Dailyhunt
Second Puc Result 2026: ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಪ್ರಕಟ! ಚೆಕ್‌ ಮಾಡಲು ಈ ಒಂದು ಲಿಂಕ್‌ ಕ್ಲಿಕ್‌ ಮಾಡಿ ಸಾಕು

Second Puc Result 2026: ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಪ್ರಕಟ! ಚೆಕ್‌ ಮಾಡಲು ಈ ಒಂದು ಲಿಂಕ್‌ ಕ್ಲಿಕ್‌ ಮಾಡಿ ಸಾಕು

TimesNowSuddi 2 weeks ago

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ (Second Puc Result 2026) ರಾಜ್ಯದ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ. ನಿನ್ನೆ ಅಥವಾ ಇಂದು ಫಲಿತಾಂಶ ಪ್ರಕಟ ( Puc Result announcement) ಆಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಇಂದು ಸರ್ಕಾರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನಾಳೆ ಇಡೀ ರಾಜ್ಯವೇ ಎದುರು ನೋಡುತ್ತಿರುವ ದ್ವಿತೀಯ ಪರೀಕ್ಷೆ ಫಲಿತಾಂಶ ಪ್ರಕಟ ಆಗಲಿದೆ ಎಂದು ತಿಳಿಸಿದೆ.

ದಿನಾಂಕ 09-04-2026 ರಂದು ಮಧ್ಯಾಹ್ನ 3.00 ಗಂಟೆಗೆ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಲಾಗಿದೆ. https://karresults.nic.in ಹಾಗೂ KarnatakaOne Mobile App ಮೂಲಕ ಫಲಿತಾಂಶ ತಿಳಿಯಬಹುದು ಎಂದು ಉಲ್ಲೇಖಿಸಲಾಗಿದೆ.

ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್/ಎಸ್‌ಎಂಎಸ್ (SMS) ಮೂಲಕವೂ ಫಲಿತಾಂಶದ ಮಾಹಿತಿಯನ್ನು ಮಂಡಲಿಯಿಂದ ರವಾನಿಸಲಾಗುವುದು. ಈ ವರ್ಷ ಪ್ರಥಮ ಬಾರಿಗೆ ವಿಶೇಷವಾಗಿ, ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ (DigiLocker) ಮೂಲಕ ದಿನಾಂಕ 09-04-2026 ರಂದು ಮಧ್ಯಾಹ್ನ 3.00 ಗಂಟೆಗೆ ಲಭ್ಯಗೊಳಿಸಲಾಗುವುದು. https://www.digilocker.gov.in ಅನ್ನು ಬಳಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚೆಕ್‌ ಮಾಡುವುದು ಹೇಗೆ?

KSEAB 12ನೇ ಫಲಿತಾಂಶವನ್ನು ಪರಿಶೀಲಿಸಲು ಕ್ರಮಗಳು
ಹಂತ 1- karresults.nic.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2- ಪಿಯುಸಿ ಫಲಿತಾಂಶಗಳ ಕುರಿತು ಅಧಿಸೂಚನೆಯನ್ನು ಪರಿಶೀಲಿಸಿ
ಹಂತ 3- ಕರ್ನಾಟಕ ಪಿಯುಸಿ ಹಾಲ್ ಟಿಕೆಟ್‌ನಲ್ಲಿ ಉಲ್ಲೇಖಿಸಿರುವಂತೆ ನಿಮ್ಮ ನೋಂದಣಿ ಸಂಖ್ಯೆಯನ್ನು ಭರ್ತಿ ಮಾಡಿ
ಹಂತ 4- 2ನೇ ಪಿಯುಸಿ ಕರ್ನಾಟಕ ಫಲಿತಾಂಶ 2026 ಅನ್ನು ಸಲ್ಲಿಸಿ ಮತ್ತು ಡೌನ್‌ಲೋಡ್ ಮಾಡಿ ಅಥವಾ ಮುದ್ರಿಸಿ.


SMS ಮೂಲಕ ಚೆಕ್‌ ಮಾಡುವುದು ಹೇಗೆ?

ನಿಮ್ಮ ಮೊಬೈಲ್ ಫೋನ್‌ನಲ್ಲಿ SMS ಅಪ್ಲಿಕೇಶನ್ ತೆರೆಯಿರಿ.
SMS ಅನ್ನು KAR12REGISTRATION NUMBER ಸ್ವರೂಪದಲ್ಲಿ ಟೈಪ್ ಮಾಡಿ.
56263 ಗೆ SMS ಕಳುಹಿಸಿ.
ವಿದ್ಯಾರ್ಥಿಗಳು 2026 ರ ಕರ್ನಾಟಕದ 2 ನೇ ಪಿಯುಸಿ ಫಲಿತಾಂಶವನ್ನು ಅದೇ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸುತ್ತಾರೆ.

ಡಿಜಿ ಲಾಕರ್ ಮೂಲಕ ಪರಿಶೀಲನೆ ಹೇಗೆ?

ಹಂತ 1: ನಿಮ್ಮ ಡಿವೈಸ್‌ನಲ್ಲಿ ಡಿಜಿಲಾಕರ್ ಅಪ್ಲಿಕೇಶನ್ ತೆರೆಯಿರಿ.
ಹಂತ 2 - "Pull Partner Documents" ಆಯ್ಕೆಯನ್ನು ಆರಿಸಿ.
ಹಂತ 3 ಡ್ರಾಪ್‌ಡೌನ್ ಮೆನುವಿನಿಂದ, KSEAB ಆಯ್ಕೆಮಾಡಿ ಮತ್ತು "Karnataka 2nd PUC Marksheet 2026" ಆಯ್ಕೆಮಾಡಿ.
ಹಂತ 4 - ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ಉತ್ತೀರ್ಣರಾದ ವರ್ಷವನ್ನು ನಮೂದಿಸಿ.
ಹಂತ 5 - ನಿಮ್ಮ ಅಂಕಪಟ್ಟಿಯನ್ನು ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡಲು "ಡಾಕ್ಯುಮೆಂಟ್ ಪಡೆಯಿರಿ" ಮೇಲೆ ಕ್ಲಿಕ್ ಮಾಡಿ.
ಹಂತ 6 - ನಿಮ್ಮ 2ನೇ ಪಿಯುಸಿ ಅಂಕಪಟ್ಟಿಯನ್ನು ಸಂಗ್ರಹಿಸಲು "ಲಾಕರ್‌ಗೆ ಉಳಿಸು" ಆಯ್ಕೆಯನ್ನು ಆರಿಸಿ.

ಕಳೆದ ಐದು ವರ್ಷಗಳ ಫಲಿತಾಂಶ ದಿನಾಂಕಗಳು

2025: ಏಪ್ರಿಲ್ 8
2024: ಏಪ್ರಿಲ್ 10
2023: ಏಪ್ರಿಲ್ 21
2022: ಜೂನ್ 18
2021: ಸೆಪ್ಟೆಂಬರ್ 20
2020: ಜುಲೈ 14

Karnataka 2nd PUC Result 2026: ವಿದ್ಯಾರ್ಥಿಗಳ ಗಮನಕ್ಕೆ.. ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ಬಿಗ್‌ ಅಫ್‌ಡೇಟ್‌! ರಿಸಲ್ಟ್‌ ಚೆಕ್‌ ಮಾಡಲು ಇಲ್ಲಿದೆ ಲಿಂಕ್‌

ಈ ವರ್ಷ, ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳು 2026 ಅನ್ನು ಫೆಬ್ರವರಿ 28 ರಿಂದ ಮಾರ್ಚ್ 17, 2026 ರವರೆಗೆ ನಡೆಸಲಾಯಿತು.

Read more news like this on kannada.timesnownews.com

Dailyhunt
Disclaimer: This content has not been generated, created or edited by Dailyhunt. Publisher: TimesNowSuddi