Dailyhunt
100% ರಿಲೀಸ್‌ ಕ್ಲಾರಿಟಿ ಇಲ್ಲ: ಬಿಡುಗಡೆಗೆ ಕಾಯುತ್ತಿವೆ ಧನಂಜಯ್‌ ಸಿನಿಮಾಗಳು

100% ರಿಲೀಸ್‌ ಕ್ಲಾರಿಟಿ ಇಲ್ಲ: ಬಿಡುಗಡೆಗೆ ಕಾಯುತ್ತಿವೆ ಧನಂಜಯ್‌ ಸಿನಿಮಾಗಳು

“ಎಲ್ಲ ಅಂದುಕೊಂಡಂತೆ ಆಗಿದ್ದರೆ,ಈತಿಂಗಳಲ್ಲಿ ನನ್ನ ಒಂದು ಸಿನಿಮಾವಾದ್ರೂ ರಿಲೀಸ್‌ ಆಗಬೇಕಿತ್ತು. ಆದ್ರೆ ಇನ್ನೂ ಥಿಯೇಟರ್‌ಗಳಲ್ಲಿ 100% ಆಡಿಯನ್ಸ್‌ ಎಂಟ್ರಿಗೆ ಅವಕಾಶವಿಲ್ಲದಿರುವುದರಿಂದ, ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾಗಳೂ ಮುಂದಕ್ಕೆ ಹೋಗುತ್ತಿವೆ.

ಆದಷ್ಟು ಬೇಗ ಥಿಯೇಟರ್‌ಗಳಲ್ಲಿ ಮೊದಲಿನಂತೆ 100% ಆಡಿಯನ್ಸ್‌ ಎಂಟ್ರಿಯಾದರೆ, ಸಿನಿಮಾ ರಿಲೀಸ್‌ ಮಾಡೋದಕ್ಕೆ ಎಲ್ಲರಿಗೂ ಕ್ಲಾರಿಟಿ ಸಿಗುತ್ತದೆ’ ಇದು ನಟ ಡಾಲಿ ಧನಂಜಯ್‌ ಮಾತು.

ಅಂದ ಹಾಗೆ, ಧನಂಜಯ್‌ ಇಂಥದ್ದೊಂದು ಮಾತಾಡೋಕೆ ಕಾರಣ ಸದ್ಯ ಬಿಡುಗಡೆಗೆ ರೆಡಿಯಾಗಿರುವ ಅವರ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳು.

ಡಾಲಿಯ "ಹೆಡ್‌ ಆಯಂಡ್‌ ಬುಷ್‌' ಟೀಮ್‌ ಗೆ ರಘು ಮುಖರ್ಜಿ ಎಂಟ್ರಿ

ಹೌದು, ಧನಂಜಯ್‌ ಅಭಿನಯದ “ಸಲಗ’, “ಬಡವ ರಾಸ್ಕಲ್‌’, “ರತ್ನನ್‌ ಪ್ರಪಂಚ’ ಹೀಗೆ ಒಂದರ ಹಿಂದೊಂದು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದರೂ, ಥಿಯೇಟರ್‌ನಲ್ಲಿ 100% ಪ್ರವೇಶಾತಿಗೆ ಅನುಮತಿ ಸಿಗದೆ ಕಾರಣ ಈ ಎಲ್ಲ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದೂಡುವಂತಾಗಿದೆ.

“ಇದಕ್ಕೆಲ್ಲ ಉತ್ತರ ಸಿಗಬೇಕು ಅಂದ್ರೆ, ಮೊದಲು ಥಿಯೇಟರ್‌ ಗಳಲ್ಲಿ100% ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಸಿಗಬೇಕು’ ಎನ್ನುವುದು ಧನಂಜಯ್‌ ಮಾತು.

“ಇದು ಕೇವಲ ನನ್ನ ಸಿನಿಮಾಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ನೂರಾರು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದು, ಅದರಲ್ಲಿ ಬಹುತೇಕ ಸಿನಿಮಾಗಳು ಯಾವಾಗ ಥಿಯೇಟರ್‌ಗಳಲ್ಲಿ 100% ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿವೆ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದು ಕೊಂಡರೆ, ಚಿತ್ರರಂಗದಲ್ಲಿ ಎಲ್ಲರಿಗೂ ಅನುಕೂಲವಾಗುತ್ತದೆ’ ಎನ್ನುತ್ತಾರೆ ಧನಂಜಯ್‌.

Dailyhunt
Disclaimer: This content has not been generated, created or edited by Dailyhunt. Publisher: Udayavani