Dailyhunt Logo
  • Light mode
    Follow system
    Dark mode
    • Play Story
    • App Story
1 ವರ್ಷದ ಬೆಲೆ ಖಾತರಿಯೊಂದಿಗೆ ಜಿಯೋ ಪ್ರೈಮ್ ಮರು ಪರಿಚಯಿಸಿದ ಜಿಯೋ

1 ವರ್ಷದ ಬೆಲೆ ಖಾತರಿಯೊಂದಿಗೆ ಜಿಯೋ ಪ್ರೈಮ್ ಮರು ಪರಿಚಯಿಸಿದ ಜಿಯೋ

ಜಿಯೋದ ಪ್ರಸ್ತುತ ಉದ್ಯಮದ ಪ್ರಮುಖ ಟ್ಯಾರಿಫ್ ಯೋಜನೆಗಳು ರೂ.299 ಸೇರಿದಂತೆ ಎಲ್ಲಾ ಬಳಕೆದಾರರಿಗೆ ಮುಂದುವರಿಯುವ ಯೋಜನೆ

5 ಸೆಪ್ಟೆಂಬರ್ 2027 ರವರೆಗೆ ತಮ್ಮ ನೆಚ್ಚಿನ ಯೋಜನೆಗಳೊಂದಿಗೆ ರೀಚಾರ್ಜ್ ಮಾಡುವುದನ್ನು ಮುಂದುವರಿಸಬಹುದು.

ಮುಂಬೈ: ಜಿಯೋದ ಮೊದಲ 100 ಮಿಲಿಯನ್ ಗ್ರಾಹಕರಿಗೆ ಕೃತಜ್ಞತೆಯ ಸೂಚಕವಾಗಿ ಜಿಯೋ ಪ್ರೈಮ್ ಸದಸ್ಯತ್ವ ಕಾರ್ಯಕ್ರಮ ಜಾರಿಗೊಳಿಸಿದೆ.

ಆಗಸ್ಟ್ 20 ರಿಂದ ಜಿಯೋ ಪ್ರೈಮ್ ಲಭ್ಯವಾಗಲಿದೆ.

ಪ್ರಸ್ತುತ, 500 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಜಿಯೋ ಕುಟುಂಬಕ್ಕೆ ಬೆಲೆ ಖಾತರಿ ಮತ್ತು ಹೆಚ್ಚುವರಿ ಪ್ರಯೋಜನಗಳ ಭರವಸೆಯನ್ನು ಒದಗಿಸಲು ಜಿಯೋ ಪ್ರೈಮ್ ಮತ್ತೆ ಪರಿಚಯಿಸಲಾಗಿದೆ.

1 ವರ್ಷದ ಬೆಲೆ ಖಾತರಿ: ಜಿಯೋ ಪ್ರೈಮ್ ಭವಿಷ್ಯಕ್ಕಾಗಿ ಹೆಚ್ಚುವರಿ ಬೆಲೆ ನಿಶ್ಚಿತತೆಯನ್ನು ಸಕ್ರಿಯಗೊಳಿಸುತ್ತದೆ. ಇದರಿಂದಾಗಿ ಗ್ರಾಹಕರು ತಮ್ಮ ಆದ್ಯತೆಯ ಅರ್ಹ ಜಿಯೋ ಯೋಜನೆಗಳನ್ನು ಇಂದಿನ ಬೆಲೆಗಳಲ್ಲಿ ರೀಚಾರ್ಜ್ ಮಾಡಿದರೆ 1 ವರ್ಷದವರೆಗೆ ಅಂದರೆ 5 ಸೆಪ್ಟೆಂಬರ್ 2027ರವರೆಗೆ ಯಾವುದೇ ಭವಿಷ್ಯದ ಬೆಲೆ ಪರಿಷ್ಕರಣೆ ಅನ್ವಯಿಸುವುದಿಲ್ಲ.

ಏರ್ಟೆಲ್ ತನ್ನ 299 ರೂ. ಪ್ಲಾನ್ ಕೈಬಿಟ್ಟಿದೆ. ಆದರೆ ಜಿಯೋ ಕಂಪನಿ ತನ್ನ 299 ರೂ. ಪ್ಲಾನ್ ಮುಂದುವರೆಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಹೆಚ್ಚುವರಿ ಪ್ರಯೋಜನಗಳು:

ಜಿಯೋ ಪ್ರೈಮ್ ಹಲವಾರು ವಿಶೇಷ ಸದಸ್ಯತ್ವ ಪ್ರಯೋಜನಗಳನ್ನು ತರುತ್ತದೆ. ಅವುಗಳೆಂದರೆ:

600 ರೂ. ಮೌಲ್ಯದ ಕ್ಯಾಶ್ ಬ್ಯಾಕ್ ವೋಚರ್ ಗಳು

ಹೊಸ ಜಿಯೋ ಹೋಮ್ ಅಥವಾ ಜಿಯೋ ಪಿಸಿ ಸಂಪರ್ಕದಲ್ಲಿ 300 ರೂ. ಕ್ಯಾಶ್ ಬ್ಯಾಕ್ ವೋಚರ್ ರಿಡೀಮ್ ಮಾಡಬಹುದು

ಸ್ನೇಹಿತರು ಅಥವಾ ಕುಟುಂಬಕ್ಕಾಗಿ ಹೊಸ ಜಿಯೋ ಸಿಮ್ ಸಂಪರ್ಕವನ್ನು ಸೇರಿಸಲು 300 ರೂ. ಕ್ಯಾಶ್ ಬ್ಯಾಕ್ ವೋಚರ್ ಹೊಸ ಜಿಯೋ ಉತ್ಪನ್ನಗಳು, ಸೇವೆಗಳು ಮತ್ತು ಪ್ರಯೋಗಗಳಿಗೆ ಆರಂಭಿಕ ಪ್ರವೇಶ

ಪ್ರತಿಯೊಬ್ಬ ಜಿಯೋ ಗ್ರಾಹಕರಿಗೂ ಲಭ್ಯವಿದೆ:

ಜಿಯೋ ಪ್ರೈಮ್ ಅಸ್ತಿತ್ವದಲ್ಲಿರುವ ಎಲ್ಲಾ ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಕೇವಲ 300 ರೂ.ಗಳ ಜಾಯಿನ್ ಶುಲ್ಕಕ್ಕೆ ಲಭ್ಯವಿದೆ. ಇತರ ನೆಟ್ವರ್ಕ್‌ಗಳಲ್ಲಿನ ಗ್ರಾಹಕರು ಜಿಯೋಗೆ ಪೋರ್ಟ್ ಮಾಡುವ ಮೂಲಕ ಅಥವಾ ಹೊಸ ಜಿಯೋ ಸಂಪರ್ಕವನ್ನು ಸಕ್ರಿಯಗೊಳಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು.

ಮೈಜಿಯೋ ಆಯಪ್, Jio.com, ಜಿಯೋ ಸ್ಟೋರ್ಸ್ ಮತ್ತು ಜಿಯೋ ಪಾರ್ಟ್ನರ್ ಸ್ಟೋರ್ ಗಳ ಮೂಲಕ ಸದಸ್ಯತ್ವ ಲಭ್ಯವಿರುತ್ತದೆ.

ಜಿಯೋ ಪ್ರೈಮ್ ಸಂಕ್ಷಿಪ್ತ ನೋಟ

ಪ್ರೋಗ್ರಾಂ: ಜಿಯೋ ಪ್ರೈಮ್ - ಜಿಯೋಗೆ 10 ವರ್ಷಗಳು

ಸದಸ್ಯತ್ವ: 300 ರೂ.- ಒಂದು ಬಾರಿ

ಬೆಲೆ ಖಾತರಿ: ಇಂದಿನ ಬೆಲೆಯಲ್ಲಿ ನಿಮ್ಮ ನೆಚ್ಚಿನ ಜಿಯೋ ಯೋಜನೆಯೊಂದಿಗೆ ರೀಚಾರ್ಜ್ ಮಾಡುವುದನ್ನು 5 ಸೆಪ್ಟೆಂಬರ್ 2027 ರವರೆಗೆ ಮುಂದುವರಿಸಿ

ಕ್ಯಾಶ್ ಬ್ಯಾಕ್ ಆಫರ್: 300 ರೂ. ಜಿಯೋ ಹೋಮ್/ಜಿಯೋ ಪಿಸಿ ವೋಚರ್ + 300 ರೂ. ಜಿಯೋ ಸಿಮ್ ವೋಚರ್

ವಿಶೇಷ ಸವಲತ್ತುಗಳು: ಆದ್ಯತೆಯ ಗ್ರಾಹಕ ಬೆಂಬಲ - ಜಿಯೋ ಉತ್ಪನ್ನಗಳು, ಸೇವೆಗಳು ಮತ್ತು ಪ್ರಯೋಗಗಳಿಗೆ ಆರಂಭಿಕ ಪ್ರವೇಶ

ಯಾರು ಸೇರಬಹುದು: ಅಸ್ತಿತ್ವದಲ್ಲಿರುವ ಮತ್ತು ಹೊಸ ಜಿಯೋ ಗ್ರಾಹಕರು

ಸೇರುವುದು ಹೇಗೆ?: ಮೈಜಿಯೋ ಆಯಪ್, Jio.com, ಜಿಯೋ ಸ್ಟೋರ್ ಗಳು ಮತ್ತು ಅಧಿಕೃತ ಜಿಯೋ ಪಾಲುದಾರ ಸ್ಟೋರ್ ಗಳು

Dailyhunt
Disclaimer: This content has not been generated, created or edited by Dailyhunt. Publisher: Udayavani