Monday, 17 Aug, 5.55 pm TV5 ಕನ್ನಡ

ಸಿನಿಮಾ
ಧನಂಜಯ್​ ಹೊಸ ಸಿನಿಮಾ ಟೈಟಲ್​ ರಿವೀಲ್​ ಮಾಡಿದ ಅಪ್ಪು

ಟಗರು ಸಿನಿಮಾದಲ್ಲಿ ಡಾಲಿಯಾಗಿ ಅಬ್ಬರಿಸಿದ ಧನಂಜಯ ಈಗ ಫುಲ್​ ಬ್ಯುಸಿ. ಒಂದರ ಹಿಂದೊಂದರಂತೆ ಧನು ಸಿನಿಮಾಗಳು ಅನೌನ್ಸ್​ ಆಗ್ತಾನೆ ಇದೆ. ಸರ್ಪ್ರೈಸಿಂಗ್​ ಅನ್ನುವಂತೆ ಕೆಲ ತಿಂಗಳ ಹಿಂದೆ ಮಾಜಿ ಡಾನ್ ಎಂ.ಪಿ​ ಜಯರಾಜ್ ಬಯೋಪಿಕ್​​ ಅನೌನ್ಸ್​ ಆಗಿತ್ತು. ಆ ಸಿನಿಮಾದಲ್ಲಿ ಡಾಲಿ ಧನಂಜಯ ಜಯರಾಜ್​ ಪಾತ್ರಕ್ಕೆ ಬಣ್ಣ ಹಚ್ಚೋದು ಪಕ್ಕಾ ಆಗಿದೆ. ಚಿತ್ರಕ್ಕೆ ಹೆಡ್​​ ಬುಷ್ ಅನ್ನೋ ಟೈಟಲ್​ ಫಿಕ್ಸ್​ ಆಗಿದೆ.

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​​ ಹೆಡ್​​ ಬುಷ್ ಸಿನಿಮಾ ಟೈಟಲ್​ ಲಾಂಚ್​ ಮಾಡಿದ್ದಾರೆ. ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. 80ರ ದಶಕದಲ್ಲಿ ಬೆಂಗಳೂರಿನ ಅಂಡರ್​ವರ್ಲ್ಡ್​ಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಡಾಲಿ ಧನಂಜಯ ಅವ್ರನ್ನ ಜಯರಾಜ್​ ಪಾತ್ರದಲ್ಲಿ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

ಹೆಡ್​ ಬುಷ್​ ಕಥೆಗೆ ಅಶುಬೆದ್ರ ಬಂಡವಾಳ ಹಾಕ್ತಿದ್ರೆ, ಹೊಸ ಪ್ರತಿಭೆ ಶೂನ್ಯ ಆಯಕ್ಷನ್​ ಕಟ್​ ಹೇಳ್ತಿದ್ದಾರೆ.. ಕೊರೊನಾ ಹಾವಳಿ ಇಲ್ಲದೇ ಇದ್ದಿದ್ರೆ, ಈಗಾಗಲೇ ಶೂಟಿಂಗ್​ ಪ್ರಾರಂಭವಾಗಬೇಕಿತ್ತು. ಅಗ್ನಿ ಶ್ರೀಧರ್​​ ಕಥೆ, ಚಿತ್ರಕಥೆ ಆಧರಿಸಿ ಸಿನಿಮಾಗಳು ಬಂದಿದ್ದು, ಆ ಸಾಲಿಗೆ ಹೊಸ ಸೇರ್ಪಡೆ ಹೆಡ್​ ಬುಷ್​. ಜೋರು ಮಳೆಯ ನಡುವೆ ರೌಡಿಗಳ ಅಟ್ಯಾಕ್​​​​​​​ ಚಿತ್ರದ ಜೊತೆಗೆ ಹಾವು ಏಣಿ ಆಟದ ಶೈಲಿಯಲ್ಲಿ ಫಾಂಟ್​​​ ಡಿಸೈನ್​ ಮಾಡಿ ಸಿನಿಮಾ ಪೋಸ್ಟರ್​ ರಿಲೀಸ್​ ಮಾಡಲಾಗಿದೆ.

ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್‌ ಸೇರಿ ಒಟ್ಟು 6 ಭಾಷೆಗಳಲ್ಲಿ 'ಹೆಡ್​​ ಬುಷ್' ಸಿನಿಮಾ ಬಿಡುಗಡೆ ಆಗುತ್ತೆ ಅನ್ನೋದು ಪುನೀತ್‌ ರಿವೀಲ್​ ಮಾಡಿರೋ ಪೋಸ್ಟರ್​ನಲ್ಲಿ ಗೊತ್ತಾಗ್ತಿದೆ. ಪೋಸ್ಟರ್​ನಲ್ಲಿ ವಾಲ್ಯೂಮ್​ ವನ್ ಅಂತಲೂ ಬರೆದಿದ್ದು, ಹೆಡ್​ ಬುಷ್​ ಸಿನಿಮಾ ಸೀಕ್ವೆಲ್​ ರೂಪದಲ್ಲಿ ಬರೋದು ಕನ್ಫರ್ಮ್​ ಆಗಿದೆ. ಕೆಲ ದಿನಗಳಿಂದ ಜಯರಾಜ್​ ಪಾತ್ರಕ್ಕಾಗಿ ಧನಂಜಯ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ.

ಟೈಟಲ್​ನಿಂದ್ಲೇ ಜಯರಾಜ್​ ಬಯೋಪಿಕ್​ ಸಿನಿಮಾ ಕುತೂಹಲ ಕೆರಳಿಸಿದೆ. ಇನ್ನು ಧನಂಜಯ ಕೀ ರೋಲ್​ ಪ್ಲೇ ಮಾಡ್ತಿರೋದ್ರಿಂದ ಸಹಜವಾಗಿಯೇ ಸಿನಿಮಾ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಹೆಡ್​ಬುಷ್​ ಸರಣಿಯ ಮೊದಲ ಸಿನಿಮಾ ತೆರೆಗೆ ಬರಲಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top