Dailyhunt
8 ವರ್ಷದ ಮಗುವಿನ ಮೇಲೆ 48 ವರ್ಷದ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ.!

8 ವರ್ಷದ ಮಗುವಿನ ಮೇಲೆ 48 ವರ್ಷದ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ.!

ಮಂಡ್ಯ: 8 ವರ್ಷದ ಹೆಣ್ಣು ಮಗುವಿನ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಮದ್ದೂರು ಪಟ್ಟಣದಲ್ಲಿ ನಡೆದಿದೆ. ಸಿದ್ದಾರ್ಥ ನಗರದ 6ನೇ ಕ್ರಾಸ್ ನ ಪ್ರಕಾಶ್ (48) ಎಂಬ ವ್ಯಕ್ತಿಯೇ ದೌರ್ಜನ್ಯ ಎಸಗಿರುವ ವ್ಯಕ್ತಿಯಾಗಿದ್ದಾನೆ ಎನ್ನಲಾಗಿದೆ.

ಮಂಗಳವಾರ ಸಂಜೆ ಮನೆಯ ಹೊರಗಡೆ ಆಟ ಆಡುತ್ತಿದ್ದ ಮಗುವನ್ನು ತಿಂಡಿ ಕೊಡಿಸುತ್ತೇನೆಂದು ಪುಸಲಾಯಿಸಿ ತನ್ನ ಮನೆಗೆ ಕರೆದು ಕೊಂಡು ಹೋಗಿ ಆ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತಕ್ಷಣವೇ ಮಗು ಕಿರುಚಾಟ ಮಾಡುತ್ತಾ ಮನೆಯಿಂದ ಹೊರಗಡೆಗೆ ಓಡಿ ಬಂದಿದೆ. ಮನೆಯವರು ಮತ್ತು ಅಕ್ಕ ಪಕ್ಕದವರು ಜನರು ಮಗುವನ್ನು ಸಮಾಧಾನ ಪಡಿಸಿ ವಿಚಾರಿಸಿದಾಗ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಇನ್ನು ಘಟನೆ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani