ಸಿನಿಮಾ
ಚಂದನವನಕ್ಕೆ ಸುಪ್ರೀಂ ಹೀರೋ ಪುತ್ರ ಗ್ರ್ಯಾಂಡ್ ಎಂಟ್ರಿ

ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಸ್ಯಾಂಡಲ್ವುಡ್ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿರೋದು ಗೊತ್ತೇಯಿದೆ. ಸೀತಾಯಣ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಡ್ತಿರೋ ಅಕ್ಷಿತ್ಗೆ ನಮ್ಮ ಕನ್ನಡದ ಸ್ಟಾರ್ಗಳು ಮಾತ್ರವಲ್ದೆ ಟಾಲಿವುಡ್ ಸ್ಟಾರ್ ಕೂಡ ಸಾಥ್ ಕೊಡುತ್ತಿದ್ದಾರೆ. ಚಿತ್ರದ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ.
ಸ್ಯಾಂಡಲ್ವುಡ್ನ ಒಂದ್ಕಾಲದ ನಂಬರ್ ಒನ್ ಡಾನ್ಸರ್. ಸೂಪರ್ ಆಯಕ್ಟರ್, ಬ್ಯುಸಿಯೆಸ್ಟ್ ಹೀರೋ ಶಶಿಕುಮಾರ್. ಇದೀಗ ಶಶಿಕುಮಾರ್ ಪುತ್ರಅಕ್ಷಿತ್ ಶಶಿಕುಮಾರ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿರೋದು ಗೊತ್ತೇಯಿದೆ. ಸೀತಾಯಣ ಎಂಬ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕನಾಗಿ ಮಿಂಚೋಕ್ಕೆ ಹೊರ್ಟಿರೋ ಅಕ್ಷಿತ್, ಕೇವಲ ಕನ್ನಡ ಮಾತ್ರವಲ್ದೆ, ಮೊದಲ ಚಿತ್ರದ ಮೂಲಕವೇ ತಮಿಳು ಮತ್ತು ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ.
ಸೀತಾಯಣ ಈ ಹಿಂದೆ ಸಿನಿಮಾದ ಫಸ್ಟ್ ಲುಕ್, ಮೋಶನ್ ಪೋಸ್ಟರ್ ಮೂಲಕ ಕುತೂಹಲ ಹುಟ್ಟಿಸಿತ್ತಾದ್ರೂ,ಆ ನಂತ್ರ ಚಿತ್ರದ ವಿಡಿಯೋ ಸಾಂಗ್ ರಿಲೀಸ್ ಆಗಿತ್ತು. ಆಂದ್ಹಾಗೇ ಸೀತಾಯಣದ ಮೊದಲ ಹಾಡನ್ನ ರಿಯಲ್ ಸ್ಟಾರ್ ಉಪೇಂದ್ರ ರಿಲೀಸ್ ಮಾಡೋದ್ರ ಮೂಲಕ, ಅಕ್ಷಿತ್ಗೆ ಶುಭಾಶಯ ಹೇಳಿದರು.
ಸದ್ಯ ಇದೀಗ ಸೀತಾಯಣ ಚಿತ್ರದ ಅಫೀಶಿಯಲ್ ಟೀಸರ್ ರಿಲೀಸ್ ಆಗಿದ್ದು, ಕನ್ನಡದ ಟೀಸರ್ನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮತ್ತು ತೆಲುಗು ಟೀಸರ್ನ್ನ ಟಾಲಿವುಡ್ ಸ್ಟಾರ್ ರವಿತೇಜಾ ರಿಲೀಸ್ ಮಾಡಿದ್ದಾರೆ. ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮತ್ತು ಶಶಿಕುಮಾರ್ ತುಂಬಾ ಒಳ್ಳೆ ಸ್ನೇಹಿತರು. ಹಾಗಾಗಿ ಸ್ನೇಹಿತನ ಪುತ್ರ ಚಿತ್ರರಂಗಕ್ಕೆ ಕಾಲಿಡ್ತಿರೋದರ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.
ಇನ್ನು ಸೀತಾಯಣ ಚಿತ್ರದಲ್ಲಿ ಅಕ್ಷಿತ್ಗೆ ಜೋಡಿಯಾಗಿ ಅನ್ಹಿತಾ ಭೂಷಣ್ ಕಾಣಿಸಿಕೊಂಡಿದ್ದು, ಪ್ರಭಾಕರ್ ಆರಿಪಾಕ ನಿರ್ದೇಶನ ಮಾಡಿದ್ದಾರೆ. ಲಲಿತಾ ರಾಜಲಕ್ಷ್ಮಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಸಿನಿಮಾ ತಯಾರಾಗಿದ್ದು, ಸದ್ಯದಲ್ಲೇ ತೆರೆ ಮೇಲೆ ತರೋ ಪ್ಲಾನ್ನಲ್ಲಿದೆ ಚಿತ್ರತಂಡ.