ದೇಶ-ವಿದೇಶ
ಜಪಾನಿನಲ್ಲಿ ಮೊತ್ತೊಂದು ಹೊಸ ರೂಪಾಂತರ ವೈರಸ್ ಪತ್ತೆ

ನವದೆಹಲಿ: ವಿಶ್ವಮಟ್ಟದಲ್ಲಿ ಕೋವಿಡ್ 19 ಸೋಂಕು ಬಹಳಷ್ಟು ಸವಾಲ್ಗಳನ್ನು ತಂದೊಡ್ಡಿದ್ದರೆ, ಮತ್ತೊಂದೆಡೆ ಬ್ರಿಟನ್ನಲ್ಲಿ ಪತ್ತೆಯಾದ ರೂಪಾಂತರ ಕೊರೊನಾ ವೈರಸ್ ಆತಂಕಕ್ಕೆ ಕಾರಣವಾಗಿದೆ.
ಇನ್ನು ಈ ಮಧ್ಯೆ ಜಪಾನ್ನಲ್ಲಿ ಕೂಡ ಇಂತಹುದೇ ರೂಪದ ಮತ್ತೊಂದು ಕೊರೊನಾ ವೈರಸ್ ಆವೃತ್ತಿ ಪತ್ತೆಯಾಗಿದೆ. ಜಪಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್ ಹೇಳಿಕೆ ಪ್ರಕಾರ; ಅಲ್ಲಿನ ಅಧಿಕಾರಿಗಳು ಬ್ರೆಝಿಲ್ನಿಂದ ಬಂದ ನಾಲ್ವರು ಪ್ರಯಾಣಿಕರಲ್ಲಿ ಹೊಸರೂಪದ ಕೊರೊನಾ ವೈರಸ್ ಪತ್ತೆಯಾಗಿದೆ ಎಂದಿದ್ದಾರೆ.
ನಿನ್ನೆ (ರವಿವಾರ) ಈ ವಿಷಯದ ಬಗ್ಗೆ ಜಪಾನ್ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಮಾದರಿಯಲ್ಲಿಯೇ ಹೊಸ ಕೊರೊನಾ ವೈರಸ್ ಲಕ್ಷಣಗಳನ್ನೊಳಗೊಂಡಿದ್ದು, ಇದು ರೂಪಾಂತರಗೊಂಡ ವೈರಸ್ ಆವೃತ್ತಿ ಆಗಿರುವ ಸಾಧ್ಯತೆ ಇದೆ. ಆದರೆ, ತಕ್ಷಣಕ್ಕೆ ಈ ಕುರಿತು ಖಚಿತವಾಗಿ ಹೇಳಲಾಗುವುದಿಲ್ಲ ಈ ಹೊಸ ವೈರಸ್ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದೆ.