ದೆಹಲಿ: ಮೇ 7 -ಇದು ಭಾರತದ ಇತಿಹಾಸದಲ್ಲಿ ಎಂದೂ ಅಚ್ಚಳಿಯದೆ ಉಳಿಯುವ ದಿನಾಂಕ. ಕಳೆದ ವರ್ಷ ಇದೇ ದಿನ ಪಾಕಿಸ್ತಾನದ ವಿರುದ್ಧ ಬರೋಬ್ಬರಿ 25 ನಿಮಿಷಗಳ ಕಾಲ ಕ್ಷಿಪಣಿ ದಾಳಿ ನಡೆಸಿತ್ತು. ಉಗ್ರರ 9 ಅಡಗುತಾಣಗಳನ್ನ ಸರ್ವನಾಶ ಮಾಡಿತ್ತು. ಕಳೆದ ವರ್ಷ ಏಪ್ರಿಲ್ 22ರಂದು ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಭಾರತದ ಸೇನೆ ಈ ದಾಳಿ ನಡೆಸಿತ್ತು ಮತ್ತು ಅದಕ್ಕೆ ʼಆಪರೇಷನ್ ಸಿಂದೂರ್ʼ ಎಂದು ಹೆಸರು ಕೊಟ್ಟಿತ್ತು.
ಆ ಆಪರೇಷನ್ ಸಿಂದೂರ್‌ಗೆ ಇಂದು ಒಂದು ವರ್ಷ..
ಆಪರೇಷನ್ ಸಿಂದೂರ್ ಭಾರತವು ನಡೆಸಿದ್ದ ಒಂದು ತೀವ್ರವಾದ ಮಿಲಿಟರಿ ಕಾರ್ಯಾಚರಣೆ ಪಹಲ್ಗಾಮ್ ದಾಳಿ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗೆ ಈ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು. ಭಾರತೀಯ ಸಶಸ್ತ್ರ ಪಡೆಗಳು ಸೇನೆ, ನೌಕಾಪಡೆ ಮತ್ತು ವಾಯುಪಡೆಯೊಂದಿಗೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುರುತಿಸಲಾದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಸಂಘಟಿತ ಕಾರ್ಯಾಚರಣೆಯನ್ನು ನಡೆಸಿದ್ದವು. ಇದರಲ್ಲಿ ನೂರಾರು ಉಗ್ರರು ಹತ್ಯೆಗೀಡಾದರು. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಸನ್ನಿವೇಶ ಏರ್ಪಟ್ಟಿತ್ತು.
ಜಲಂಧರ್‌ನ BSF ಪ್ರಧಾನ ಕಚೇರಿ ಹೊರಭಾಗದಲ್ಲಿ ದ್ವಿಚಕ್ರ ವಾಹನ ಸ್ಫೋಟ; ಭಾರಿ ಪ್ರಮಾಣದ ಬ್ಲಾಸ್ಟ್‌ಗೆ ಬೆಚ್ಚಿದ ಜನರು
2025ರ ಮೇ 7ರಂದು ನಡೆಸಲಾಗಿದ್ದ ಆಪರೇಷನ್ ಸಿಂದೂರ್ ಅಡಿಯಲ್ಲಿ ಭಾರತವು ಪಾಕಿಸ್ತಾನದಲ್ಲಿ ಅನೇಕ ಭಯೋತ್ಪಾದಕ ನೆಲೆಗಳನ್ನ ಧ್ವಂಸಗೊಳಿಸಿದೆ. ಇದೀಗ ಒಂದು ವರ್ಷವಾದ ಬೆನ್ನಲ್ಲೇ ಭಾರತೀಯ ವಾಯು ಸೇನೆಯು ತಾನು ನಡೆಸಿದ್ದ ಕಾರ್ಯಾಚರಣೆಗೆ ಸಂಬಂಧಿಸಿದ ದೃಶ್ಯದ ವಿಡಿಯೊವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ವಿಡಿಯೊದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಗುರಿಯಾಗಿಸಿಕೊಂಡ ಸ್ಥಳಗಳಲ್ಲಿನ ಅವಶೇಷಗಳ ದೃಶ್ಯಗಳನ್ನು ಕಾಣಬಹುದು.
"ಆಪರೇಷನ್ ಸಿಂದೂರ್. ನ್ಯಾಯ ಸಿಕ್ಕಿದೆ. ನಿಖರ ಕಾರ್ಯಾಚರಣೆ, ಶಾಶ್ವತ ಸ್ಮರಣೆ - ಆಪರೇಷನ್ ಸಿಂದೂರ್ ಮುಂದುವರಿದಿದೆ. ಭಾರತವು ಏನನ್ನೂ ಮರೆಯುವುದಿಲ್ಲ. ಭಾರತವು ಏನನ್ನೂ ಕ್ಷಮಿಸುವುದಿಲ್ಲ" ಎಂದು IAF ಟ್ವೀಟ್ ಮಾಡಿದೆ. ಹಾಗೇ, ಆಪರೇಷನ್ ಸಿಂದೂರ್ ನಂತರ ಬಿಡುಗಡೆಯಾದ ಹೇಳಿಕೆಯಲ್ಲಿ, ಸರ್ಕಾರವು "ಭಾರತೀಯ ಸಶಸ್ತ್ರ ಪಡೆಗಳು ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಸಂಘಟಿತ ಮತ್ತು ನಿಖರವಾದ ಕ್ಷಿಪಣಿ ದಾಳಿಗಳನ್ನು ನಡೆಸಿವೆ - ಅವುಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿವೆ. ಬಹಾವಲ್ಪುರ ಮತ್ತು ಮುರೀದ್ಕೆ, ಮತ್ತು ಐದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿವೆ. .ಈ ಸ್ಥಳಗಳು ಜೈಶ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೊಯ್ಬಾ (LeT) ದ ಪ್ರಮುಖ ಕಮಾಂಡ್ ಸೆಂಟರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದವು, ಇವು ಪುಲ್ವಾಮಾ (2019) ಮತ್ತು ಮುಂಬೈ (2008) ನಂತಹ ದೊಡ್ಡ ದಾಳಿಗಳಿಗೆ ಕಾರಣವಾಗಿವೆ." ಎಂದು ಹೇಳಲಾಗಿತ್ತು.
ಪಹಲ್ಗಾಮ್ ದಾಳಿ ನಡೆದ ನಂತರ ಭಾರತವು ಪಾಕಿಸ್ತಾನದ ವಿರುದ್ಧ ಮಿಲಿಟರಿ ಮಾತ್ರವಲ್ಲ, ರಾಜತಾಂತ್ರಿಕವಾಗಿಯೂ ಕಾರ್ಯಾಚರಣೆ ನಡೆಸಿದೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದೆ, ಇದು ನಿರಂತರ ಭದ್ರತಾ ಕಾಳಜಿಗಳ ನಡುವೆ ದ್ವಿಪಕ್ಷೀಯ ಒಪ್ಪಂದಗಳ ಮೇಲೆ ಕಠಿಣ ನಿಲುವಿನ ಸಂಕೇತವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ. ಇದರೊಂದಿಗೆ, ಪಾಕಿಸ್ತಾನಿ ನಾಗರಿಕರಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಸ್ತಿತ್ವದಲ್ಲಿರುವ ವೀಸಾಗಳನ್ನು ಏಪ್ರಿಲ್ 27, 2025 ರಿಂದ ರದ್ದುಗೊಳಿಸಲಾಗಿದೆ, ಮತ್ತು ವೈದ್ಯಕೀಯ ವೀಸಾಗಳಿಗೆ ಏಪ್ರಿಲ್ 29 ರವರೆಗೆ ಮಾತ್ರ ಸೀಮಿತ ಅವಧಿಯ ಮಾನ್ಯತೆಯನ್ನು ನೀಡಲಾಗಿತ್ತು.. ಭಾರತೀಯ ನಾಗರಿಕರು ಪಾಕಿಸ್ತಾನಕ್ಕೆ ಪ್ರಯಾಣಿಸದಂತೆ ಸಲಹೆ ನೀಡಲಾಗಿದೆ, ಮತ್ತು ಈಗಾಗಲೇ ಅಲ್ಲಿರುವವರು ಹಿಂತಿರುಗುವಂತೆ ಒತ್ತಾಯಿಸಲಾಗಿದೆ.
Read more news like this on kannada.timesnownews.com

