Thursday, 29 Oct, 11.45 pm ಉದಯವಾಣಿ

ಟಾಪ್ 40 ಸುದ್ದಿ
ಆಸೀಸ್‌ ತಂಡಕ್ಕೆ ಆಲ್‌ರೌಂಡರ್‌ ಗ್ರೀನ್‌ ಸೇರ್ಪಡೆ

ಮೆಲ್ಬರ್ನ್: ಪ್ರವಾಸಿ ಭಾರತದೆದುರಿನ ಏಕದಿನ ಮತ್ತು ಟಿ20 ಸರಣಿಗಾಗಿ ಗುರುವಾರ ತಂಡವನ್ನು ಅಂತಿಮ ಗೊಳಿಸಿರುವ ಆಸ್ಟ್ರೇಲಿಯ, ಯುವ ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ಅವರನ್ನು ಸೇರಿಸಿಕೊಂಡಿದೆ. ಹಾಗೆಯೇ 3 ವರ್ಷಗಳ ಬಳಿಕ ಮೊಸಸ್‌ ಹೆನ್ರಿಕ್ಸ್‌ ಅವರನ್ನು ಮರಳಿ ಕರೆಸಿಕೊಂಡಿದೆ.

“ವೆಸ್ಟರ್ನ್ ಆಸ್ಟ್ರೇಲಿಯದ ಕ್ಯಾಮರಾನ್‌ ಗ್ರೀನ್‌ ದೇಶಿ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಅವರು ಭವಿಷ್ಯದ ಆಟಗಾರ. ಹೀಗಾಗಿ ಅವಕಾಶ ಕಲ್ಪಿಸಲಾಗಿದೆ’ ಎಂದು ಆಯ್ಕೆ ಮಂಡಳಿ ಅಧ್ಯಕ್ಷ ಟ್ರೆವರ್‌ ಹಾನ್ಸ್‌ ಹೇಳಿದ್ದಾರೆ. ರಿಕಿ ಪಾಂಟಿಂಗ್‌ ಬಳಿಕ ನಾನು ಕಂಡ ಪ್ರತಿಭಾನ್ವಿತ ಆಟಗಾರ ಎಂದು ಇತ್ತೀಚೆಗೆ ಗ್ರೀನ್‌ ಅವರನ್ನು ಮಾಜಿ ನಾಯಕ ಗ್ರೆಗ್‌ ಚಾಪೆಲ್‌ ಪ್ರಶಂಸಿಸಿದ್ದರು.

ಮೊಸಸ್‌ ಹೆನ್ರಿಕ್ಸ್‌ ಬಿಗ್‌ ಬಾಶ್‌ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ ಪರ 150ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಪೇರಿಸಿದ್ದರು. ಗಾಯಾಳು ಮಿಚೆಲ್‌ ಮಾರ್ಷ್‌ ಗೈರಲ್ಲಿ ಅನುಭವಿ ಹೆನ್ರಿಕ್ಸ್‌ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರನ್‌ ಫಿಂಚ್‌ ಎರಡೂ ತಂಡಗಳ ನಾಯಕರಾಗಿದ್ದಾರೆ.

ಆಸ್ಟ್ರೇಲಿಯ ಏಕದಿನ, ಟಿ20 ತಂಡ
ಆರನ್‌ ಫಿಂಚ್‌ (ನಾಯಕ), ಪ್ಯಾಟ್‌ ಕಮಿನ್ಸ್‌ (ಉಪನಾಯಕ), ಡೇವಿಡ್‌ ವಾರ್ನರ್‌, ಮಾರ್ನಸ್‌ ಲಬುಶೇನ್‌, ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಸೀನ್‌ ಅಬೋಟ್‌, ಮ್ಯಾಥ್ಯೂ ವೇಡ್‌, ಆಯಶrನ್‌ ಅಗರ್‌, ಅಲೆಕ್ಸ್‌ ಕ್ಯಾರಿ, ಕ್ಯಾಮರಾನ್‌ ಗ್ರೀನ್‌, ಜೋಶ್‌ ಹ್ಯಾಝಲ್‌ವುಡ್‌, ಮೊಸಸ್‌ ಹೆನ್ರಿಕ್ಸ್‌, ಡೇನಿಯಲ್‌ ಸ್ಯಾಮ್ಸ್‌, ಕೇನ್‌ ರಿಚರ್ಡ್‌ಸನ್‌, ಮಿಚೆಲ್‌ ಸ್ಟಾರ್ಕ್‌, ಆಯಡಂ ಝಂಪ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top