Dailyhunt Logo
  • Light mode
    Follow system
    Dark mode
    • Play Story
    • App Story
4 ಗಂಟೆ ಕಾರ್ಯಾಚರಣೆ ನಡೆಸಿ 97ರ  ವೃದ್ಧೆಯನ್ನು ರಕ್ಷಿಸಿದ ನೇಪಾಲ ಸೇನೆ

4 ಗಂಟೆ ಕಾರ್ಯಾಚರಣೆ ನಡೆಸಿ 97ರ ವೃದ್ಧೆಯನ್ನು ರಕ್ಷಿಸಿದ ನೇಪಾಲ ಸೇನೆ

ಠ್ಮಂಡು: ನೇಪಾಲ ಪ್ರವಾಹದ ಅವಶೇಷಗಳಡಿ ಸುಮಾರು 24 ಗಂಟೆ ಸಿಲುಕಿದ್ದರೆನ್ನಲಾದ 97 ವರ್ಷದ ವೃದ್ಧೆಯೊಬ್ಬರನ್ನು ಭದ್ರತ ಪಡೆಗಳು ಯಶಸ್ವಿಯಾಗಿ ಹೊರತಂದಿದ್ದಾರೆ. ಗುಣ ಮಾಯ ಬೊಹಾರ ಎಂಬ ವೃದ್ಧೆಯನ್ನು ರಕ್ಷಿಸಿ, ಬುಲ್ಡೋಜರ್‌ನಲ್ಲಿ ಕೂರಿಸಿಕೊಂಡು ಬರುತ್ತಿರುವ ವೀಡಿಯೋ ವೈರಲ್‌ ಆಗಿದೆ.

ಇದಕ್ಕಾಗಿ ನೇಪಾಲ ಸೇನೆ ಮತ್ತು ಪೊಲೀಸರು ಸತತ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ.

500 ಮೆಟ್ಟಿಲು ಹತ್ತಿ ಪಾರಾದ ದಂಪತಿ: ಭಾರತೀಯ ಮೂಲದ ಅಮೆರಿಕ ದಂಪತಿ ಅಂಜನಾ ರಾಜ ಹಾಗೂ ಪಟ್ಟಾಭಿರಾಮನ್‌ ವೆಂಕಟೇಶನ್‌ ಸುಮಾರು 500 ಮೆಟ್ಟಿಲುಗಳನ್ನು ಹತ್ತಿ ತಮ¬¾ ಜೀವವನ್ನು ಉಳಿಸಿಕೊಂಡಿದ್ದು, ಅನುಭವ ಹಂಚಿಕೊಂಡಿದ್ದಾರೆ. ಕೈಲಾಸ ಯಾತ್ರೆ ಮುಗಿಸಿ ಟಿಮುರೆ ಬಳಿ ಬಸ್‌ನಲ್ಲಿ ಪ್ರಯಾಣಿಸುವಾಗ ಏಕಾಏಕಿ ಪ್ರವಾಹ ಅಪ್ಪಳಿಸಿದೆ. 60-70 ಅಡಿ ಎತ್ತರವಿದ್ದ ನೀರನ್ನು ಕಂಡು ಕಾರ್ಯಪ್ರವೃತ್ತರಾದ ದಂಪತಿ ಬಸ್‌ನಿಂದ ಜಿಗಿದು ಎತ್ತರದ ಪ್ರದೇಶದತ್ತ ಓಡಿದ್ದಾರೆ. ಈ ವೇಳೆ ಕೆಳಭಾಗದಲ್ಲಿನ ಸಂಪೂರ್ಣ ವಿನಾಶವನ್ನು ಕಂಡಿದ್ದಾಗಿ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani