Dailyhunt
Kohli vs Gill: ಧಗ..ಧಗ..ಧಗ, ವಿಂಟೇಜ್‌ ಕೊಹ್ಲಿ ಈಸ್‌ ಬ್ಯಾಕ್‌, ಗಿಲ್‌ ಕ್ಯಾಚ್‌ ಪಡೆದ ನಂತ್ರ ವಿರಾಟ್ ಅಗ್ರೇಶನ್‌ಗೆ ಫ್ಯಾನ್ಸ್‌ ದಂಗು

Kohli vs Gill: ಧಗ..ಧಗ..ಧಗ, ವಿಂಟೇಜ್‌ ಕೊಹ್ಲಿ ಈಸ್‌ ಬ್ಯಾಕ್‌, ಗಿಲ್‌ ಕ್ಯಾಚ್‌ ಪಡೆದ ನಂತ್ರ ವಿರಾಟ್ ಅಗ್ರೇಶನ್‌ಗೆ ಫ್ಯಾನ್ಸ್‌ ದಂಗು

TimesNowSuddi 2 weeks ago

ಗುಜರಾತ್ ಟೈಟಾನ್ಸ್ (GT) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ 42ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕವರ್ ನಲ್ಲಿ ಸೂಪರ್‌ ಕ್ಯಾಚ್ ಪಡೆದ ನಂತರ GT ನಾಯಕ ಶುಭ್‌ಮನ್ ಗಿಲ್‌ ವಿರುದ್ಧ ಅಗ್ರೇಶನ್‌ ಹೊರಹಾಕಿದರು. ಭುವನೇಶ್ವರ್ ಕುಮಾರ್‌ಗೆ ಗಿಲ್ ಅಪ್ ಡ್ರೈವ್ ಮಾಡಲು ಪ್ರಯತ್ನಿಸಿದರು.

ಇದನ್ನು ಕೊಹ್ಲಿ ಕವರ್‌ನಲ್ಲಿ ಅದ್ಭುತವಾಗಿ ಪಡೆದರು.

ಕೊಹ್ಲಿ vs ಗಿಲ್‌:

ಹೌದು, ಜಿಟಿ ನಾಯಕ ಶುಭಮನ್ ಗಿಲ್ ಅದ್ಭುತ ಆರಂಭವನ್ನು ನೀಡಿದರು. ಪವರ್‌ಪ್ಲೇನ ಮೊದಲ ಎರಡು ಓವರ್‌ಗಳಲ್ಲಿ ಅನುಭವಿ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಜೋಶ್ ಹ್ಯಾಜಲ್‌ವುಡ್ ವಿರುದ್ಧ ಉತ್ತಮ ಬ್ಯಾಟಿಂಗ್‌ ಮಾಡಿದರು. ಈ ವೇಳೆ ಕೊಹ್ಲಿ 2 ಬಾರಿ ಗಿಲ್‌ ಅವರನ್ನು ರನ್‌ ಔಟ್‌ ಮಾಡುವ ಅವಕಾಶವನ್ನು ಕೈತಪ್ಪಿದರು. ಇದಾದ ಬಳಿಕ ಭುವನೇಶ್ವರ್ ಓವರ್‌ನಲ್ಲಿ ಗಿಲ್ ಕವರ್‌ನಲ್ಲಿ ಕೊಹ್ಲಿ ಕೈಗೆ ಕ್ಯಾಚ್‌ ನೀಡಿದರು. ಈ ಕ್ಯಾಚ್‌ ಪಡೆದ ವಿರಾಟ್ ಭರ್ಜರಿ ಸಂಭ್ರಮಾಚರಣೆ ನಡೆಸಿದರು.‌ ಈ ಮೂಲಕ ವಿಂಟೇಜ್ ಕೊಹ್ಲಿ ಕ್ಯಾಚ್ ಹಿಡಿದು ಗಿಲ್ ಕಡೆಗೆ ಒಂದು ದಿಟ್ಟಿಸಿ ನೋಡಿ, ನಂತರ ಜೋರಾಗಿ ಘರ್ಜಿಸುತ್ತಾ ಚೆಂಡನ್ನು ನೆಲದ ಮೇಲೆ ಬಡಿದರು.

ಮೈದಾನದಲ್ಲಿಯೇ ಕೊಹ್ಲಿ ಜಾಲಿ:

ಅಬ್ಬಾ ಕೊಹ್ಲಿ ಅದೆಂತಾ ಅಗ್ರೇಶನ್‌ ಅಂತಾ ನೋಡಿದ ಕೆಲವೇ ಸಮಯದ ನಂತರ ಕೊಹ್ಲಿ ಮೈದಾನದಿಂದಲೇ ಡಗೌಟ್‌ನಲ್ಲಿ ಕುಳಿತ ಗಿಲ್‌ ಅವರೊಂದಿಗೆ ಸಖತ್‌ ಫನ್ನಿಯಾಗಿ ಕಾಣಿಸಿಕೊಂಡರು. ಮೈದಾನದಲ್ಲಿ ಫಿಲ್ಡಿಂಗ್‌ ವೇಳೆ ಕೊಹ್ಲಿ ಗಿಲ್‌ ಬಳಿ ತಾವು ಹೇಗೆ ಕ್ಯಾಚ್‌ ಹಿಡಿದೆ ಎಂದು ತಮಾಶೆಯಾಗಿ ಮಾತನಾಡುತ್ತಿದ್ದರು. ಅಲ್ಲದೇ ಕೊಹ್ಲಿ ಗಿಲ್‌ ಇಬ್ಬರೂ ದೂರವಿದ್ದರೂ ಅಲ್ಲಿಂದಲೇ ಮಾತನಾಡಿದ್ದು ಸಹ ಸಖತ್‌ ಫನ್ನಿಯಾಗಿತ್ತು. ಒಟ್ಟಾರೆಯಾಗಿ ಕೊಹ್ಲಿ ಗುಜರಾತ್‌ ವಿರುದ್ಧದ ಪಂದ್ಯದ ವೇಳೆ ಸಖತ್‌ ಜಾಲಿ ಮೂಡ್‌ನಲ್ಲಿ ಕಾಣಿಸಿಕೊಂಡರು.
GT vs RCB: ಔಟ್ or ನಾಟೌಟ್‌? ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಗೆ ಮೋಸ, ಸಿಟ್ಟಾದ ಕೊಹ್ಲಿ

ಆರ್‌ಸಿಬಿ ವಿರುದ್ಧ ಗೆದ್ದ ಗುಜರಾತ್‌:

ಅಹಮದಾಬಾದ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.2 ಓವರ್‌ಗಳಲ್ಲಿ 155 ರನ್‌ಗಳಿಗೆ ಆಲೌಟ್ ಆಯಿತು. ಈ ಟಾರ್ಗೆಟ್‌ ಬೆನ್ನಟ್ಟಿದ ಗುಜರಾತ್‌ ಟೈಟನ್ಸ್‌ ತಂಡವು ಕೇವಲ 15.5 ಓವರ್‌ಗೆ 6 ವಿಕೆಟ್‌ ನಷ್ಟಕ್ಕೆ 158 ರನ್‌ ಗಳಿಸುವ ಮೂಲಕ 4 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಬೆಂಗಳೂರಿನಲ್ಲಿ ಕಂಡ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಸೋಲಿಗೆ ಕಾರಣ ತಿಳಿಸಿದ ರಜತ್‌:

ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕು ವಿಕೆಟ್‌ಗಳ ಸೋಲನ್ನಪ್ಪಿದೆ. ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಸ್ಪಷ್ಟವಾಗಿ ನಿರಾಶೆ ಹೊರಹಾಕಿದ್ದಾರೆ ಮತ್ತು ಸೋಲಿಗೆ ತಮ್ಮ ಬ್ಯಾಟ್ಸ್‌ಮನ್‌ಗಳನ್ನು ನೇರವಾಗಿ ದೂಷಿಸಿದರು. ತಂಡದ ಸ್ಕೋರ್‌ಬೋರ್ಡ್‌ನಲ್ಲಿ ನಿಗದಿಪಡಿಸಿದ ಗುರಿ ಗೆಲುವಿಗೆ ಸಾಕಾಗಲಿಲ್ಲ ಎಂದು ಪಾಟಿದಾರ್ ಸ್ಪಷ್ಟವಾಗಿ ಒಪ್ಪಿಕೊಂಡರು. ಸ್ಕೋರ್ ಸಾಕಾಗಲಿಲ್ಲ. ನಾವು ಪಂದ್ಯವನ್ನು 16 ನೇ ಓವರ್‌ಗೆ ಎಳೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ನಾನು ಒಪ್ಪಿಕೊಳ್ಳುತ್ತೇನೆ.

ಇದು ಸಕಾರಾತ್ಮಕ ಅಂಶವಾಗಿದೆ, ಆದರೆ ನಿಜವಾದ ಸಮಸ್ಯೆ ಬ್ಯಾಟಿಂಗ್ ಆಗಿತ್ತು ಎಂದು ಹೇಳಿದ್ದಾರೆ. ನಾವು ಮಧ್ಯಮ ಓವರ್‌ಗಳಲ್ಲಿ ಹಲವಾರು ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವೆ. ಇಂತಹ ನಿರ್ಣಾಯಕ ಸಮಯದಲ್ಲಿ ನೀವು ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇದ್ದರೆ, ಯಾವುದೇ ಸ್ಕೋರ್ ಅನ್ನು ರಕ್ಷಿಸುವುದು ಕಷ್ಟಕರವಾಗುತ್ತದೆ ಎಂದರು.

Read more news like this on kannada.timesnownews.com

Dailyhunt
Disclaimer: This content has not been generated, created or edited by Dailyhunt. Publisher: TimesNowSuddi