Dailyhunt Logo
  • Light mode
    Follow system
    Dark mode
    • Play Story
    • App Story
90 ಕಿ.ಮೀ. ದೂರ ಸಾಗಬಲ್ಲ ಪಿನಾಕಾ ರಾಕೆಟ್‌ ಪರೀಕ್ಷೆ ಯಶಸ್ವಿ

90 ಕಿ.ಮೀ. ದೂರ ಸಾಗಬಲ್ಲ ಪಿನಾಕಾ ರಾಕೆಟ್‌ ಪರೀಕ್ಷೆ ಯಶಸ್ವಿ

ಹೊಸದಿಲ್ಲಿ: ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ತಯಾರಿಸಿರುವ ಪಿನಾಕಾ ರಾಕೆಟ್‌ ಪರೀಕ್ಷೆಯನ್ನು ಬುಧವಾರ ಯಶಸ್ವಿಯಾಗಿ ನಡೆಸಲಾಗಿದೆ. ಒಡಿಶಾದ ಚಂಡೀಪುರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಈ ಪರೀಕ್ಷೆಯನ್ನು ಕೈಗೊಂಡಿದೆ.

ಇದು ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಅತ್ಯಾಧುನಿಕ ರಾಕೆಟ್ ತಂತ್ರಜ್ಞಾನವಾಗಿದ್ದು, ಶತ್ರುಗಳ ನೆಲೆಗಳನ್ನು ಅತ್ಯಂತ ನಿಖರವಾಗಿ ಧ್ವಂಸ ಮಾಡುವ ಶಕ್ತಿಯನ್ನು ಹೊಂದಿದೆ.

ಕೇಂದ್ರ ಸರ್ಕಾರದ 'ಆತ್ಮನಿರ್ಭರ ಭಾರತ' ಯೋಜನೆಯಡಿ ಈ ರಾಕೆಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಭಾರತೀಯ ಸೇನೆಗೆ ಶತ್ರುಗಳ ಮೇಲೆ ದೂರದಿಂದಲೇ ಕರಾರುವಾಕ್ಕಾಗಿ ದಾಳಿ ನಡೆಸುವ ದೊಡ್ಡ ಸಾಮರ್ಥ್ಯವನ್ನು ನೀಡುತ್ತದೆ.

90 ಕಿ.ಮೀ. ದೂರದ ಗುರಿಯನ್ನು ನಾಶಪಡಿಸುವ ಸಾಮರ್ಥಯವನ್ನು ಈ ರಾಕೆಟ್‌ ಹೊಂದಿದ್ದು, 60 ಕಿ.ಮೀ. ದೂರದ ಪರೀಕ್ಷೆಯನ್ನು ಕೈಗೊಳ್ಳಲಾಯಿತು. ಈ ವೇಳೆ ರಾಕೆಟ್‌ ನಿಖರವಾಗಿ ನಿಗದಿತ ಗುರಿಯನ್ನು ತಲುಪಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani