Tuesday, 18 Aug, 1.36 pm TV5 ಕನ್ನಡ

ರಾಜಕೀಯ
ಜಮೀರ್ ಮೊದಲು ಯಡಿಯೂರಪ್ಪ ಮನೆ ವಾಚ್​ ಮನ್ ​ಕೆಲಸ ಮಾಡಲಿ'

ಬೆಂಗಳೂರು: ಜಮೀರ್ ಮೊದಲು ಯಡಿಯೂರಪ್ಪ ಅವರ ಮನೆ ವಾಚ್​ಮೆನ್​ ಕೆಲಸ ಮಾಡಲಿ ಎಂದು ಮಾಜಿ ಸಚಿವ ರೋಷನ್​ ಬೇಗ್​ ಅವರು ಮಂಗಳವಾರ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಸಿಎಂ ಆದ್ರೆ ವಾಚ್​ಮೆನ್​ ಆಗುತ್ತೇನೆ ಅಂದಿದ್ರು. ವಾದ-ವಿವಾದಕ್ಕೆ ನಾನು ಹೋಗಲ್ಲ, ನಾನು ಚಳವಳಿ ಮೂಲಕ ರಾಜಕೀಯಕ್ಕೆ ಬಂದವನು. ಜಮೀರ್​ ಯಾರು ಅಂತ ನಾನು ಉತ್ತರ ಕೊಡಲಿ(?)ಸೀನಿಯರ್ ಲೀಡರ್ ಕೇಳಿದ್ರೆ ಉತ್ತರ ಕೊಡಬಹುದು ಎಂದು ಅವರು ಜಮೀರ್​ ಅಹಮದ್​ ಖಾನ್​ಗೆ ಟಾಂಗ್​ ನೀಡಿದ್ದಾರೆ.

ಇನ್ನು ಗಲಾಟೆ ಮಾಡಿದವರು ಎಲ್ಲರೂ ಅಮಾಯಕರಲ್ಲ, ಕೆಲವರು ಅಮಾಯಕರಿರಬಹುದು. ನಾನೂ ಗೃಹ ಸಚಿವರೊಟ್ಟಿಗೆ ಮಾತಾಡಿದ್ದೇನೆ. ಅಮಾಯಕರಿದ್ದರೆ ಬಿಡಲು ಹೇಳಿದ್ದೇನೆ. ಅಮಾಯಕರಾಗಿದ್ದರೆ ಗೋರಿಪಾಳ್ಯ, ಕಲಾಸಿಪಾಳ್ಯದಿಂದ ಬಂದು ಯಾಕೆ ಗಲಭೆ ಮಾಡಬೇಕಿತ್ತು(?) ಎಂದು ಅವರು ಹೇಳಿದರು.

ಸದ್ಯ ನನಗೂ ಎಸ್​ಡಿಪಿಐಗೂ ಸಂಬಂಧ ಇಲ್ಲ, ಈ ಪ್ರಕರಣದಲ್ಲಿ ಕೆಲವು ಕಾಂಗ್ರೆಸ್ ನಾಯಕರ ಕೈವಾಡ ಇದೆ. ಅದು ಯಾರು ಅನ್ನೋದು ತನಿಖೆಯಿಂದ ಬಯಲು ಆಗಲಿ ಎಂದು ಮಾಜಿ ಸಚಿವ ರೋಷನ್ ಬೇಗ್ ಅವರು ನೇರವಾಗಿ ಕಾಂಗ್ರೆಸ್​​ ಮೇಲೆ ಆರೋಪ ಮಾಡಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top