TV5 ಸ್ಪೆಷಲ್
ಪ್ರೇಮಿಗಳ ದಿನಾಚರಣೆಯಂದೇ ಆದಿ-ನಿಧಿಮಾ ಮದುವೆ ಫಿಕ್ಸ್

ಸ್ಯಾಂಡಲ್ವುಡ್ನ ಮುದ್ದಾದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ಈಗಾಗಲೇ ಆದಿ ನಿಧಿಮಾ ಆಗಿ ಕನ್ನಡಿಗರ ಮನ ಗೆದ್ದಿದ್ದಾರೆ. ಈ ರೀಲ್ ಜೋಡಿ ರಿಯಲ್ ಲೈಫ್ನಲ್ಲೂ ಲವ್ ಬರ್ಡ್ಸ್ ಅನ್ನೋದು ಗೊತ್ತಿರೋ ವಿಚಾರ. ಆದ್ರೀಗ ಇವರಿಬ್ಬರ ಪ್ರೀತಿಗೆ ಮದುವೆ ಅನ್ನೋ ಅಧೀಕೃತ ಮುದ್ರೆ ಬೀಳೋ ಸಮಯ ಬಂದಾಗಿದೆ.
ಸ್ಯಾಂಡಲ್ವುಡ್ ತಾರಾ ಜೋಡಿಯ ಲಿಸ್ಟ್ಗೆ ಮತ್ತೊಂದು ಜೋಡಿ ಆಯಡ್ ಆಗ್ತಾ ಇದೆ. ಲವ್ ಮಾಕ್ಟೇಲ್ ಸಿನಿಮಾ ಮೂಲಕ ಮನೆಮಾತಾದ ಮದರಂಗಿ ಕೃಷ್ಣ ಮತ್ತು ಮಿಲನಾ ನಾಗರಾಜ್ ಹಸೆಮಣೆ ಏರ್ತಿದ್ದಾರೆ. ಏಳು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ, ರೀಸೆಂಟಾಗಷ್ಟೇ ತಮ್ಮ ಪ್ರೀತಿಯ ವಿಚಾರವನ್ನ ಬಹಿರಂಗ ಪಡಿಸಿದರು. ಕೃಷ್ಣ ಮತ್ತು ಮಿಲನ ಹೆಸ್ರಿಗಿಂತ ಆದಿ ನಿಧೀಮಾ ಅಂತ್ಲೇ ಇದೀಗ ಸಖತ್ ಫೇಮಸ್ ಈ ಜೋಡಿ.
ಲವ್ ಮಾಕ್ಟೇಲ್ ಸಿನಿಮಾದಲ್ಲಿ ಕೃಷ್ಣ-ಮಿಲನಾ ಜೋಡಿ ನೋಡಿದ ಸಿನಿಪ್ರಿಯರು ಇವರಿಬ್ಬರ ಅಭಿನಯಕ್ಕೆ ಫಿದಾ ಆಗಿದರು. ಚಿತ್ರದ ಲವ್ ಯೂ ಕಂದ ಸಾಂಗ್ ಅಂತೂ ಸೂಪರ್ ಹಿಟ್ ಆಗಿತ್ತು. ಈ ಜೋಡಿಯ ರಿಯಲ್ ಬಾಂಡಿಂಗ್ ತೆರೆಮೇಲೆ ಎದ್ದು ಕಾಣ್ತಾ ಇತ್ತು. ಅದಾಗಲೇ ಇವರಿಬ್ಬರು ರಿಯಲ್ ಲವ್ವರ್ಸ್ ಅಂತ ಕೆಲವರು ಗೆಸ್ ಮಾಡಿದರು. ಹೀಗಿರುವಾಗಲೇ ಚಿತ್ರದ ಸಕ್ಸಸ್ ಮೀಟ್ನಲ್ಲಿ ತಮ್ಮ ಪ್ರೀತಿಯ ವಿಚಾರವನ್ನ ಎಲ್ಲರ ಜೊತೆ ಶೇರ್ ಮಾಡಿಕೊಂಡರು ಈ ಜೋಡಿ.
ಲವ್ ಮಾಕ್ಟೆಲ್ ಸಿನಿಮಾ ಸಕ್ಸಸ್ ಬೆನ್ನಲ್ಲೇ ಲವ್ ಮಾಕ್ಟೆಲ್ 2 ಚಿತ್ರವನ್ನ ತೆರೆಗೆ ತರುವಲ್ಲಿ ಬ್ಯುಸಿಯಾಗಿದೆ ಈ ಜೋಡಿ. ಇದರ ನಡುವೆಯೇ ಮದುವೆ ಡೇಟ್ ಫಿಕ್ಸ್ ಆಗಿರೋ ಸ್ವೀಟ್ ನ್ಯೂಸ್ನ್ನ ಶೇರ್ ಮಾಡಿಕೊಂಡಿದ್ದಾರೆ. 2021ರ ಫೆಬ್ರವರಿ 14 ಅಂದ್ರೆ ಪ್ರೇಮಿಗಳ ದಿನಾಚರಣೆಯಂದು ಹಸೆಮಣೆ ಏರ್ತಿದ್ದಾರೆ ಕೃಷ್ಣ ಮತ್ತು ಮಿಲನಾ. ಈ ವಿಚಾರವನ್ನ ಸ್ವತಃ ಈ ಜೋಡಿ ಸೋಶೀಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಂದ್ಹಾಗೇ 2020ರಲ್ಲಿ ಸಾಕಷ್ಟು ಜೋಡಿಗಳು ಮದುವೆಯಾದ್ರೂ ಕೂಡ ಕೊರೊನಾ ಸಮಸ್ಯೆಯಿಂದ ಸರಳ ವಿವಾಹ ಮಾಡಿಕೊಳ್ಳಬೇಕಾಯ್ತು. 2020 ಇಡೀ ಸ್ಯಾಂಡಲ್ವುಡ್ಗೆ ಸಾಕಷ್ಟು ಸಮಸ್ಯೆಗಳನ್ನ ತಂದೊಡ್ಡಿತ್ತು. ಆದರೆ, 2021ರ ಬಗ್ಗೆ ಎಲ್ರೂ ಸಾಕಷ್ಟು ನಿರೀಕ್ಷೆಗಳನ್ನ ಇಟ್ಕೊಂಡಿದ್ದಾರೆ. 2021ರಲ್ಲಿ ಸ್ಯಾಂಡಲ್ವುಡ್ನಲ್ಲಿ ನಡೆಯಲಿರೊ ಮೊದಲ ಶುಭಾಕಾರ್ಯವಾಗಲಿದೆ ಇವರ ಮದುವೆ ಸಮಾರಂಭ.
ಇನ್ನು ಪ್ರೇಮಿಗಳ ದಿನಾಚರಣೆ ದಿನ ಮದುವೆ ಡೇಟ್ ಫಿಕ್ಸ್ ಆಗಿದ್ದು, ಬೆಂಗಳೂರಿನಲ್ಲಿಯೇ ವಿವಾಹ ಮಹೋತ್ಸವ ನೆರವೇರಲಿದೆ. ಓಪನ್ ಪ್ಲೇಸ್ನಲ್ಲಿ ಮಂಟಪ ಹಾಕಿ, ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗೋ ಪ್ಲಾನ್ ಇದೆ ಇದನ್ನ ಹೊರತುಪಡಿಸಿ ಇನ್ನೊಂದಷ್ಟು ವಿಚಾರಗಳ ಬಗ್ಗೆ ಇನ್ನಷ್ಟೇ ಪ್ಲಾನ್ ಮಾಡಬೇಕಿದೆ ಅಂತಾರೆ ಮಿಲನಾ ನಾಗರಾಜ್.
ಅಂದ್ಗಾಹೇ ಮಿಲನಾ ಮತ್ತು ಕೃಷ್ಣ ಜೋಡಿ 2013 ರಲ್ಲಿ ನಮ್ ದುನಿಯಾ ನಮ್ ಸ್ಟೈಲ್ ಸಿನಿಮಾ ಮೂಲಕ ಪರಿಚಯವಾಗ್ತಾರೆ. ಆ ಚಿತ್ರದಲ್ಲಿ ಇಬ್ಬರೂ ಜೋಡಿಯಾಗಿ ಅಭಿನಯಿಸಿಲ್ಲವಾದ್ರೂ, ಚಾರ್ಲಿ ಮತ್ತು ಚಂದ್ರಲೇಖಾ ರಿಟರ್ನ್ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ತಾರೆ. ಅಲ್ಲಿಂದ ಸ್ನೇಹ ಪ್ರೀತಿಗೆ ತಿರುಗಿ ಸದ್ಯ ಮದುವೆ ಹಂತ ತಲುಪಿದೆ.
ಇನ್ನು ಈ ಜೋಡಿಯ ಮದುವೆ ಡೇಟ್ ಫಿಕ್ಸ್ ಆಗುತ್ತಿದ್ದ ಹಾಗೇ ಸೋಶೀಯಲ್ ಮಿಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಒಟ್ನಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಲವ್ ಮಾಕ್ಟೇಲ್ ಸಿನಿಮಾ ಮೂಲಕ ಸಿನಿಪ್ರಿಯರ ಮನೆ ಮಾತಾಗಿದ್ದಾರೆ. ಚಿತ್ರರಂಗದಲ್ಲಿ ನಿರ್ದೇಶಕ ನಿರ್ಮಾಪಕರಾಗಿ ಹೊಸ ಹೆಜ್ಜೆ ಇಟ್ಟ ಈ ಜೋಡಿ,ಇದೀಗ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.