Wednesday, 27 Jan, 10.58 am TV5 ಕನ್ನಡ

ದೇಶ-ವಿದೇಶ
ಅಮೆರಿಕದ ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ಆಂಟನಿ ಬ್ಲಿಂಕೆನ್ ಆಯ್ಕೆ

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಹಲವು ವರ್ಷಗಳಿಂದ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದ ಆಯಂಟೊನಿ ಬ್ಲಿಂಕೆನ್‌ ಅವರನ್ನು ಮುಂದಿನ ವಿದೇಶಾಂಗ ಕಾರ್ಯದರ್ಶಿ ಆಗಿ ಅಮೆರಿಕದ ಸೆನೆಟ್‌ ಮಂಗಳವಾರ ಖಚಿತಪಡಿಸಿದೆ.

ಆಯಂಟೊನಿ ಬ್ಲಿಂಕೆನ್​ ಅವರಿಗೆ 78 ಸೆನೆಟರ್‌ಗಳನ್ನು ಬೆಂಬಲ ಸೂಚಿಸಿದ್ದಾರೆ. ಬ್ಲಿಂಕೆನ್​ ಅವರು ಜೋ ಬೈಡನ್‌ ಅವರ ಸಂಪುಟಕ್ಕೆ ಸೇರ್ಪಡೆ ಆಗುತ್ತಿರುವ ನಾಲ್ಕನೇ ಸದಸ್ಯರಾಗಿದ್ದಾರೆ.

ಸದ್ಯ ಶೀಘ್ರದಲ್ಲೇ ಬ್ಲಿಂಕೆನ್​ ಅವರು ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದ್ದು, 22 ಸೆನೆಟರ್‌ಗಳು ಬ್ಲಿಂಕೆನ್‌ ವಿರುದ್ಧ ಮತ ಚಲಾಯಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top