Tuesday, 18 Aug, 10.31 am TV5 ಕನ್ನಡ

ಮುಖ್ಯಾಂಶಗಳು
ವಿಶ್ವದಾದ್ಯಂತ 2.20 ಕೋಟಿ ಮಂದಿಗೆ ಕೋವಿಡ್​ 19 ಸೋಂಕು, 7.77 ಲಕ್ಷ ಮಂದಿ ಸಾವು

ವಾಷಿಂಗ್ಟನ್: ಪ್ರಪಂಚದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 22,049,452ಕ್ಕೆ ಬಂದು ನಿಂತಿದ್ದು, 777,440 ಮಂದಿ ಸಾವನ್ನಪ್ಪಿದ್ದಾರೆ. 6,480,143 ಸಕ್ರಿಯ ಪ್ರಕರಣಗಳಿವೆ. ಒಟ್ಟು 14,791,869 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವಲ್ಡೋಮೀಟರ್ ವೆಬ್​ಸೈಟ್​‌ ಮಾಹಿತಿ ನೀಡಿದೆ.

ಅಮೆರಿಕಾ 5,612,027 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. 2,464,724 ಸಕ್ರಿಯ ಪ್ರಕರಣಗಳಿವೆ. ಅಲ್ಲಿ 173,716ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 2,973,587 ಮಂದಿ ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 3,363,235 ಪ್ರಕರಣಗಳು ಪತ್ತೆಯಾಗಿವೆ. 2,478,494 ಸೋಂಕಿತರು ಗುಣಮುಖರಾಗಿದ್ದು, 776,087 ಸಕ್ರಿಯ ಪ್ರಕರಣಗಳಿವೆ. 108,654 ಮಂದಿ ಮೃತಪಟ್ಟಿದ್ದಾರೆ.

ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 2,701,604 ಪ್ರಕರಣಗಳು ದೃಢಪಟ್ಟಿದ್ದು, 1,976,248 ಮಂದಿ ಗುಣಮುಖರಾಗಿದ್ದಾರೆ. 673,431 ಸಕ್ರಿಯ ಪ್ರಕರಣಗಳಿವೆ. ಈವರೆಗೂ 51,925 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ನಾಲ್ಕನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 927,745 ಪ್ರಕರಣಗಳು ದೃಢಪಟ್ಟಿದ್ದು, 736,101 ಮಂದಿ ಗುಣಮುಖರಾಗಿದ್ದಾರೆ. 175,904 ಸಕ್ರಿಯ ಪ್ರಕರಣಗಳಿವೆ. ಈವರೆಗೂ 15,740 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: TV5 Kannada
Top