Friday, 15 Jan, 11.36 am TV5 ಕನ್ನಡ

ದೇಶ-ವಿದೇಶ
ಕೋವಿಡ್​ ಲಸಿಕೆ ವಿತರಣೆ ವಿಚಾರದಲ್ಲಿ ಭಾರತದ ಯೋಜನೆ ಶ್ಲಾಘಿಸಿದ ಅಮೆರಿಕ

ವಾಷಿಂಗ್ಟನ್: ತಮ್ಮ ನೆರೆಯ ರಾಷ್ಟ್ರಗಳಿಗೆ ಹಾಗೂ ಜಗತ್ತಿನ್ಯಾದಂತ ಪಾಲುದಾರ ದೇಶಗಳಿಗೆ ಲಸಿಕೆಗಳನ್ನು ಪೂರೈಸಲು ಸಿದ್ಧವಾಗಿರುವ ಭಾರತದ ಯೋಜನೆಯನ್ನು ಅಮೆರಿಕದ ಅಗ್ರ ಕಾಂಗ್ರೆಸ್ ಮುಖಂಡರು ಶ್ಲಾಘಿಸಿದ್ದಾರೆ.

ನಮ್ಮ ಮಿತ್ರ ದೇಶ ಭಾರತವು ಭಾರತದಲ್ಲಿ ತಯಾರಾದ ಲಕ್ಷಾಂತರ ಕೋವಿಡ್ 19 ಲಸಿಕೆಗಳನ್ನು ಖರೀದಿಸಿ ತನ್ನ ಅಕ್ಕ-ಪಕ್ಕದವರಿಗೆ ಮತ್ತು ವಿಶ್ವದಾದ್ಯಂತ ಪಾಲುದಾರ ರಾಷ್ಟ್ರಗಳಿಗೆ ಪೂರೈಸುತ್ತಿರುವುದನ್ನು ನೋಡಲು ಅದ್ಭುತ ಎನಿಸುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಬ್ರಾಡ್ ಶೆರ್ಮನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಭಾರತವು ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ದೇಶಗಳಲ್ಲಿ ಒಂದಾಗಿದೆ. ಈ ಸಾಂಕ್ರಾಮಿಕ ರೋಗವನ್ನು ತೊಡೆದುಹಾಕಲು ಇಡೀ ಅಂತರರಾಷ್ಟ್ರೀಯ ಸಮುದಾಯಕ್ಕೆ ಅತ್ಯಂತ ಅಗತ್ಯವಿರುವ ಸಮಯದಲ್ಲಿ ಭಾರತವು ಜಗತ್ತಿಗೆ ಸಹಾಯ ಮಾಡಲು ಮುಂದಾಗಿದೆ ಎಂದು ಶೆರ್ಮನ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಜನವರಿ 16ರಿಂದ ಭಾರತದಲ್ಲಿ ಬೃಹತ್ ಲಸಿಕೆ ಅಭಿಯಾನ ಆರಂಭವಾಗುತ್ತಿದ್ದು, ಮೊದಲಿಗೆ ಆದ್ಯತೆ ಮೇರೆಗೆ ಆರೋಗ್ಯ ಸೇವೆ ಮತ್ತು ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ. ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಲಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top