Dailyhunt Logo
  • Light mode
    Follow system
    Dark mode
    • Play Story
    • App Story
ಅನಾರೋಗ್ಯದಿಂದ ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹ ಸಾವು

ಅನಾರೋಗ್ಯದಿಂದ ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹ ಸಾವು

ನವದೆಹಲಿ: ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹವೊಂದು ಮೃತಪಟ್ಟಿದೆ. ಅಲ್ಲಿಗೆ ಇಲ್ಲಿ ಕೇವಲ 2 ಸಿಂಹಗಳು ಉಳಿದುಕೊಂಡಂತಾಗಿದೆ.

ಮಾರ್ಚ್‌ ತಿಂಗಳಿಂದಲೇ ಅಮನ್‌ ಹೆಸರಿನ ಸಿಂಹಕ್ಕೆ ಹಲವು ಅನಾರೋಗ್ಯಗಳಿರುವುದು ಪತ್ತೆಯಾಗಿತ್ತು. ಆದ್ದರಿಂದ ಅದನ್ನು ತೀವ್ರ ಪರೀಕ್ಷೆಯಲ್ಲೇ ಇಡಲಾಗಿತ್ತು. ಆದರೂ ಭಾನುವಾರ ಅದು ಮೃತಪಟ್ಟಿದೆ.

ಸಿಂಹಕ್ಕೆ ಕೊರೊನಾ ಇರಲಿಲ್ಲವೆನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತಾಗಿದೆ. 2014ರಲ್ಲಿ ಚಂಡೀಗಢದಲ್ಲಿ ಹುಟ್ಟಿದ ಅಮನ್‌, 2015ರಲ್ಲಿ ದೆಹಲಿಗೆ ಸ್ಥಳಾಂತರಗೊಂಡಿತ್ತು.

ಇದನ್ನೂ ಓದಿ :ಪಂಜಾಬ್ ನಲ್ಲಿ ಕಾಂಗ್ರೆಸ್ ಬದಲಾಗಿ ಬಾದಲ್ ರಿಂದ ಆಡಳಿತ : ನವಜೋತ್‌ ಸಿಂಗ್‌ ಸಿಧು ಆರೋಪ

Dailyhunt
Disclaimer: This content has not been generated, created or edited by Dailyhunt. Publisher: Udayavani