Tuesday, 20 Oct, 4.46 pm TV5 ಕನ್ನಡ

ಸಿನಿಮಾ
ಡಿಡಿಎಲ್​ಜೆಗೆ 25 ವರ್ಷಗಳ ಸಂಭ್ರಮ

ಕೆಲವು ಸಿನಿಮಾಗಳೇ ಹಾಗೇ. ಚಿತ್ರರಂಗದಲ್ಲಿ ಇತಿಹಾಸ ಬರೆದು ಬಿಡುತ್ತೆ. ಹತ್ತು ವರ್ಷಗಳೇ ಆಗಲಿ 25 ವರ್ಷಗಳೇ ಆಗಲಿ. ಎವರ್​ಗ್ರೀನ್​ ಸಿನಿಮಾಗಳಾಗಿ ಉಳಿದು ಬಿಡುತ್ತೆ. ಅಂತಹ ಸಿನಿಮಾಗಳಲ್ಲಿ ಇಡೀ ಭಾರತೀಯ ಸಿನಿರಸಿಕರ ಮನಗೆದ್ದ ಡಿಡಿಎಲ್​ಜೆ ಕೂಡ ಒಂದು. ಸದ್ಯ ಈ ಸಿನಿಮಾಗೇ 25 ವರ್ಷಗಳನ್ನ ಪೂರೈಸಿದ ಸಂಭ್ರಮ.

ದಿಲ್ವಾಲೆ ದುನಿಯಾ ಲೇಜಾಯೆಂಗೆ (ಡಿಡಿಎಲ್​ಜೆ) ಭಾರತೀಯ ಚಿತ್ರರಂಗ ಎಂದು ಮರೆಯದ ಸಿನಿಮಾ. ಬಾಲಿವುಡ್​ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ಸಿನಿಮಾ ಇದು. ಈ ಸಿನಿಮಾ ಮಾಡಿದ ದಾಖಲೆಗಳನ್ನು ಬೇರೆ ಯಾವ ಸಿನಿಮಾಗಳಿಗೂ ಟಚ್​ ಮಾಡೋದಕ್ಕೂ ಸಾಧ್ಯವಾಗಿಲ್ಲ. ಈ ಡಿಡಿಎಲ್​ಜೆ ಸಿನಿಮಾಗೆ ಇದೀಗ ಸಿಲ್ವರ್ ಜ್ಯೂಬಿಲಿ ಸಂಭ್ರಮ. ಈ ಸಂಭ್ರಮಕ್ಕೆ ಶಾರುಖ್​ ಖಾನ್ ಹಾಗೂ ಕಾಜಲ್​ ಟ್ವಿಟರ್​ನಲ್ಲಿ ಹೆಸರು ಬದಲಾಯಿಸಿದ್ದಾರೆ.

ಡಿಡಿಎಲ್​ಜೆ ಬಿಡುಗಡೆಯಾಗಿ ಬರೋಬ್ಬರಿ 25 ವರ್ಷಗಳು ಕಳೆದಿವೆ. 1995ರ ಅಕ್ಟೋಬರ್​ 20ರಂದು ಬಿಡುಗಡೆಯಾಗಿದ್ದ ಆ ಚಿತ್ರ, 2020ರ ಅಕ್ಟೋಬರ್​20ಕ್ಕೆ ಸರಿಯಾಗಿ 25 ವರ್ಷ ಪೂರೈಸಿದೆ. ಬೆಳ್ಳಿ ಹಬ್ಬದ ಸಂಭ್ರದಲ್ಲಿರುವ ಚಿತ್ರತಂಡ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದೆ. ಡಿಡಿಎಲ್​ಜೆ ಸಿನಿಮಾದಲ್ಲಿ ರಾಜ್‌ ಮಲ್ಹೋತ್ರಾ ಎಂಬ ಪಾತ್ರವನ್ನು ಶಾರುಖ್‌ ನಿಭಾಯಿಸಿದ್ದರು. ಅದು ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಆ ಸಂತೋಷಕ್ಕೆ ಟ್ವಿಟರ್‌ನಲ್ಲಿ ತಮ್ಮ ಹೆಸರನ್ನು ರಾಜ್‌ ಮಲ್ಹೋತ್ರಾ ಎಂದು ಬದಲಾಯಿಸಿಕೊಳ್ಳುವ ಮೂಲಕ ಶಾರುಖ್‌ ಸಂಭ್ರಮ ಪಟ್ಟಿದ್ದಾರೆ. ಅದೇ ರೀತಿ ಕಾಜೋಲ್‌ ಕೂಡ ಸಿಮ್ರನ್‌ ಎಂದು ಟ್ವಟಿರ್​​ ಅಕೌಂಟ್​ನಲ್ಲಿ ಹೆಸರು ಚೇಂಚ್‌ ಮಾಡಿಕೊಂಡಿದ್ದಾರೆ.

ಟ್ವಿಟರ್​ನಲ್ಲಿ ರಾಜ್​ ಮಾಲೋತ್ರಾ ಹೆಸರಿನಲ್ಲಿ ಟ್ವಿಟ್​​ ಮಾಡಿರುವ ಶಾರುಖ್​, 25 ವರ್ಷಗಳು, ರಾಜ್ ಮತ್ತು ಸಿಮ್ರಾನ್ ನ್ನ ನಿಮ್ಮ ಪೂರ್ಣ ಹೃದಯದಿಂದ ಪ್ರೀತಿಸಿದ್ದಕ್ಕಾಗಿ ಕೃತಜ್ಞತೆಗಳು ಅಂತ ಹೇಳಿದ್ದಾರೆ. ಇನ್ನು ಈ ಬಗ್ಗೆ ಟ್ವಿಟ್​​ ಮಾಡಿರುವ ಕಾಜೋಲ್ ಈ ಚಿತ್ರ ಇತಿಹಾಸ ಸೃಷ್ಟಿಸಲು ಕಾರಣರಾದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಇನ್ನು ಡಿಡಿಎಲ್​ಜೆಯಲ್ಲಿ ಶಾರುಖ್​ ಖಾನ್​ ಅಪ್ಪನ ಪಾತ್ರ ಮಾಡಿದ್ದ ಅನುಪಮ್ ಖೇರ್​ ಕೂಡ ಟ್ವಿಟರ್​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

​ಡಿಡಿಎಲ್​ಜೆ ಬಾಲಿವುಡ್ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಚಿತ್ರವಾಗಿದ್ದು, ಕಲೆಕ್ಷನ್​ನಲ್ಲಿ ದಾಖಲೆ ಬರೆದಿರುವ ಭಾರತೀಯ ಚಿತ್ರಗಳ ಸಾಲಿಗೆ ಸೇರಿದೆ. 10 ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಅತ್ಯುತ್ತಮ ಮನರಂಜನೆ ನೀಡುವ ಉತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಇದೀಗ ಈ ಸಿನಿಮಾ 25 ವರ್ಷಗಳನ್ನು ಕಂಪ್ಲೀಟ್​ ಮಾಡಿದ್ದು. ಈಗಲೂ ಕೂಡ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top