KL Rahul Creates History: ಐಪಿಎಲ್ 2026 ಕೊನೆಯ ಹಂತಕ್ಕೆ ಬಂದಿದೆ. ಎಲ್ಲಾ ಲೀಗ್ ಪಂದ್ಯಗಳು ಮೇ 24 ರಂದು ಮುಗಿದಿವೆ. ಇನ್ನೇನು ಇದ್ದರೂ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯ ಬಾಕಿ ಉಳಿದಿದೆ. ಯಾರು ಆ ಬಾರಿಯ ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ ಎಂಬ ಚರ್ಚೆಯಲ್ಲಿ ಅಭಿಮಾನಿಗಳು ಇರುವ ಮಧ್ಯೆಯೇ, ಕನ್ನಡಿಗ ಕೆ ಎಲ್ ರಾಹುಲ್ (KL Rahul) ಅಪರೂಪದ ದಾಖಲೆಯನ್ನು ಬರೆದಿದ್ದಾರೆ.
ಕನ್ನಡಿಗ ಕೆ ಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಟವಾಡುತ್ತಿದ್ದು, ನಿನ್ನೆಯ ಕೊನೆಯ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಕೆ ಎಲ್ ರಾಹುಲ್ ಅವರ ಅಮೋಘ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಪಂದ್ಯದಲ್ಲಿ ಗೆಲುವನ್ನು ಕಂಡಿದೆ. ಆದೇ ರೀತಿಯಲ್ಲಿ ಈ ಪಂದ್ಯವನ್ನು ಕೆ ಎಲ್ ರಾಹುಲ್ ಅತ್ಯುತ್ತಮ ಬ್ಯಾಟಿಂಗ್ ನಿಂದ ಗೆಲ್ಲಿಸಿಕೊಟ್ಟಿದ್ದಾರೆ ಅಲ್ಲದೆ, ಐತಿಹಾಸಿಕ ಸಾಧನೆಯನ್ನೂ ಮಾಡಿದ್ದಾರೆ.
ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ತಂಡದ ಪರ ಅಮೋಘ ಬ್ಯಾಟಿಂಗ್ ಮಾಡಿದ ಕೆ ಎಲ್ ರಾಹುಲ್ ಕೇವಲ 30 ಎಸೆತದಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಬಾರಿಸಿ 60 ರನ್ ಬಾರಿಸಿದ್ದಾರೆ.
3 ತಂಡದಲ್ಲಿಯೂ 30 ಕ್ಕೂ ಅಧಿಕ ಸಿಕ್ಸರ್
ಇದರಿಂದ ಅವರು ಈ ಬಾರಿಯ ಐಪಿಎಲ್ ಪಂದ್ಯದಲ್ಲಿ ಅವರು ಒಟ್ಟು 31 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅವರು ಮೂರು ವಿಭಿನ್ನ ತಂಡಗಳ ಪರ ಬ್ಯಾಟಿಂಗ್ ಮಾಡಿ 30 ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಸಾಧನೆಯನ್ನು ಮಾಡಿದ್ದಾರೆ.
IPL 2026 Playoffs Schedule: ಐಪಿಎಲ್ ಪ್ಲೇಆಫ್ ವೇಳಾಪಟ್ಟಿ, ಎಲ್ಲಿ? ಯಾವಾಗ? ಎಷ್ಟು ಗಂಟೆಗೆ ಪಂದ್ಯ? ಇಲ್ಲಿದೆ ಸಂಪೂರ್ಣ ವಿವರ
ಕೆ ಎಲ್ ರಾಹುಲ್ ಅವರು ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಟವಾಡುತ್ತಿದ್ದು, ಅವರು ಈ ಹಿಂದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳ ಪರವಾಗಿ ಆಟವಾಡಿದ್ದಾರೆ.
ಅವರು ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ 31 ಸಿಕ್ಸರ್ ಸಿಡಿಸಿದ್ದಾರೆ. ಅದೇ ರೀತಿಯಲ್ಲಿ ಈ ಹಿಂದೆ 2022 ರಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಪರವಾಗಿ 30 ಸಿಕ್ಸರ್, ಮತ್ತು 2021ರಲ್ಲಿ ಪಿಬಿಕೆಎಸ್ ತಂಡದ ಪರವಾಗಿ 30 ಸಿಕ್ಸರ್ ಬಾರಿಸಿದ್ದಾರೆ. ಅದೇ ರೀತಿಯಲ್ಲಿ 2018ರಲ್ಲಿ 32 ಸಿಕ್ಸರ್ ಪಿಬಿಕೆಎಸ್ ತಂಡದ ಪರವಾಗಿ ಬಾರಿಸಿ, ಇತಿಹಾಸಗೈದಿದ್ದಾರೆ. 
ಇದರಿಂದ ಐಪಿಎಲ್ ನ ಒಟ್ಟಾರೆ 19 ಸೀಸನ್ ನಲ್ಲಿ ಮೂರು ವಿಭಿನ್ನ ಪಂದ್ಯಗಳ್ಲಿ 30 ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದರಿಂದ ಅವರು ಐಪಿಎಲ್ ನಲ್ಲಿ ಅಪರೂಪದ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಈ ಹಿಂದೆ ವೆಸ್ಟ್ ಇಂಡೀಸ್ ತಂಡದ ಆಟಗಾರ ಕ್ರಿಸ್ ಗೇಲ್ ಎರಡು ತಂಡಗಳ ಪರವಾಗಿ ಇಂತಹ ಸಾಧನೆ ಮಾಡಿದ್ದರು. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ 4 ಬಾರಿ ಹಾಗೂ ಪಂಜಾಬ್ ಕಿಂಗ್ಸ್ ಪರವಾಗಿ 1 ಬಾರಿ ಈ ಸಾಧನೆ ಮಾಡಿದ್ದವರಾಗಿದ್ದರು. ಅದೇ ರೀತಿಯಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ಪಂಜಾಬ್ ಪರವಾಗಿ ಒಂದು ಬಾರಿ ಮತ್ತು ಆರ್ ಸಿಬಿ ಪರವಾಗಿ 1 ಬಾರಿ ಈ ಸಾಧನೆ ಮಾಡಿದ್ದರು.
ಇದೀಗ ಕೆ ಎಲ್ ರಾಹುಲ್ ಈ ಮೂವರು ಆಟಗಾರರಿಂದ ಮಾಡಲು ಸಾಧ್ಯವಾಗದ ಸಾಧನೆಯನ್ನು ಮಾಡಿದ್ದಾರೆ. ಇದರಿಂದ ಅವರು ಅಪರೂಪದ ಕ್ರಿಕೆಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಹಾಗೆಯೇ ಈ ಬಾರಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಅತ್ಯಧಿಕ ಸ್ಕೋರ್ ಮಾಡಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Read more news like this on kannada.timesnownews.com

