Saturday, 01 Aug, 10.57 pm TV5 ಕನ್ನಡ

ಸಿನಿಮಾ
ಡಾರ್ಲಿಂಗ್​​ ಕೃಷ್ಣನಿಗೆ ಜೋಡಿಯಾದ ಮಲಯಾಳಂ ನಟಿ ಭಾವನ

ಲವ್​ ಮಾಕ್ಟೇಲ್​ ಸಿನಿಮಾ ನಂತರ ಡಾರ್ಲಿಂಗ್ ಕೃಷ್ಣ ಸ್ಯಾಂಡಲ್​ವುಡ್​ನಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕೃಷ್ಣ ಮತ್ತು ಮೈನಾ ನಾಗಶೇಖರ್​ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಸೆಟ್ಟೇರಿತ್ತು. ಆ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ನಾಯಕಿ ಅನ್ನೋ ಗುಸುಗುಸು ಕೇಳಿ ಬಂದಿತ್ತು. ಆದರೆ, ಚಿತ್ರಕ್ಕೀಗ ಹೊಸ ನಾಯಕಿಯ ಎಂಟ್ರಿಯಾಗಿದೆ. ಅದ್ಯಾರು(?)

ಲವ್​ ಮಾಕ್ಟೇಲ್​ ಸಿನಿಮಾ ಡಾರ್ಲಿಂಗ್​ ಕೃಷ್ಣ ಸಿನಿಕರಿಯರ್​ಗೆ ದೊಡ್ಡ ಬ್ರೇಕ್ ಕೊಟ್ಟಿದೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಕೃಷ್ಣ ನಟಿಸ್ತಿದ್ದಾರೆ. ಒಂದ್ಕಡೆ ಲವ್​ ಮಾಕ್ಟೇಲ್​ ಸಿನಿಮಾ ಸೀಕ್ವೆಲ್ ಪ್ರಿ ಪ್ರೊಡಕ್ಷನ್​ ವರ್ಕ್​ ನಡೀತಿದೆ. ಮತ್ತೊಂದ್ಕಡೆ ಲವ್​ ಮಾಕ್ಟೇಲ್​ ಸಿನಿಮಾ ತೆಲುಗಿಗೆ ರೀಮೇಕ್​ ಆಗ್ತಿದೆ. ಇದರ ಮಧ್ಯೆ ಮೈನಾ ನಾಗಶೇಖರ್​ ನಿರ್ದೇಶನದ ಶ್ರೀಕೃಷ್ಣ@ಜಿಮೇಲ್‌.ಕಾಮ್ ಸಿನಿಮಾ ಶುರುವಾಗ್ತಿದೆ.

ಸಂದೇಶ್​ ನಾಗರಾಜ್​ ನಿರ್ಮಾಣದ ಶ್ರೀಕೃಷ್ಣ@ಜಿಮೇಲ್‌.ಕಾಮ್ ಚಿತ್ರದ ಮುಹೂರ್ತ ಕೆಲ ದಿನಗಳ ಹಿಂದೆ ನೆರವೇರಿತ್ತು. ಅರ್ಜುನ್​ ಜನ್ಯ ಚಿತ್ರದ ಸಾಂಗ್​ ರೆಕಾರ್ಡಿಂಗ್​ ಶುರು ಮಾಡಿದರು. ಇದೀಗ ಚಿತ್ರಕ್ಕೆ ಜಾಕಿ ಭಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ರಾಧಿಕಾ ಕುಮಾರಸ್ವಾಮಿ ಚಿತ್ರಕ್ಕೆ ನಾಯಕಿಯಾಗ್ತಾರೆ ಅನ್ನಲಾಗಿತ್ತು. ಡಾರ್ಲಿಂಗ್​ ಕೃಷ್ಣ ಜೊತೆ ಸ್ವೀಟಿ ನಟಿಸೋದು ನಿಜಾನಾ ಅನ್ನೋ ಕುತೂಹಲವೂ ಮೂಡಿತ್ತು. ಎಲ್ಲಾ ಊಹಾಪೋಹಕ್ಕೂ ಬ್ರೇಕ್​ ಬಿದ್ದಿದ್ದು, ಭಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇವತ್ತಿನ ಜನರೇಶನ್​ ಹುಡುಗರ ಕಥೆ ಶ್ರೀಕೃಷ್ಣ@ಜಿಮೇಲ್‌.ಕಾಮ್. ಚಿತ್ರದಲ್ಲಿ ಫ್ಲಟ್​ ಮಾಡುವ ಹುಡುಗನಾಗಿ ಡಾರ್ಲಿಂಗ್​ ಕೃಷ್ಣ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 1ರಿಂದ ಸಿನಿಮಾ ಶೂಟಿಂಗ್​ಗೆ ಪ್ಲಾನ್​ ಮಾಡಲಾಗ್ತಿದೆ. ಕೃಷ್ಣ ಮತ್ತು ಭಾವನ ಜೋಡಿ ಹೇಗೆ ಮೋಡಿ ಮಾಡುತ್ತೋ ಕಾದು ನೋಡಬೇಕಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top