Friday, 27 Nov, 11.52 am TV5 ಕನ್ನಡ

ದೇಶ-ವಿದೇಶ
COVID 19 World Updates: ವಿಶ್ವದಾದ್ಯಂತ 6.13 ಕೋಟಿ ಮಂದಿಗೆ ಕೊರೊನಾ ಸೋಂಕು

ವಾಷಿಂಗ್ಟನ್‌: ವಿಶ್ವದಾದ್ಯಂತ ಇಲ್ಲಿಯವರೆಗೆ ಒಟ್ಟು 6.13 ಕೋಟಿ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ವರ್ಲ್ಡೊ ಮೀಟರ್​ ಅಂಕಿ-ಅಂಶಗಳಿಂದ ತಿಳಿದು ಬಂದಿದೆ

ಇದರಲ್ಲಿ 4.23 ಕೋಟಿ ಸೋಂಕಿತರು ಗುಣಮುಖರಾಗಿದ್ದಾರೆ, 14.3 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟಾರೆ 1.74 ಕೋಟಿ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 1,04,914 ಜನರ ಸ್ಥಿತಿ ಗಂಭೀರವಾಗಿದೆ.

ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ ಈವರೆಗೆ ಒಟ್ಟು 1,32,48,256 ಪ್ರಕರಣಗಳು ದಾಖಲಾಗಿದ್ದು, 2,69,555 ಜನರು ಸಾವನ್ನಪ್ಪಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 90.3 ಲಕ್ಷ ಪ್ರಕರಣಗಳು ಪತ್ತೆಯಾಗಿವೆ. ಬ್ರೆಜಿಲ್‌ನಲ್ಲಿ 62.09 ಲಕ್ಷ, ಫ್ರಾನ್ಸ್‌ನಲ್ಲಿ 21.83 ಲಕ್ಷ, ರಷ್ಯಾದಲ್ಲಿ 21.87 ಲಕ್ಷ, ಸ್ಪೇನ್‌ನಲ್ಲಿ 16.37 ಲಕ್ಷಕ್ಕೆ ಏರಿಯಾಗಿವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top