ಅರಂತೋಡು: ಆಲೆಟ್ಟಿ ಗ್ರಾಮದ ಕುದ್ಕುಳಿಯ ನಿವಾಸಿ ಗಿರೀಶ್ ಎಂಬವರು ಕಳೆದೆರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಆ.30 ರ ರವಿವಾರ ಪಯಸ್ವಿನಿ ನದಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.
ಮನೆಯಿಂದ ಹುಲ್ಲು ತರಲೆಂದು ಹೋದ ಗಿರೀಶ್ ನಾಪತ್ತೆಯಾಗಿದ್ದರು.
ಪಯಸ್ವಿನಿ ನದಿ ತಡದಲ್ಲಿ ಅವರ ಕೊಡೆ (ಛತ್ರಿ) ಮತ್ತು ಕತ್ತಿ ಪತ್ತೆಯಾಗಿತ್ತು.ಬಳಿಕ ಪೊಲೀಸರಿಗೆ ನಾಪತ್ತೆ ಆಗಿರುವ ಬಗ್ಗೆ ದೂರು ನೀಡಲಾಗಿತ್ತು.
ಸುಳ್ಯ ಪೋಲಿಸ್ ಇಲಾಖೆಯ ನೇತೃತ್ವದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಳೆದ 2 ದಿನಗಳಿಂದ ಹುಡುಕಾಟದಲ್ಲಿ ನಿರತರಾಗಿದ್ದರು.
ಇಂದು ಬೆಳಗ್ಗೆ ಹುಡುಕಾಟ ನಡೆಸುವ ಸಂದರ್ಭದಲ್ಲಿ ಗಿರೀಶ್ ಅವರ ಮೃತದೇಹ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

