Monday, 18 Jan, 11.13 am TV5 ಕನ್ನಡ

ದೇಶ-ವಿದೇಶ
COVID 19 India Updates: ದೇಶದಾದ್ಯಂತ ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಶೇ.96.59ಕ್ಕೆ ತಲುಪಿದೆ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 13,788 ಜನರಲ್ಲಿ ಕೋವಿಡ್‌-19 ಪತ್ತೆಯಾಗಿದ್ದು, ಇದರೊಟ್ಟಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,05,71,773ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಈ ಸಂದರ್ಭದಲ್ಲಿಯೇ 141 ಸೋಂಕಿತರು ಪ್ರಾಣಕಳೆದುಕೊಂಡಿದ್ದು, ಸಾವಿನ ಸಂಖ್ಯೆ 1,52,419ಕ್ಕೆ ತಲುಪಿದೆ.

ಇನ್ನು ನಿನ್ನೆ ಒಂದೇ ದಿನ ಗುಣಮುಖರಾದ ಸಂಖ್ಯೆ 14,457 ಸೋಂಕಿತರೂ ಸೇರಿದಂತೆ ಈ ವರೆಗೆ ಒಟ್ಟು 1,02,11,342 ಮಂದಿ ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಟ್ಟಿಗೆ ಗುಣಮುಖರಾದವರ ಪ್ರಮಾಣ ಶೇ.96.59ಕ್ಕೆ ತಲುಪಿದ್ದರೆ, ಸಾವಿನ ದರ ಶೇ.1.44ಕ್ಕೆ ಕುಸಿದಿದೆ.

ದೇಶದಲ್ಲಿ ಇನ್ನೂ 2,08,012 ಸಕ್ರಿಯ ಪ್ರಕರಣಗಳು ಇವೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಪ್ರಕರಣಗಳು ಕೇರಳ (69,209) ಮತ್ತು ಮಹಾರಾಷ್ಟ್ರದಲ್ಲಿ (53,852) ಇವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top