Dailyhunt Logo
  • Light mode
    Follow system
    Dark mode
    • Play Story
    • App Story
ಆಗಸ್ಟ್‌ನಲ್ಲಿ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಮಾರಾಟ ಭಾರಿ ಏರಿಕೆ

ಆಗಸ್ಟ್‌ನಲ್ಲಿ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಮಾರಾಟ ಭಾರಿ ಏರಿಕೆ

ವದೆಹಲಿ: ದೇಶದಲ್ಲಿ ಅನಿಯಮಿತ ಮುಂಗಾರು ಮಳೆಯ ಪರಿಣಾಮವಾಗಿ ಕೃಷಿ ಚಟುವಟಿಕೆಗಳು ಹೆಚ್ಚಾಗಿದ್ದು, ಆಗಸ್ಟ್ ತಿಂಗಳಲ್ಲಿ ಸಾರ್ವಜನಿಕ ಸ್ವಾಮ್ಯದ ಮೂರೂ ತೈಲ ಮಾರುಕಟ್ಟೆ ಕಂಪನಿಗಳ ಪೆಟ್ರೋಲ್, ಡೀಸೆಲ್ ಮಾರಾಟದಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ ಎಂದು ಮಂಗಳವಾರ ಬಿಡುಗಡೆಯಾದ ಕೈಗಾರಿಕಾ ಮಾರಾಟದ ದತ್ತಾಂಶಗಳು ತಿಳಿಸಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಕಂಪನಿಗಳ ಪೆಟ್ರೋಲ್ ಮಾರಾಟ ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 3.19 ದಶಲಕ್ಷ ಟನ್‌ಗೆ ಹೋಲಿಸಿದರೆ ಶೇ.9.1ರಷ್ಟು ಜಿಗಿತಗೊಂಡು, ಆಗಸ್ಟ್‌ನಲ್ಲಿ 3.48 ದಶಲಕ್ಷ ಟನ್‌ಗೆ ತಲುಪಿದೆ. ಇನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ 5.96 ದಶಲಕ್ಷ ಟನ್‌ನಷ್ಟಿದ್ದ ಡೀಸೆಲ್‌ ಮಾರಾಟ ಈ ವರ್ಷದ ಆಗಸ್ಟ್‌ನಲ್ಲಿ 6.27 ದಶಲಕ್ಷ ಟನ್‌ನಷ್ಟಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani