Dailyhunt Logo
  • Light mode
    Follow system
    Dark mode
    • Play Story
    • App Story
Shuba Poonja Divorce: ಕನ್ನಡದ ಸ್ಟಾರ್‌ ನಟಿ ನಟಿ ಶುಭಾ ಪೂಂಜಾ ಬಾಳಲ್ಲಿ ಬಿರುಗಾಳಿ, ಡಿವೋರ್ಸ್‌ಗೆ ಮುಂದಾದ ದಂಪತಿ

Shuba Poonja Divorce: ಕನ್ನಡದ ಸ್ಟಾರ್‌ ನಟಿ ನಟಿ ಶುಭಾ ಪೂಂಜಾ ಬಾಳಲ್ಲಿ ಬಿರುಗಾಳಿ, ಡಿವೋರ್ಸ್‌ಗೆ ಮುಂದಾದ ದಂಪತಿ

TimesNowSuddi 1 week ago

ಸ್ಯಾಂಡಲ್‌ವುಡ್‌ ನಟಿ, ಮಾಜಿ ಬಿಗ್‌ ಬಾಸ್ (Bigg Boss) ಸ್ಪರ್ಧಿಯಾಗಿರುವ ಶುಭಾ ಪೂಂಜಾ (Shubha Poonja) ಅವರ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ವೈವಾಹಿಕ ಬದುಕು ಮದುವೆಯಾದ ನಾಲ್ಕೇ ವರ್ಷಕ್ಕೆ ಮುರಿದು ಬೀಳುವ ಸೂಚನೆ ನೀಡಿದ್ದಾರೆ. ಹೌದು, ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಬಿಲ್ಲವ ಇಬ್ಬರೂ ಸಹ ವಿಚ್ಛೇದನಕ್ಕಾಗಿ ಫ್ಯಾಮಿಲಿ ಕೋರ್ಟ್‌ ಮೊರೆ ಹೋಗಿದ್ದಾರೆ.

ಮದುವೆಯಾಗಿ ನಾಲ್ಕೇ ವರ್ಷಕ್ಕೆ ನಟಿ ಶುಭಾ ಪೂಂಜಾ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಂತಸದಿಂದಿದ್ದ ಈ ಕುಟುಂಬದಲ್ಲಿ ಇದೀಗ ಏಕಾಏಕಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್‌ ಹಿMದಿನ ಕಾರಣ ಈವರೆಗೂ ತಿಳಿದುಬಂದಿಲ್ಲ.

ವಿವಾಹ ಜೀವನಕ್ಕೆ ಫುಲ್‌ ಸ್ಟಾಪ್‌ ಹಾಕಿದ ಶುಭಾ ಪೂಂಜಾ:

ಇನ್ನು, ಉಡುಪಿಯ ಕನ್ನಡಪರ ಹೋರಾಟಗಾರ ಹಾಗೂ ಉದ್ಯಮಿಯಾಗಿರುವ ಸುಮಂತ್ ಬಿಲ್ಲವ ಮತ್ತು ನಟಿ ಶುಭಾ ಪೂಂಜಾ ಅವರು ಪ್ರೀತಿಸಿ ಮದುವೆ ಆಗಿದ್ದರು. ಈ ಜೋಡಿ 2022ರ ಜನವರಿ 5 ರಂದು ಶುಭಾ ಪೂಂಜಾ ಅವರ ಸ್ವಂತ ಊರಿನಲ್ಲಿ ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇದೀಗ ಮದುವೆ ಆಗಿ 4 ವರ್ಷಗಳ ನಂತರ ಈಗ ಇವರಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ (Mutual Consent) ವಿಚ್ಛೇದನ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಅರ್ಜಿ ಭಾಗವಾಗಿ ವಿಚಾರಣೆಯ ದಿನದಂದು ಶುಭಾ ಪೂಂಜಾ ಮತ್ತು ಸುಮಂತ್ ಬಿಲ್ಲವ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚಾರಣೆಗೆ ಖುದ್ದಾಗಿ ಹಾಜರಾಗುವ ಸಾಧ್ಯತೆಯಿದೆ.
Peddi Movie Review: ಹೇಗಿದೆ ಪೆದ್ದಿ ಸಿನಿಮಾ? ರಾಮ್‌ಚರಣ್‌ ಹೊಸ ಅವತಾರಕ್ಕೆ ಏನಂದ್ರು ಪ್ರೇಕ್ಷಕರು? ಶಿವಣ್ಣ ಮಾಸ್ ಲುಕ್‌ಗೆ ಫ್ಯಾನ್ಸ್‌ ಫಿದಾ! ಪೆದ್ದಿ ರಿವ್ಯೂ

ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಶುಭಾ:

ನಾಲ್ಕು ವರ್ಷಗಳ ಸಂಸಾರದಲ್ಲಿ ಏಕಾಏಕಿ ಬಿರುಕು ಮೂಡಲು ನಿಜವಾದ ಕಾರಣ ಏನು ಎನ್ನುವುದು ಈವರೆಗೂ ಅಧಿಕೃತವಾಗಿ ತಿಳಿದುಬಂದಿಲ್ಲ. ಈಗಾಗಲೇ ವಿಚ್ಛೇದನಕ್ಕೆ ಕಾರಣವನ್ನು ಬಹಿರಂಗಪಡಿಸಲು ಸುಮಂತ್ ಬಿಲ್ಲವ ನಿರಾಕರಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನದ ನಿರ್ಧಾರವನ್ನು ಗೌರವಿಸಬೇಕಾಗಿ ಕೋರಿದ್ದಾರೆ. ಇನ್ನು, ಶುಭಾ ಪೂಂಜಾ ಮೊಗ್ಗಿನ ಮನಸ್ಸು, ಜೈ ಮಾರುತಿ 800, ಚಂಡ, ಬಾಲಾ ಸೇರಿದಂತೆ ಹಲವು ಸೂಪರ್‌ ಹಿಟ್‌ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಬಿಗ್ ಬಾಸ್ ಸೀಸನ್ 8 ರಲ್ಲೂ ಸಖತ್ ಮನರಂಜನೆ ನೀಡಿದ್ದ ಶುಭಾ ಪೂಂಜಾ ಅವರ ಈ ಹಠಾತ್ ನಿರ್ಧಾರ ಸ್ಯಾಂಡಲ್‌ವುಡ್ ವಲಯದಲ್ಲಿ ತೀವ್ರ ಆಶ್ಚರ್ಯ ಮೂಡಿಸಿದೆ.

ಶುಭಾ ಪೂಂಜಾ ವೃತ್ತಿಜೀವನ:

ಇನ್ನು, ಮಂಗಳೂರಿನ ತುಳುವ ಕುಟುಂಬದಲ್ಲಿ ಜನಿಸಿದ ಶುಭಾ ಬೆಳೆದಿದ್ದು ಬೆಂಗಳೂರಿನಲ್ಲಿ. ಜಯನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು ಮಾಡೆಲಿಂಗ್ ಮೇಳಿನ ಆಸಕ್ತಿಯಿಂದ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ಸಿನಿಮಾಗೂ ಮುನ್ನ ಶುಭಾ ಅವರು ಹಲವು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. 2003ರಲ್ಲಿ ಮಿಸ್ ಚೆನ್ನೈ ಟಾಪ್ ಮಾಡೆಲ್ ಟೈಟಲ್‌ ಸಹ ಗೆದ್ದಿದ್ದಾರೆ. ಇನ್ನು, 2004ರಲ್ಲಿ ತೆರೆಕಂಡ ಮಚಿ ಚಿತ್ರದ ಮೂಲಕ ನಟಿ ಶುಭಾ ಪೂಂಜಾ ತಮಿಳು ಚಿತ್ರರಂಗ ಪ್ರವೇಶಿಸಿದರು. ಇದಾದ ಬಳಿಕ 2006ರಲ್ಲಿ ತೆರೆಕಂಡ ಜಾಕಪಾಟ್ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು.

Read more news like this on kannada.timesnownews.com

Dailyhunt
Disclaimer: This content has not been generated, created or edited by Dailyhunt. Publisher: TimesNowSuddi