Dailyhunt Logo
  • Light mode
    Follow system
    Dark mode
    • Play Story
    • App Story
Rashmika Mandanna: ಸಹ ನಟಿಯನ್ನ ಹೊಗಳುವ ಭರದಲ್ಲಿ ಅಶ್ಲೀಲ ಪದ ಬಳಸಿದ ರಶ್ಮಿಕಾ ಮಂದಣ್ಣ; ತಕ್ಷಣವೇ SORRY ಎಂದ ನಟಿ..!

Rashmika Mandanna: ಸಹ ನಟಿಯನ್ನ ಹೊಗಳುವ ಭರದಲ್ಲಿ ಅಶ್ಲೀಲ ಪದ ಬಳಸಿದ ರಶ್ಮಿಕಾ ಮಂದಣ್ಣ; ತಕ್ಷಣವೇ SORRY ಎಂದ ನಟಿ..!

TimesNowSuddi 1 week ago

ಟಿ ರಶ್ಮಿಕಾ ಮಂದಣ್ಣ ಒಂದಲ್ಲ, ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ಹೆಚ್ಚಾಗಿ ವಿವಾದಾತ್ಮಕ ಕಾರಣಗಳಿಂದಲೇ ಅವರು ಫೇಮಸ್‌. ಹಾಗೇ, ಈಗ ಅವರ ವಿಡಿಯೊವೊಂದು ಸಾಮಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ. ಅದರಲ್ಲಿ ಅವರು ವೇದಿಕೆ ಮೇಲೆ ಅಶ್ಲೀಲ ಶಬ್ದವೊಂದನ್ನ ಬಳಸಿ, ತಕ್ಷಣವೇ ಕ್ಷಮೆ ಕೇಳಿದ್ದಾರೆ.

ಅಂದಹಾಗೇ, ಈ ಘಟನೆ ನಡೆದಿದ್ದು, 'ಕಾಕ್‌ಟೇಲ್ 2 ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ.

ಇತ್ತೀಚೆಗಷ್ಟೇ ಮದುವೆಯಾದ ರಶ್ಮಿಕಾ ಮಂದಣ್ಣ ಅವರು ಕಾಕ್‌ಟೇಲ್‌ 2 ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಭಾನುವಾರ ನಡೆದ ಹಾಡು ಬಿಡುಗಡೆ ಸಮಾರಂಭದಲ್ಲಿ ಅವರು ತಮ್ಮ ಸಹನಟರಾದ ಶಾಹಿದ್‌ ಕಪೂರ್‌ ಮತ್ತು ಕೃತಿ ಸನೋನ್‌ ಜೊತೆ ವೇದಿಕೆ ಹಂಚಿಕೊಂಡರು. ಹಾಡು ಬಿಡುಗಡೆಯ ಮುಖ್ಯ ಸಮಾರಂಭ ಮುಗಿಯುತ್ತಿದ್ದಂತೆ ನಟ-ನಟಿಯರು ಮಾತನಾಡಿದರು. ಹೀಗೆ ಮಾತನಾಡುವ ವೇಳೆ ರಶ್ಮಿಕಾ ಮಂದಣ್ಣ ಅವರು ಒಂದು ಮುಜುಗರದ ಸನ್ನಿವೇಶವನ್ನ ತಂದುಕೊಂಡರು. ಅವರು ಇಂಗ್ಲಿಷ್‌ F...ಎಂಬ ಶಬ್ದ ಉಪಯೋಗಿಸಿ. ತಕ್ಷಣವೇ ನಾಲಿಗೆ ಕಚ್ಚಿಕೊಂಡು..ಸ್ವಾರಿ..ಸ್ವಾರಿ ಎಂದು ಹೇಳಿದರು. ಅವರು ಮುಜುಗರಕ್ಕೀಡಾದರೂ, ಅಲ್ಲಿದ್ದವರೆಲ್ಲ ಜೋರಾಗಿ ನಕ್ಕಿದ್ದಾರೆ. ಕೃತಿ ಮತ್ತು ಶಾಹೀದ್‌ ಕೂಡ ಸಿಕ್ಕಾಪಟ್ಟೆ ನಕ್ಕಿದ್ದಾರೆ. ನಂತರ ಕೃತಿ ಮತ್ತು ರಷ್ಮಿಕಾ ಒಬ್ಬರನ್ನೊಬ್ಬರು ಹಗ್‌ ಮಾಡಿಕೊಂಡಿದ್ದಾರೆ.

ವಿಡಿಯೊ ವೈರಲ್

ರಶ್ಮಿಕಾ ಮಂದಣ್ಣ ಮಾಡಿರುವ ಎಡವಟ್ಟಿನ ವಿಡಿಯೊ ಸಾಕಷ್ಟು ವೈರಲ್‌ ಆಗಿದೆ. ಇನ್ನು ಇಷ್ಟೆಲ್ಲ ಆಗಿದ್ದು ರಶ್ಮಿಕಾ ಅವರು ಕೃತಿ ಸನೋನ್‌ರನ್ನ ಹೊಗಳುವಾಗ. ʼನೀವು ತುಂಬ ಹಾಟ್‌ ಆಗಿ ಕಾಣುತ್ತೀರಿ..ಅದು ಇಡೀ ಜಗತ್ತಿಗೇ ಗೊತ್ತು..ನೀವು f**king hot ಎಂದು ಅತಿಯಾಗಿ ಹೊಗಳಿಬಿಟ್ಟರು. ಆದರೆ ಇಲ್ಲಿ ಹಾಟ್‌ ಎಂಬ ಶಬ್ದಕ್ಕೆ ತಕರಾರಿಲ್ಲ ಆದರೆ f**king ಎನ್ನುವ ಶಬ್ದ ಅತಿ ಎನ್ನಿಸಿಬಿಟ್ಟಿತು. ಇದು ಹೊಗಳಿಕೆಯಲ್ಲ..ಅಶ್ಲೀಲವಾಗಿ ಗೋಚರಿಸಿತು. ಆದರೆ ರಶ್ಮಿಕಾ ವಿಪರೀತ ಮುಜುಗರಕ್ಕೀಡಾದರು. ಅಷ್ಟೇ ಅಲ್ಲ, ಇದನ್ನ ಕಟ್‌ ಮಾಡಿ..ಕಟ್‌ ಮಾಡಿ ಎಂದು ಹೇಳಿಕೊಂಡರು.

ರಶ್ಮಿಕಾ ಮಂದಣ್ಣ ಅವರ ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, ಬಹುತೇಕ ಇಂಟರ್ನೆಟ್ ಬಳಕೆದಾರರು ಆಕೆಯನ್ನು ಬೆಂಬಲಿಸಿದ್ದಾರೆ. "ಸೆಲೆಬ್ರಿಟಿಗಳು ಕಾಫಿ ವಿತ್ ಕರಣ್‌ನಲ್ಲಿ ಆ ಪದವನ್ನು 100 ಬಾರಿ ಬಳಸುತ್ತಾರೆ. ಜನರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಈ ಪದವನ್ನು ಕೇಳಿದಂತೆ ಏಕೆ ಪ್ರತಿಕ್ರಿಯಿಸುತ್ತಿದ್ದಾರೆ." ಮತ್ತೊಬ್ಬ ನೆಟಿಜನ್, "ರಶ್ಮಿಕಾ ಸ್ವಲ್ಪ ಜಾಸ್ತಿ ಕ್ಯಾಂಡಿಡ್ ಆಗಿರುವಂತೆ ಕಾಣುತ್ತಿದೆ" ಎಂದು ಬರೆದಿದ್ದಾರೆ. ಒಬ್ಬ ನೆಟಿಜನ್, "ಅವರಿಬ್ಬರೂ ಸರಾಸರಿಗಿಂತ ಕೆಳಗಿದ್ದಾರೆ, ರಶ್ಮಿಕಾ ಬಾಡಿಬಿಲ್ಡರ್‌ನಂತೆ ಕಾಣುತ್ತಾಳೆ ಮತ್ತು ಕೃತಿ ಬಾಕ್ಸರ್‌ನ ಮುಖವನ್ನು ಹೊಂದಿದ್ದಾಳೆ, ವಿಶೇಷವಾಗಿ ಆಕೆಯ ಮೂಗು" ಎಂದು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ ಕಮೆಂಟ್‌ ಮಾಡಿ, "ಕ್ಯಾ ಕೆಹ್ ಗಯಿ ಕುಚ್ ಸಮಜ್ ತೊ ಆಯಾ ನಹಿ" ಎಂದು ಬರೆದಿದ್ದಾರೆ.

Actress Rekha: ಬಾಲಿವುಡ್‌ ನಟಿ ರೇಖಾ ಯಾವಾಗಲೂ ಸಿಂದೂರ ಹಚ್ಚಿಕೊಳ್ಳುವುದರ ಹಿಂದಿದೆ ಹೀಗೊಂದು ರಹಸ್ಯ..!

ಇನ್ನು ಕಾಕ್‌ಟೈಲ್ 2, 2012 ರ ಕಾಕ್‌ಟೈಲ್‌ನ ಸೀಕ್ವೆಲ್‌ ಆಗಿದೆ, ಅದರಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ನಟಿಸಿದ್ದಾರೆ. ಹೋಮಿ ಅಡಜಾನಿಯಾ ನಿರ್ದೇಶನದ ಕಾಕ್‌ಟೈಲ್, ದೀಪಿಕಾ ಅವರ ಸರಣಿ ಸೋಲುಗಳ ನಂತರ ಅವರನ್ನು ಮತ್ತೆ ಎ-ಗೇಮ್‌ಗೆ ತರುವ ಮೂಲಕ ಯಶಸ್ಸನ್ನು ಕಂಡಿತು. ಕಾಕ್‌ಟೈಲ್ 2 ಜೂನ್ 19, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Read more news like this on kannada.timesnownews.com

Dailyhunt
Disclaimer: This content has not been generated, created or edited by Dailyhunt. Publisher: TimesNowSuddi