Friday, 31 Jul, 8.08 pm TOD News

Posts
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ: 74 ಜನರಿಗೆ ಸೋಂಕು... ಸೋಂಕಿತರ 990ಕ್ಕೆ ಏರಿಕೆ...

ಸಾಂದರ್ಭಿಕ ಚಿತ್ರ ಬಳಸಿದೆ..   

ಚಿಕ್ಕಮಗಳೂರು ಜು.31: ಜಿಲ್ಲೆಯಲ್ಲಿ ಇಂದು 74 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 28 ಜನರಿಗೆ  ಕಡೂರು ತಾಲ್ಲೂಕಿನಲ್ಲಿ 16,  ತರೀಕೆರೆ 17, ಅಜ್ಜಂಪುರ ಮತ್ತು ಕೊಪ್ಪದಲ್ಲಿ ತಲಾ 4 ಜನರಿಗೆ, ಶೃಂಗೇರಿ ಮತ್ತು ಎನ್ ಆರ್ ಪುರ ತಲಾ 2  ಹಾಗೂ ಮೂಡಿಗೆರೆ 1   ಜನರಿಗೆ ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಟ್ಟು 990 ಕ್ಕೇರಿದ್ದು 529 ಪ್ರಕರಣಗಳು ಸಕ್ರಿಯವಾಗಿದೆ. ಇದುವರೆಗೆ 434 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೆ ಸೋಂಕಿನಿಂದ 21 ಮಂದಿ ಮೃತರಾಗಿದ್ದಾರೆ. ಪ್ರಸ್ತುತ ಸೋಂಕಿತರನ್ನು ಜಿಲ್ಲೆಯ ಕೋವಿಡ್-19 ಸೆಂಟರ್‍  ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲ್ಲಿ ತಿಳಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TOD News
Top