Saturday, 21 Nov, 11.18 am TV5 ಕನ್ನಡ

ದೇಶ-ವಿದೇಶ
COVID India Updates: ದೇಶದಾದ್ಯಂತ ಈವರೆಗೆ ಒಟ್ಟು 77,65,966 ಮಂದಿ ಸೋಂಕಿನಿಂದ ಗುಣಮುಖ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 46,232 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, 564 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ಈವರೆಗೆ ಒಟ್ಟು 90,50,598 ಪ್ರಕರಣಗಳು ದಾಖಲಾಗಿದ್ದು, 1,32,726 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಒಂದೇ ದಿನದಲ್ಲಿ 49,715 ಸೋಂಕಿತರು ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 77,65,966 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 5,20,773 ಸಕ್ರಿಯ ಪ್ರಕರಣಗಳಿವೆ.

ನವೆಂಬರ್​ 20ರ ವರೆಗೆ ಒಟ್ಟು 13,06,57,808 ಕೊರೊನಾ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top