Friday, 27 Nov, 1.39 pm TV5 ಕನ್ನಡ

ದೇಶ-ವಿದೇಶ
ಮಿಗ್​ 29ಕೆ ತರಬೇತಿ ಯುದ್ದ ವಿಮಾನ ಪತನ; ಪೈಲಟ್​ ನಾಪತ್ತೆ

ನವದೆಹಲಿ: ಭಾರತೀಯ ನೌಕಾಪಡೆಯ ಮಿಗ್‌29ಕೆ ತರಬೇತಿ ವಿಮಾನವು ನಿನ್ನೆ ಸಂಜೆ ಪತನವಾಗಿದ್ದು, ಒಬ್ಬ ಪೈಲಟ್​ಅನ್ನು ರಕ್ಷಿಸಿ, ಇನ್ನೊಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ನೌಕಾಪಡೆಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಅರಬ್ಬಿ ಸಮುದ್ರದ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದರು.

ಸದ್ಯ ನಾಪತ್ತೆ ಆಗಿರುವ ಪೈಲಟ್​ಅನ್ನು ಪತ್ತೆ ಹಚ್ಚಲು ಗಸ್ತು ವಿಮಾನ ಮತ್ತು ಹಡಗನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಸಹ ಆದೇಶ ಮಾಡಲಾಗಿದೆ ಎಂದು ನೌಕಾಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top