ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಈ ಂಉಲಕ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಆರಂಭದಿಂದಲೇ ಫವರ್ ಹಿಟ್ಟಿಂಗ್ ಮೂಲಕ ಮತ್ತೊಮ್ಮೆ 200+ ರನ್ ಗಳಿಸಿ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸಿದೆ.
ಅದರಲ್ಲಿಯೂ RCB ನಾಯಕ ರಜತ್ ಪಟಿದಾರ್ ಭರ್ಜರಿ ಅರ್ಧಶತಕ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್ ಜಂಟಿಯಾಗಿ ಎರಡನೇ ಅತಿ ವೇಗದ ಅರ್ಧಶತಕ ಗಳಿಸಿದ ದಾಖಲೆಯನ್ನು ಸ್ಥಾಪಿಸಿದರು.
ದಾಖಲೆ ಬರೆದ ರಜತ್ ಪಾಟಿದಾರ್:
ಆರ್‌ಸಿಬಿ ಪರ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ಪಟಿದಾರ್ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಐಪಿಎಲ್‌ನಲ್ಲಿ ರಜತ್ ಪಟಿದಾರ್ ಅವರ 11 ನೇ ಅರ್ಧಶತಕವಾಗಿದೆ. ಪಾಟಿದಾರ್ 20 ಎಸೆತಗಳಲ್ಲಿ 53 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳು ಸಹ ಇದ್ದವು. ಇತ್ತ, 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೊಮಾರಿಯೊ ಶೆಫರ್ಡ್ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಆರ್‌ಸಿಬಿ ಬ್ಯಾಟ್ಸ್‌ಮನ್ ಒಬ್ಬ ಇದುವರೆಗಿನ ಅತ್ಯಂತ ವೇಗದ ಅರ್ಧಶತಕದ ದಾಖಲೆಯನ್ನು ಹೊಂದಿದ್ದಾರೆ. ಆರ್‌ಸಿಬಿ ನಾಯಕ ಕ್ರಿಸ್ ಗೇಲ್ ಅವರೊಂದಿಗೆ ಎರಡನೇ ವೇಗದ ಅರ್ಧಶತಕದ ದಾಖಲೆಯನ್ನು ಹಂಚಿಕೊಂಡಿದ್ದಾರೆ, ಅವರು 2013 ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.
RCB ಪರ ವೇಗದ ಅರ್ಧಶತಕ
ರಜತ್ ಪಾಟಿದಾರ್ - 17 ಎಸೆತಗಳು vs ಮುಂಬೈ
ಕ್ರಿಸ್ ಗೇಲ್ - 17 ಎಸೆತಗಳು vs PWI
ಫಾಫ್ ಡು ಪ್ಲೆಸಿಸ್ - 18 ಎಸೆತಗಳು vs ಜಿಟಿ
ರಾಬಿನ್ ಉತ್ತಪ್ಪ - 19 ಎಸೆತಗಳು vs PBKS
ರಜತ್ ಪಾಟಿದಾರ್ - 19 ಎಸೆತಗಳು vs SRH
Vaibhav Sooryavanshi: 6,6,6,6,6,6,6; ಆರ್‌ಸಿಬಿ ವಿರುದ್ಧ ಯಂಗ್ ಮೊನ್‌ಸ್ಟಾರ್ ಅಬ್ಬರ, ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ಗೆ ದಾಖಲೆಗಳು ಉಡೀಸ್
RCB ದಾಖಲೆ ಸೃಷ್ಟಿಸಿದ ರಜತ್ ಪಾಟಿದಾರ್
ರಜತ್ ಪಾಟಿದಾರ್ ಈಗ ಆರ್‌ಸಿಬಿ ಪರ 20 ಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಬಾರಿ ಐಪಿಎಲ್ ಅರ್ಧಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಭಾರತದ ಟಿ20 ದಂತಕಥೆ ಯುವರಾಜ್ ಸಿಂಗ್ ಅವರ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ದಾಖಲೆಯನ್ನು ಸರಿಗಟ್ಟಬಹುದಿತ್ತು. ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.
ಅಬ್ಬರಿಸಿದ ಆರ್‌ಸಿಬಿ:
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡವು ನಿಗದಿತ 20 ಓವರ್‌ಗೆ 4 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಆರ್‌ಸಿಬಿ ಪರ ಫಿಲ್ ಸಾಲ್ಟ್ 36 ಎಸೆತದಲ್ಲಿ 6 ಸಿಕ್ಸ್ 6 ಫೋರ್ ಸಹಿತ 216ರ ಸ್ಟ್ರೈಕ್‌ರೇಟ್‌ನಲ್ಲಿ 78 ರನ್ ಸಿಡಿಸಿ ಮಿಂಚಿದರು. ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಸಹ ಆಕರ್ಷಕ ಅರ್ಧಶತಕ ಸಿಡಿಸಿದರು. ಕೊಹ್ಲಿ 38 ಎಸೆತದಲ್ಲಿ 1 ಸಿಕ್ಸ್ ಮತ್ತು 5 ಬೌಂಡರಿ ಸಹಿತ 50 ರನ್ ಗಳಿಸಿದರು. ಆದರೆ ನಾಯಕ ರಜತ್ ಪಾಟಿದಾರ್ ಭರ್ಜರಿ ಫಾರ್ಮ್‌ನಲ್ಲಿದ್ದು, ದಾಖಲೆಯ ಅರ್ಧಶತಕ ಸಿಡಿಸಿದರು.
ಪಾಟಿದಾರ್ ಸಹ ಜಸ್ಟ್ 20 ಎಸೆದತಲ್ಲಿ 5 ಸಿಕ್ಸ್ ಮತ್ತು 4 ಫೋರ್ ಮೂಲಕ 53 ರನ್ ಗಳಿಸಿದರು. ಪಾಟಿದಾರ್ 17 ಎಸೆತದಲ್ಲಿ ಅರ್ಧಶತಕ ಸಿಡಿಸಿ ಆರ್‌ಸಿಬಿ ಪರ 2ನೇ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದರು. ಕೊನೆಯಲ್ಲಿ ಟಿಮ್ ಡೇವಡಿ ಸಹ 16 ಎಸೆತದಲ್ಲಿ 3 ಸಿಕ್ಸ್, 2 ಬೌಂಡರಿ ಮೂಲಕ 34 ರ್ನ್ ಹಾಗೂ ರೊಮಾರಿಯೋ ಶೆಫರ್ಡ್ 2 ರನ್ ಗಳಿಸಿದರು. ಮುಂಬೈ ಪರ ಟ್ರೆಂಟ್ ಬೋಲ್ಟ್ 1 ವಿಕೆಟ್, ಹಾರ್ದಿಕ್ ಪಾಂಡ್ಯ 1 ವಿಕೆಟ್, ಮಿಚೆಲ್ ಸ್ಯಾಟ್ನರ್ 1 ವಿಕೆಟ್, ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದು ಮಿಂಚಿದರು.
Read more news like this on kannada.timesnownews.com

