ನವದೆಹಲಿ: ಆರೋಗ್ಯ ಸೇವೆಗಳ ಡಿಜಿಟಲೀಕರಣಕ್ಕಾಗಿ ಕೇಂದ್ರ ಸರ್ಕಾರ 'ಆರೋಗ್ಯ ಸೇತು 2.0' ಆಯಪ್‌ಗೆ ಸೋಮವಾರ ಚಾಲನೆ ನೀಡಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಈ ಆಯಪ್‌ಗೆ ಚಾಲನೆ ನೀಡಿದ್ದಾರೆ. ಕೋವಿಡ್ ವೇಳೆ ಸ್ಥಾಪಿಸಲಾಗಿದ್ದ ಆಯಪ್ ಅನ್ನು ಇದೀಗ ಸಮಗ್ರ ಡಿಜಿಟಲ್ ಆರೋಗ್ಯ ನಿರ್ವಹಣಾ ವೇದಿಕೆಯಾಗಿ ನವೀಕರಣಗೊಳಿಸಲಾಗಿದೆ.
ಈ ಆಯಪ್‌ನಲ್ಲಿ ಬಳಕೆದಾರರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿಡಬಹುದು.

