Dailyhunt Logo
  • Light mode
    Follow system
    Dark mode
    • Play Story
    • App Story
5 ವರ್ಷದಲ್ಲಿ ಶೇ.20ರಷ್ಟು ಕರಗಿದ ಸ್ವಿಸ್‌ ನೀರ್ಗಲ್ಲು!

5 ವರ್ಷದಲ್ಲಿ ಶೇ.20ರಷ್ಟು ಕರಗಿದ ಸ್ವಿಸ್‌ ನೀರ್ಗಲ್ಲು!

ಜಿನೀವಾ: ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ವೈಪರೀತ್ಯದ ತೀವ್ರ ಹೊಡೆತಕ್ಕೆ ಸಿಲುಕಿರುವ ಸ್ವಿಜರ್ಲೆಂಡ್‌ನ‌ ಆಲ್‌ಪೈನ್‌ ಹಿಮನದಿಗಳು (ನೀರ್ಗಲ್ಲುಗಳು) ಕೇವಲ ಐದೇ ವರ್ಷಗಳಲ್ಲಿ ತನ್ನ ಒಟ್ಟು ಮಂಜುಗಡ್ಡೆಯ ಐದನೇ ಒಂದು ಭಾಗವನ್ನು ಅಂದರೆ ಶೇ.20ರಷ್ಟನ್ನು ಕಳೆದುಕೊಂಡಿವೆ ಎಂದು ಗ್ಲಾಮೋಸ್‌ ಸಂಸ್ಥೆಯ ಜಂಟಿ ಅಧ್ಯಯನ ವರದಿ ತಿಳಿಸಿದೆ.

2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ದೇಶದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಉಷ್ಣಾಂಶ ಹಾಗೂ ಶುಷ್ಕತೆಯಿಂದ ಕೂಡಿದ್ದ ಹಿನ್ನೆಲೆಯಲ್ಲಿ ಈ ಮಹಾ ವಿನಾಶ ಸಂಭವಿಸಿದೆ ಎಂದು ವರದಿಯಲ್ಲಿ ಹೇಳಿದೆ. ಇಡೀ ಯುರೋಪ್‌ ಖಂಡಕ್ಕೆ ಶೇ.50ಕ್ಕಿಂತ ಹೆಚ್ಚು ಜಲಮೂಲ ಒದಗಿಸುವ ಕಾರಣಕ್ಕೆ "ಯುರೋಪಿನ ನೀರಿನ ಟ್ಯಾಂಕ್‌' ಎಂದೇ ಕರೆಯಲ್ಪಡುವ ಸ್ವಿಜರ್ಲೆಂಡ್‌ನ‌ ನೀರ್ಗಲ್ಲುಗಳು ಕರಗಿದ್ದು, ಈ ಹವಾಮಾನ ವೈಪರೀತ್ಯವು ಇಡೀ ಜಗತ್ತನ್ನೇ ಈಗ ಆತಂಕಕ್ಕೆ ತಳ್ಳಿದೆ. ಬರೀ 8 ತಿಂಗಳಲ್ಲೇ ಈ ಹಿಮನದಿಗಳ ಪದರಗಳು ಬರೋಬ್ಬರಿ 10 ಮೀಟರ್‌ಗಳಷ್ಟು ಕರಗಿರುವುದು ಭಾರಿ ಅಚ್ಚರಿಗೂ ಕಾರಣವಾಗಿದೆ ಎಂದು ಜಂಟಿ ಅಧ್ಯಯನ ವರದಿಯಲ್ಲಿ ಉಲ್ಲೇಖೀಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani