Dailyhunt
Tata Phone 1: ಹೊಸ ಟಾಟಾ ಮೊಬೈಲ್‌, ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಲಗ್ಗೆಯಿಟ್ಟ ಟಾಟಾ!? ಇಷ್ಟು ಕಡಿಮೆ ಬೆಲೆಗಾ?

Tata Phone 1: ಹೊಸ ಟಾಟಾ ಮೊಬೈಲ್‌, ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಲಗ್ಗೆಯಿಟ್ಟ ಟಾಟಾ!? ಇಷ್ಟು ಕಡಿಮೆ ಬೆಲೆಗಾ?

TimesNowSuddi 2 weeks ago

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈಗಾಗಲೇ ಭಾರತದಂತಹ ದೊಡ್ಡ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್, ಶಿಯೋಮಿ, ಆಫಲ್‌ ಹೀಗೆ ಹತ್ತು ಹಲವು ಕಂಪನಿಗಳು ದೈತ್ಯರಾಗಿ ಬೇರೂರಿದ್ದಾರೆ. ಇದರ ನಡುವೆ ಟಾಟಾ ಕಂಪನಿ ನಂಬಿಕೆ, ವಿಶ್ವಾಸಾರ್ಹತೆ ಮತ್ತು ನಾವೀನ್ಯತೆಗೆ ಹೆಸರುವಾಸಿಯಾಗಿದೆ.

ಇದೀಗ ಟಾಟಾ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ʼಟಾಟಾ ಫೋನ್ 1ʼ ಎಂಬ ಫೋನ್‌ ಮೂಲಕ ಮೊಬೈಲ್‌ ಕಾಂತ್ರಿಗೆ ಮುಂದಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳು ಹರಿದಾಡುತ್ತಿದೆ.

ಟಾಟಾ ಫೋನ್‌ 1 ಮೊಬೈಲ್‌

ವದಂತಿಯಾಗಿರುವ ಟಾಟಾ ಫೋನ್ 1 ಈಗಾಗಲೇ ಗಮನ ಸೆಳೆಯಲು ಪ್ರಾರಂಭಿಸಿದೆ. ಅಧಿಕೃತ ವಿವರಗಳು ಇನ್ನೂ ಬಿಡುಗಡೆ ಆಗಿಲ್ಲವಾದರೂ ಸಾಕಷ್ಟು ವಿಡಿಯೋ, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿ ಪ್ರಕಾರ, ಟಾಟಾ ಫೋನ್ 1 ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗುವ ನಿರೀಕ್ಷೆಯಿದೆ. ಅಧಿಕೃತವಾಗಿ ದೃಢೀಕರಿಸಲ್ಪಟ್ಟಿಲ್ಲವಾದರೂ ಟಾಟಾ ಮೊಬೈಲ್‌ ಬಿಡುಗಡೆ ಆದಲ್ಲಿ ಹೊಸ ಕ್ರಾಂತಿ ಆಗುವುದಂತೂ ಖಂಡಿತ ಎಂಬ ಮಾತು ಕೇಳಿಬರುತ್ತಿದೆ.

Tata Phone 1 ವೈಶಿಷ್ಟ್ಯತೆಗಳು

ಟಾಟಾ ಕಾರ್ಯಕ್ಷಮತೆ, ಭದ್ರತೆ ಮತ್ತು ಕೈಗೆಟುಕುವಿಕೆಯ ಮೇಲೆ ಗಮನ ಕೇಂದ್ರೀಕರಿಸುವ ಸಾಧ್ಯತೆಯಿದೆ. ಜಾಗತಿಕ ಮಾರುಕಟ್ಟೆ ಬದಲಿಗೆ ಟಾಟಾ ಮೊದಲು ಭಾರತೀಯ ಬಳಕೆದಾರರಿಗೆ ಆದ್ಯತೆ ನೀಡಬಹುದು. ಟಾಟಾ ಫೋನ್ 1 ಆಧುನಿಕ ವಿನ್ಯಾಸವನ್ನು ಹೊಂದಿರುವ ನಿರೀಕ್ಷೆಯಿದೆ. ಇದು ಹೆಚ್ಚಿನ ರೆಸಲ್ಯೂಶನ್, 6.2-ಇಂಚಿನ AMOLED ಡಿಸ್ಪ್ಲೇ ಇರಲಿದೆ ಎಂದು ವರದಿಯಾಗಿದೆ. ಹೆಚ್ಚುವರಿಯಾಗಿ, ಫೋನ್ ಪ್ರೀಮಿಯಂ ಗ್ಲಾಸ್ ಮತ್ತು ಲೋಹದ ಸೈಡ್‌ ಪ್ಯಾನಲ್‌ ಹೊಂದರುವ ನಿರೀಕ್ಷೆಯಿದೆ.

Tata Phone 1 ಪ್ರೊಸೆಸರ್- ಕ್ಯಾಮೆರಾ

ಟಾಟಾ ಫೋನ್ 1 ಬಹುಶಃ ಸ್ನಾಪ್‌ಡ್ರಾಗನ್ ಫ್ಲ್ಯಾಗ್‌ಶಿಪ್ ಸರಣಿಯಿಂದ ಆರಂಭವಾಗಬಹುದು. ಇದಲ್ಲದೆ, AI-ಆಧಾರಿತ ಆಪ್ಟಿಮೈಸೇಶನ್ ಒಟ್ಟಾರೆ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ಇದು ಹೆಚ್ಚಿನ ರೆಸಲ್ಯೂಶನ್ ಸಂವೇದಕಗಳೊಂದಿಗೆ ಟ್ರಿಪಲ್-ಕ್ಯಾಮೆರಾ ಸೆಟಪ್‌ ಒಳಗೊಂಡಿರಬಹುದು. ಹೆಚ್ಚುವರಿಯಾಗಿ, AI ವರ್ಧನೆಗಳು ಕಡಿಮೆ ಬೆಳಕು ಮತ್ತು ಭಾವಚಿತ್ರ ಮೋಡ್‌ಗಳಲ್ಲಿ ಛಾಯಾಗ್ರಹಣವನ್ನು ಸುಧಾರಿಸಬಹುದು.
Royal Enfield Konyak Scrambler: ರಾಯಲ್‌ ಎನ್‌ಫೀಲ್ಡ್‌ ಕಾಗ್ನ್ಯಾಕ್ ಸ್ಕ್ರ್ಯಾಂಬ್ಲರ್ ಬೆಂಕಿ ಲುಕ್‌! ಹೊಸ ಎನ್‌ಫೀಲ್ಡ್‌ ಬೆಲೆ, ವೈಶಿಷ್ಟ್ಯತೆಗಳ ಸಂಪೂರ್ಣ ವಿವರ

Tata Phone 1 ಬ್ಯಾಟರಿ, ಸ್ಟೋರೆಜ್‌

ಬ್ಯಾಟರಿ ಅತ್ಯಂತ ಮುಕ್ಯವಾಗಿದೆ. ಸಾಧನವು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ದೀರ್ಘಕಾಲೀನ ಬ್ಯಾಟರಿ ಹೊಂದಿರುವ ಸಾಧ್ಯತೆ ಇದೆ. ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಪರಿಚಯಿಸಬಹುದು. ಜೊತೆಗೆ Tata Phone 1 ಮೊಬೈಲ್‌ 6GB, 8GB ಮತ್ತು 12GB RAM ಕಾನ್ಫಿಗರೇಶನ್‌ಗಳನ್ನು ಒಳಗೊಂಡಿರಬಹುದು.

Tata Phone 1 ಬೆಲೆ ಎಷ್ಟು?

ಇನ್ನು, ಟಾಟಾ ಫೋನ್‌ 1 ಬೆಲೆ 25,000 ರೂ. ನಿಂದ 30,000 ರೂ. ವರೆಗೆ ಇರಬಹುದು ಎಂದು ವರದಿಯಾಗಿದೆ. ಅಲ್ಲದೇ ಕೆಲ ವರದಿಗಳ ಪ್ರಕಾರ, ಟಾಟಾ ಫೋನ್ ಪ್ರೀಮಿಯಂ ವಿಭಾಗದಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದ್ದು, ಬಹುಶಃ ₹50,000 ರಿಂದ ₹90,000 ವರೆಗೆ ಬೆಲೆ ಇರಬಹುದು ಎಂಬ ವರದಿಗಳು ಹರರಿದಾಡುತ್ತಿದೆ.

Tata Phone 1 ಫ್ಯಾಕ್ಟ್‌ ಚೆಕ್‌

ಇನ್ನು, ಟಾಟಾ ಫೋನ್ 1 ಅಧಿಕೃತವಾಗಿ ಬಿಡುಗಡೆಯಾಗುತ್ತಿದೆಯೇ ಎಂದು ನೋಡುವುದಾದರೆ, ಪ್ರಸ್ತುತ ನಿರೀಕ್ಷಿತ ಅಥವಾ ವದಂತಿಯಾಗಿದ್ದು ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ. ಅಲ್ಲದೇ ಟಾಟಾ ಕಂಪನಿ ಸಹ ಇದರ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಶಾಡುತ್ತಿರುವ ಫೋಟೋ ಮತ್ತು ವಿಡಿಯೋಗಳು ಬಹುತೇಕ ಎಲ್ಲವೂ AI ಮೂಲಕ ಸೃಷ್ಟಿಸಿದ್ದಾಗಿದ್ದು, ಇದರ ಬಗ್ಗೆ ಅಧಿಕೃತ ಹೇಳಿಕೆ ಇಲ್ಲವಾದ ಕಾರಣ Tata Phone 1 ಬಿಡುಗಡೆ, ಬೆಲೆ ಎಲ್ಲವೂ ಸದ್ಯದ ಊಹಾಪೋಹಗಳಾಗಿದೆ.

Read more news like this on kannada.timesnownews.com

Dailyhunt
Disclaimer: This content has not been generated, created or edited by Dailyhunt. Publisher: TimesNowSuddi