Monday, 17 Aug, 11.07 pm TV5 ಕನ್ನಡ

TV5 ಸ್ಪೆಷಲ್
ಸೀಕ್ರೆಟ್​ ಆಗಿ ಎಂಗೇಜ್​ಮೆಂಟ್ ಮಾಡಿಕೊಂಡ್ರಾ ಕಾಜಲ್..?

ಮುಂಬೈನಿಂದ ಸೌತ್ ಸಿನಿದುನಿಯಾಗೆ ಬಂದು ಗೆದ್ದಿರೋ ನಟಿಯರ ಲಿಸ್ಟ್ ದೊಡ್ಡದಿದೆ. ಆ ಲಿಸ್ಟ್​ನಲ್ಲಿ ಮಗಧೀರನ ಚೆಲುವೆ ಕಾಜಲ್ ಅಗರ್​ವಾಲ್​ನ ಮರೆಯುವಂತಿಲ್ಲ. 10 ವರ್ಷಗಳ ಹಿಂದೆ ಟಾಲಿವುಡ್ ಪ್ರವೇಶಿಸಿದ ಈ ಮುಂಬೈ ಪೋರಿ, ಸದ್ಯ ಸೌತ್ ಸಿನಿದುನಿಯಾದ ಟಾಪ್​ ಹೀರೋಯಿನ್ ಆಗಿ ಮೆರೀತ್ತಿದ್ದಾರೆ. ಇದೀಗ ಕಾಜಲ್​ ಸೀಕ್ರೆಟ್​ ಎಂಗೇಜ್ಮೆಂಟ್​ ನ್ಯೂಸ್​​ ಟಾಲಿವುಡ್​ನಲ್ಲಿ ಹಾಟ್​ ಟಾಪಿಕ್​ ಆಗಿದೆ. ಲಾಕ್​​ಡೌನ್​ ಟೈಮಲ್ಲೇ ಬಹಳ ಸರಳವಾಗಿ ನಿಶ್ಚಿತಾರ್ಥ ನೆರವೇರಿದೆ ಅನ್ನಲಾಗುತ್ತಿದೆ.

ತಂಗಿ ಮದುವೆಯಾದ್ರು ಕಾಜಲ್ ಮಾತ್ರ ಸಾಲು ಸಾಲು ಹಿಟ್​ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ವಯಸ್ಸು 35 ದಾಟಿದ್ರು, ಮದುವೆ ಗೊಡವೆಯೇ ಬೇಡ ಅಂತ ಮಿತ್ರವಿಂದ ಸುಮ್ಮನಿದ್ರು. ಆದ್ರೀಗ ಕಾಜಲ್​ ಅರೇಂಜ್​ ಮ್ಯಾರೇಜ್​​ಗೆ ಒಪ್ಪಿದ್ದಾರೆ. ಎಂಗೇಜ್ಮೆಂಟ್​ ಕುಡ ನಡೆದಿದೆ ಅನ್ನೋ ಗುಸುಗುಸು ಕೇಳಿ ಬರ್ತಿದೆ. ಕಾಜಲ್​​, ಗೌತಮ್​ ಎನ್ನುವ ಉದ್ಯಮಿ ಕೈ ಹಿಡಿತ್ತಾರೆ ಅನ್ನಲಾಗುತ್ತಿದೆ.

ಬಹಳ ಸೀಕ್ರೆಟ್​ ಆಗಿ ಕಾಜಲ್​ ಅಗರ್​ವಾಲ್​ ಎಂಗೇಜ್​ಮೆಂಟ್​ ನಡೆದಿದೆ ಅನ್ನಲಾಗ್ತಿದೆ. ಕೆಲವೇ ಆಪ್ತರು ಮತ್ತು ಸ್ನೇಹಿತರು ಕಾರ್ಯಕ್ರಮದಲ್ಲಿ ಹಾಜರಿದ್ದರಂತೆ. ಚಿತ್ರರಂಗದಿಂದಲೂ ಕಾರ್ಯಕ್ರಮಕ್ಕೆ ಯಾರಿಗೂ ಆಹ್ವಾನ ನೀಡಿರಲಿಲ್ಲವಂತೆ. ಆದರೆ, ನಟ ಬೆಲ್ಲಂಕೊಂಡ ಸುರೇಶ್​ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು ಅನ್ನಲಾಗ್ತಿದೆ. ಸೀತಾ, ಕವಚಂ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ಅದೇ ಸ್ನೇಹದಿಂದ ಬೆಲ್ಲಂಕೊಂಡ ಶ್ರೀನಿವಾಸ್​ನ ಮಾತ್ರ ಕಾಜಲ್​ ಎಂಗೇಜ್​ಮೆಂಟ್​ಗೆ ಆಹ್ವಾನಿಸಿದ್ದರಂತೆ.

ಈ ಹಿಂದೆ ಕೂಡ ಕಾಜಲ್​ ಎಂಗೇಜ್​ಮೆಂಟ್​ ಬಗ್ಗೆ ಅಂತೆ ಕಂತೆ ಸುದ್ದಿ ಬಂದಿತ್ತು. ಇದೀಗ ಮತ್ತೊಮ್ಮೆ ಅಂತದ್ದೇ ಸುದ್ದಿ ಬಂದಿದೆ. ಇದು ಎಷ್ಟು ನಿಜ, ಎಷ್ಟು ಸುಳ್ಳು ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ. ಕಾಜಲ್​ ಸಿನಿಮಾಗಳ ಬಗ್ಗೆ ಹೇಳೋದಾದ್ರೆ, ಮೋಸಗಾಳ್ಲು, ಆಚಾರ್ಯ, ಇಂಡಿಯನ್​-2 ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕ್ವೀನ್​ ರೀಮೇಕ್​ ಪ್ಯಾರಿಸ್​ ಪ್ಯಾರಿಸ್​ ಸಿನಿಮಾದಲ್ಲಿ ನಟಿಸಿದ್ದು ಶೀಘ್ರದಲ್ಲೇ ರಿಲೀಸ್​ ಆಗಲಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top