ಟಾಪ್ 10 ಸುದ್ದಿ
ಅಲ್‌ಖೈದಾ ಜೊತೆ ಸೇರಿ ಹೊಸ ಉಗ್ರಸಂಘಟನೆ ಕಟ್ಟಲು ಹಖ್ಖಾನಿ ಸಂಚು?

ವಾಷಿಂಗ್ಟನ್: ಪಾಕಿಸ್ತಾನದ ಉತ್ತರ ವಜಿರಿಸ್ತಾನದಲ್ಲಿ ಮುಖ್ಯನೆಲೆ ಹೊಂದಿರುವ ಹಖ್ಖಾನಿ ನೆಟ್‌ವರ್ಕ್, ಅಲ್‌ಖೈದಾದೊಂದಿಗೆ ಸೇರಿಕೊಂಡು ಹೊಸ ಉಗ್ರ ಸಂಘಟನೆ ಕಟ್ಟಲು ಹೊರಟಿದೆ ಎಂದು ಅಮೆರಿಕದ ವಿತ್ತ ಸಚಿವಾಲಯ ಹೇಳಿದೆ.
ಕಳೆದವರ್ಷ ಮಾರ್ಚ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಸಿಖ್ಖರ ಹತ್ಯೆಯಾಗಲು ಹಖ್ಖಾನಿ ಕಾರಣ. ಅಷ್ಟು ಮಾತ್ರವಲ್ಲ ಅಲ್ಲಿನ ತಾಲಿಬಾನ್ ಉಗ್ರ ಸಂಘಟನೆ ಕೂಡಾ, ಅಲ್‌ಖೈದಾ ಜೊತೆಗೆ ಸಂಬಂಧ ಮುಂದುವರಿಸಿದೆ.
ತಾಲಿಬಾನ್ ಸಂಘಟನೆ, ಭಯೋತ್ಪಾದನೆಯನ್ನು ನಿಲ್ಲಿಸುತ್ತೇವೆಂದು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ ಒಳಗೊಳಗೇ ತನ್ನ ಚಟುವಟಿಕೆ ಮುಂದುವರಿಸಿದೆ ಎಂದು ಸಚಿವಾಲಯ ಹೇಳಿದೆ.
Haqqani Network
ಹಖ್ಖಾನಿ ಉಗ್ರ ಸಂಘಟನೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎ ಸ್‌ಐನ ಬಲಗೈ ಬಂಟನಿದ್ದಂತೆ. ಹಖ್ಖಾನಿ, ಲಷ್ಕರ್ ಜೊತೆ ಸೇರಿಕೊಂಡು ಕಳೆದ ವರ್ಷ ಮಾರ್ಚ್‌ನಲ್ಲಿ ಕಾಬೂನ್‌ನಲ್ಲಿನ ಸಿಖ್ ಮಂದಿರದ ಮೇಲೆ ದಾಳಿ ಎಸಗಿತ್ತು. ಪರಿಣಾಮ 30 ಸಿಖ್ಖರು ದುರ್ಮರಣ ಹೊಂದಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
related stories
-
ಬೆಂಗಳೂರು ಹೊಸದಾಗಿ 48 ಕಡೆ ಪಾಸ್ ಕೌಂಟರ್
-
ಸಮಸ್ತ-ಕರ್ನಾಟಕ ಕಾಲುವೆಯಲ್ಲಿ ಕಾದು ಕುಳಿತ್ತಿದ್ದ ಜವರಾಯ, ಆಟವಾಡುತ್ತಲೇ ಪ್ರಾಣ ಬಿಟ್ಟ ಮಕ್ಕಳು!
-
ಪ್ರಮುಖ ಸುದ್ದಿ ಮತ್ತೆ ಸಿನಿಮಾ ಮಾಡಲು ರೆಡಿಯಾದ ನಟಿ ರಾಗಿಣಿ