Dailyhunt Logo
  • Light mode
    Follow system
    Dark mode
    • Play Story
    • App Story
ಅಡ್ಯನಡ್ಕ: ಮಟ್ಕಾ ಆಡಿಸುತ್ತಿದ್ದ ಯುವಕ ಸೆರೆ

ಅಡ್ಯನಡ್ಕ: ಮಟ್ಕಾ ಆಡಿಸುತ್ತಿದ್ದ ಯುವಕ ಸೆರೆ

ವಿಟ್ಲ: ಅಡ್ಯನಡ್ಕಧ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಮೂಲಕ ಮಟ್ಕಾ ಜೂಜಾಟವನ್ನು ಆಡಿಸುತ್ತಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಬಿ. ಎಸ್. ನಾಯಕ್ (ತನಿಖೆ-2) ಅವರಿಗೆ ಮಾಹಿತಿ ದೊರೆತು ದಾಳಿ ನಡೆಸಿದಾಗ ಓಡಲು ಪ್ರಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದರು.

ಮಟ್ಕಾವನ್ನು ಆಡಿಸುತ್ತಿರುವುದನ್ನು ಒಪ್ಪಿಕೊಂಡಿದ್ದು ಮುಂದಿನ ಕಾನೂನುಕ್ರಮಕ್ಕಾಗಿ ಆತನ ಬಳಿಯಿದ್ದ ಮೊಬೈಲ್‌ ಹಾಗೂ ಸದ್ರಿ ಕೃತ್ಯದಿಂದ ಸಂಗ್ರಹಿಸಿದ 750 ರೂಪಾಯಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಶೋಕ್ ಕೇಪು ಆರೋಪಿಯೊಂದಿಗೆ ಸಹಕರಿಸಿರುವುದು ವಿಚಾರಣೆಯಲ್ಲಿ ತಿಳಿದುಬಂದಿರುತ್ತದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani