮ್ಮ ಗೆಲುವಿನ ಖಾತೆಯನ್ನು ತೆರೆಯಲು ೆದುರು ನೋಡುತ್ತಿದೆ. ಇದಕ್ಕಾಗಿ ಪ್ಲೇಯಿಂಗ್ XI ನಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಬಹುದು. ಕಾರ್ತಿಕ್ ಶರ್ಮಾ, ರಾಹುಲ್ ಚಾಹರ್ ಮತ್ತು ಮ್ಯಾಟ್ ಹೆನ್ರಿ ಅವರನ್ನು ಕೈಬಿಡಬಹುದು. ಈವರುಗಳ ಬದಲಾಗಿ ಕಾರ್ತಿಕ್ ಶರ್ಮಾ ಬದಲಿಗೆ ಉರ್ವಿಲ್ ಪಟೇಲ್ ಅವಕಾಶ ಸಿಗುವ ಸಾಧ್ಯತೆ ಇದೆ.
ಅಲ್ಲದೇ ಸ್ಟಾರ್ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾಗಿದ್ದು, ಬ್ರೇವಿಸ್ ಆರಂಭಿಕ 2 ಪಂದ್ಯ ತಪ್ಪಿಸಿಕೊಳ್ಳಲಿದ್ದಾರೆ ಎಂದು ಆರಂಭದಲ್ಲಿ ವರದಿ ಆಗಿರುವ ಕಾರಣ ಡೆವಾಲ್ಡ್ ಬ್ರೆವಿಸ್ ಸಹ RCB ವಿರುದ್ಧದ ಪಂದ್ಯಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ. ಏತನ್ಮಧ್ಯೆ, ಮುಖೇಶ್ ಚೌಧರಿ ಮ್ಯಾಟ್ ಹೆನ್ರಿ ಬದಲಿಗೆ ಸ್ಥಾನ ಪಡೆಯಬಹುದು, ಆದರೆ ಶ್ರೇಯಸ್ ಗೋಪಾಲ್ ರಾಹುಲ್ ಚಾಹರ್ ಬದಲಿಗೆ ಸ್ಥಾನ ಪಡೆಯಬಹುದು.
ಜೋಶ್ ಹ್ಯಾಜಲ್‌ವುಡ್ ಆಡ್ತಾರಾ? ಆರ್‌ಸಿ ಬದಲಾವಣೆ ಡೌಟ್
ಇನ್ನು, ಆರ್‌ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಬಹುತೇಕ ಕಳೆದ ಪಂದ್ಯದ ಪ್ಲೇಯಿಂಗ್ 11ನೊಂದಿಗೇ ಆಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಗೆಲುವಿನ ಲುಯದಲ್ಲಿರುವ ಆಟಗಾರರನ್ನು ಕೈಬಿಡುವ ಸಾಧ್ಯತೆ ತೀರಾ ಕಡಿಮೆ ಇದೆ ಎನ್ನಬಹುದು. ಹೀಗಾಗಿ ಆರ್‌ಸಿಬಿ ಪರ ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಆರಂಭಿಕರಾಗಿ ಕಣಕ್ಕಿಳಿದರೆನಾಯಕ ರಜತ್ ಪಾಟಿದಾರ್ ಮೂರನ ಕ್ರಮಾಂಕದಲ್ಲಿ ಆಡಲಿದ್ದಾರೆ.
ಬಳಿಕ ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಅಲ್ಲದೇ ಬೌಲಿಂಗ್‌ನಲ್ಲಿ ವೇಗಿಗಳಾಗಿ ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದು, ಇಂಫ್ಯಾಕ್ಟ್ ಪ್ಲೇಯರ್ ಆಗಿ ಸುಯಾಶ್ ಶರ್ಮಾ ಆಡುವುದು ಖಚಿತವಾಗಿದೆ. ಆದರೆ ಆರ್‌ಸಿಬಿ ಪ್ರಮುಖ ಬೌಲರ್ ಜೋಶ್ ಹ್ಯಾಜಲ್‌ವುಡ್ ಸದ್ಯ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದರೂ ಸಹ ಚೆನ್ನೈ ವಿರುದ್ಧ ಆಡುವುದು ಅನುಮಾನವಾಗಿದ್ದು, ಜೋಶ್ ಹ್ಯಾಜಲ್‌ವುಡ್ ಶೀಘ್ರದಲ್ಲೇ ಈ ಋತುವಿನಲ್ಲಿ ಆರ್‌ಸಿಬಿ ಪರ ಆಡಬಹುದು ಎಂದು revsportz ವರದಿ ಮಾಡಿದೆ.
RCB vs CSK ಸಂಭಾವ್ಯ ಪ್ಲೇಯಿಂಗ್ XI
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಸರ್ಫರಾಜ್ ಖಾನ್, ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್/ಉರ್ವಿಲ್ ಪಟೇಲ್, ಪ್ರಶಾಂತ್ ವೀರ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಮುಖೇಶ್ ಚೌಧರಿ, ಖಲೀಲ್ ಅಹ್ಮದ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (c), ಜಿತೇಶ್ ಶರ್ಮಾ (WK), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್, ಜಾಕೋಬ್ ಡಫಿ, ಸುಯಾಶ್ ಶರ್ಮಾ.
Read more news like this on kannada.timesnownews.com

