Tuesday, 24 Nov, 1.01 pm TV5 ಕನ್ನಡ

ದೇಶ-ವಿದೇಶ
USA: ರಾಷ್ಟ್ರೀಯ ಭದ್ರತಾ ತಂಡ ಪ್ರಕಟಿಸಿದ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್‌ ಅವರು ರಾಷ್ಟ್ರೀಯ ಭದ್ರತಾ ತಂಡವನ್ನು ಪ್ರಕಟಿಸಿದ್ದು, ಮೂವರು ಮಹಿಳಾ ಸದಸ್ಯರು ಮತ್ತು ಹವಾಮಾನ ರಾಯಭಾರಿಗಳನ್ನು ರಾಷ್ಟ್ರೀಯ ಭದ್ರತಾ ಮಂಡಳಿಯನ್ನು ಒಳಗೊಂಡಿದೆ.

ಜೋ ಬೈಡನ್‌ ಅವರು ವಿದೇಶಾಂಗ ಕಾರ್ಯದರ್ಶಿಯಾಗಿ ಆಂಥೊನಿ ಬ್ಲಿಂಕೆನ್‌, ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿಯಾಗಿ ಅಲೆಜಾಂಡ್ರೊ ಮೇಯರ್‌ಕಾಸ್‌, ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿ ಲಿಂಡಾ ಥಾಮಸ್‌ ಗ್ರೀನ್‌ಫೀಲ್ಡ್‌, ರಾಷ್ಟ್ರೀಯ ಗುಪ್ತಚರ ಇಲಾಖೆಯ ನಿರ್ದೇಶಕರಾಗಿ ಆಯವ್ರಿಲ್‌ ಹೇನ್ಸ್ ನೇಮಕ ಮಾಡಲು ಮುಂದಾಗಿದ್ದಾರೆ.


ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ ಅವರನ್ನು ಹವಾಮಾನ ವಿಚಾರಗಳಿಗೆ ಸಂಬಂಧಿಸಿದಂತೆ ವಿಶೇಷ ಅಧ್ಯಕ್ಷೀಯ ರಾಯಭಾರಿಯಾಗಿ ನಿಯೋಜಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಭದ್ರತಾ ಮಂಡಳಿಯು ಹವಾಮಾನ ರಾಯಭಾರಿಯೊಬ್ಬರನ್ನು ಪರಿಗಣಿಸಿದೆ. ತಂಡದ ಇವರೆಲ್ಲರೂ ಸಾಕಷ್ಟು ಅನುಭವ ಹೊಂದಿರುವವರು ಹಾಗೂ ಕಷ್ಟದ ಸಂದರ್ಭದಲ್ಲಿಯೂ ಹೊಸತನ್ನು ತರುವವರು ಎಂಬುದು ಜೋ ಬಿಡೆನ್​ ಅವರು ಅಭಿಪ್ರಾಯವಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top